National News: ಗರ್ಲ್‌ಫ್ರೆಂಡ್ ಬಗ್ಗೆ ಅಶ್ಲೀಲವಾಗಿ ಮಾತನಾಡಿ ಕೆಲಸ ಕಳೆದುಕೊಂಡ ಯುವಕ

National News: ಪ್ರಣೀತ್ ಮೋರೆ ಎಂಬ ಕಾಮಿಡಿಯನ್ ನಡೆಸುತ್ತಿದ್ದ ಸ್ಟ್ಯಾಂಡಪ್ ಕಾಮಿಡಿ ಶೋನಲ್ಲಿ, ಓರ್ವ ಯುವಕ ತನ್ನ ಗರ್ಲ್‌ಫ್ರೆಂಡ್ ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿ, ತನ್ನ ಕೆಲಸ ಕಳೆದುಕ“ಂಡಿದ್ದಾರೆ. ಅಲ್ಲದೇ, ಆತ ಮಾತನಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣವೇ, ಜನ ಈತನಿಗೆ ಇನ್ನೆಲ್ಲಿಯೂ ಕೆಲಸ ಸಿಗಕೂಡದು ಎಂದಿದ್ದಾರೆ. ಈ ಹೇಳಿಕೆ ನೀಡಿದ ವ್ಯಕ್ತಿ ಮತ್ತು ಪ್ರಣೀತ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಆಗಿದ್ದೇನು..?

ಪ್ರಣೀತ್ ನಡೆಸುತ್ತಿದ್ದ ಕಾಮಿಡಿ ಶೋ 1 ರಲ್ಲಿ ಬರೀ ಪುರುಷರಿಗೆ ಮಾತ್ರ ಅವಕಾಶವಿತ್ತು. ಈ ಕಾಮಿಡಿ ಕಾರ್ಯಕ್ರಮ ನಡೆಯುವಾಗ, ಗುರ್ಗಾಂವ್ ಮೂಲದವನಾದ ಹಿಮಾಂಶು ಜಾಂಗ್ರಾ ಎಂಬಾತನೇ ತನ್ನ ಗರ್ಲ್‌ಫ್ರೆಂಡ್‌ಗೆ ಬೆಲೆ ಕಟ್ಟಿ ಮಾತನಾಡಿದ್ದಾನೆ.

ನನ್ನ ಗರ್ಲ್‌ಫ್ರೆಂಡ್‌ಗೆ ಬಿರಿಯಾನಿ ತಿನ್ನುವ ಆಸೆ ಆಯಿತೆಂದು, ನಾನು 370 ರೂಪಾಯಿ ಬಿರಿಯಾನಿ ತಿನ್ನಿಸಿದ್ದೆ. ಬಳಿಕ ಆಕೆ ಅದನ್ನು ಚೆನ್ನಾಗಿ ತಿಂದು, ಮನೆಗೆ ಡ್ರಾಪ್ ಮಾಡು ಎಂದಳು. ಆದರೆ ನನಗನ್ನಿಸಿದ್ದು, ನಾನು ಆಕೆಗೆ 370 ರೂಪಾಯಿ ಬಿರಿಯಾನಿ ತಿನ್ನಿಸಿದ್ದೇನೆ. ಅದರ ಬದಲಾಗಿ ಏನೂ ಪಡೆಯದೇ ನಾನು ಆಕೆಯನ್ನು ಹೇಗೆ ಕಳುಹಿಸಲಿ..?

ಹಾಗಾಗಿ ನಾನು ಆ 370 ರೂಪಾಯಿಯನ್ನು ಆಕೆಯ ಜತೆ ದೈಹಿಕ ಸಂಬಂಧದಿಂದ ವಸೂಲಿ ಮಾಡುತ್ತೇನೆಂದು ನಿರ್ಧರಿಸಿದೆ. ಆಕೆ ನನಗೆ ಕಿಸ್ ಮಾಡಿದ್ಲು. ಅಲ್ಲದೇ 12 ರೂಪಾಯಿ ವಸೂಲಿ ಆಯ್ತು. ಆಮೆಲೆ ನಾನು ಆಕೆಯ ಅಂಗಾಂಗ ಸ್ಪರ್ಶಿಸಿದೆ ಎಂದು ತಾನು ಮಾಡಿದ ಘನಂದಾರಿ ಕೆಲಸವನ್ನೆಲ್ಲ ಈತ ಆ ವೀಡಿಯೋದಲ್ಲಿ ಹೇಳಿದ್ದಾನೆ.

ವಿಪರ್ಯಾಸದ ವಿಷಯ ಅಂದ್ರೆ ಅಲ್ಲಿ ಕಾರ್ಯಕ್ರಮ ನಡೆಸುತ್ತಿದ್ದ ಪ್ರಣೀತ್ ಸೇರಿ ಎಲ್ಲ ಪುರುಷರು ಇವನ ಅಶ್ಲೀಲ ಕಾಮಿಡಿಗೆ ಬಿದ್ದು ಬಿದ್ದು ನಕ್ಕಿದ್ದಾರೆ. ಹಾಗಾಗಿ ಇವರೆಲ್ಲ ಭವಿಷ್ಯದ ರೆಪಿಸ್ಟ್‌ಗಳು. 1 ಹೆಣ್ಣಿಗೆ ಈತ ಬೆಲೆ ಕಟ್ಟಿ ಮಾತನಾಡುವಾಗ ಅಲ್ಲಿದ್ದವರು ಅದನ್ನು ವಿರೋಧಿಸಬಹುದಿತ್ತು

. ಪ್ರಣೀತ್ ಖುದ್ದಾಗಿ ವಿರೋಧಿಸಬಹುದಿತ್ತು. ಆದರೆ ಆತನಿಗೆ ಅಲ್ಲಿ ಹೆಣ್ಣಿನ ಮಾನಕ್ಕಿಂತ, ಕಾರ್ಯಕ್ರಮಕ್ಕೆ ಸಿಗುವ ವೀವ್, ಕಾಮೆಂಟ್, ಲೈಕ್ಸ್, ಹಣ ಇದೇ ಮುಖ್ಯವಾಗಿತ್ತು ಎಂದು ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಹಿಮಾಂಶು ಕೆಲಸ ಮಾಡುತ್ತಿದ್ದ ಕಚೇರಿಯವರು ಆತನ ಈ ವೀಡಿಯೋ ನೋಡಿ, ಕೆಲಸದಿಂದ ಕಿತ್ತು ಹಾಕಿದ್ದಾರೆ. ಅಲ್ಲದೇ, ಈತನಿಗೆ ಎಲ್ಲಿಯೂ ಕೆಲಸ ಸಿಗದಂತೆ ಮಾಡಬೇಕು. ಇವರನ್ನೆಲ್ಲ ಜೈಲಿಗೆ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದೆ.

About The Author