ಕೊರೋನಾ ಲಾಕ್ ಡೌನ್ ಎಲ್ಲದಕ್ಕೂ ಬ್ರೇಕ್ ಹಾಕಿತ್ತು. ಎಲ್ಲಾ ವಲಯಗಳಿಗೂ ಸಹಿಸಿಕೊಳ್ಳಲಾಗದ ಪೆಟ್ಟು ಕೊಟ್ಟಿದೆ. ಇದಕ್ಕೆ ಸಿನಿಮಾ ಇಂಡಸ್ಟ್ರೀ ಏನೂ ಹೊರತಲ್ಲ. ಲಾಕ್ ಡೌನ್, ಸೀಲ್ ಡೌನ್ ಬಳಿಕ ಸಿನಿಮಾ ರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಬಟ್ ಸ್ಟಾರ್ ಹೀರೋ ಬರ್ತ್ ಡೇಗೆ ಆಚರಣೆಗೆ ಇನ್ನೂ ಬ್ರೇಕ್ ಬಿದ್ದಿದೆ. ಈ ಬಾರಿ ಸುದೀಪ್, ಪುನೀತ್ ಸೇರಿದಂತೆ ಹಲವು ನಟರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಇದೀಗ ಈ ಪಟ್ಟಿಗೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಸೇರಿಕೊಂಡಿದ್ದಾರೆ. ಹೌದು, ನಾಳೆ ಶ್ರೀಮುರುಳಿಯವರ ಹುಟ್ಟುಹಬ್ಬ. ತಮ್ಮ ನೆಚ್ಚಿನ ನಾಯಕನ ಬರ್ತ್ ಡೇ ಅಂದ್ರೆ ಅಭಿಮಾನಿಗಳು ಮನೆ ಮುಂದೆ ಜಮಾಯಿಸೋದು. ಕೇಕ್, ಹಾರ, ಕಟೌಟ್ ನಿಲಿಸುವುದು ಕಾಮನ್. ಆದ್ರೆ ಈ ಬಾರಿ ಕೊರೋನಾ ಕಾರಣದಿಂದ ಶ್ರೀಮುರುಳಿ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಹೀಗಾಗಿ ಯಾರು ಮನೆ ಬಳಿ ಬರಬೇಡಿ. ಕೇಕ್, ಹಾರ, ಗಿಫ್ಟ್ ಅಂತಾ ಖರ್ಚು ಮಾಡುವ ಬದಲು ಅದೇ ಹಣದಿಂದ ಹಸಿದವರಿಗೆ ಅನ್ನದಾತ ಮಾಡಿ ಎಂದು ಸೋಷಿಯಲ್ ಮೀಡಿಯಾದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಶ್ರೀಮುರುಳಿ ಹುಟ್ಟುಹಬ್ಬ ಸ್ಪೆಷಲ್ ಆಗಿ ನಿರ್ದೇಶಕ ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಮದಗಜ ಚಿತ್ರದ ಟೀಸರ್ ರಿಲೀಸ್ ಆಗ್ತಿದೆ. ಇದರ ಜೊತೆ ರೋರಿಂಗ್ ಸ್ಟಾರ್ ಮುಂದಿನ ಸಿನಿಮಾದ ಮೆಗಾ ಅಪ್ ಡೇಟ್ ಕೂಡ ರಿವೀಲ್ ಆಗಲಿದೆಯಂತೆ.
-ಮೇಘ