Tuesday, May 28, 2024

Latest Posts

ಮತದಾರರಿಗೆ ಹಂಚಲು ತಂದಿದ್ದ 18 ಕೋಟಿ ರೂಪಾಯಿ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಚುನಾವಣಾ ಕ್ಷಿಪ್ರ ಕಾರ್ಯಾಚರಣೆ ನಡೆದಿದ್ದು, ಮದ್ಯ ಸಂಗ್ರಹ ಇದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಆದರೆ ಮದ್ಯ ಹುಡುಕಾಟ ಮಾಡುವ ವೇಳೆ ಟ್ರೆಝರಿಯಲ್ಲಿ ಹಣ ಪತ್ತೆಯಾಗಿದೆ. ಮೂರು ಟ್ರೆಝರಿಯಲ್ಲಿ 18 ಕೋಟಿ ಹಣ ಪತ್ತೆಯಾಗಿದ್ದು, ಹಣವನ್ನು ಜಪ್ತಿ ಮಾಡಲಾಗಿದೆ. ಜೋಶಿ ಎಂಬುವವರಿಗೆ ಸೇರಿದ ಅಪಾರ್ಟ್‌ಮೆಂಟ್‌ಗೆ ದಾಳಿ ಮಾಡಿದ ಪೊಲೀಸರು, ಮದ್ಯವಿದೆ ಎಂದು ಮನೆಯಲ್ಲಿದ್ದ ಚೀಲಗಳನ್ನು ಹುಡುಕುತ್ತದಿದ್ದರು. ಆದರೆ ಚೀಲದಲ್ಲಿ ಏನೂ ಸಿಗದಿದ್ದಾಗ, ಟ್ರೆಝರಿಯಲ್ಲಿ ಹುಡುಕಾಟ ನಡೆಸಿದಾಗ, ದುಡ್ಡು ಸಿಕ್ಕಿದೆ.

ಜೋಶಿ ಎಂಬುವರಿಗೆ ಈ ಅಪಾರ್‌ಟ್‌ಮೆಂಟ್ ಸೇರಿದ್ದರೂ ಕೂಡ, ಕೆಲದ ಕೆಲ ತಿಂಗಳಿನಿಂದ ಬಸವರಾಜ್ ಎಂಬುವವರು ಈ ಜಾಗವನ್ನು ಆಫೀಸು ಮಾಡಿಕೊಂಡು, ಬಾಡಿಗೆಗೆ ಇದ್ದರು. ಈ ಬಸವರಾಜ್ ಎಂಬುವವರಿಂದ ಪೊಲೀಸರು ಎಲ್ಲ ಮಾಹಿತಿಯನ್ನು ಸಂಗ್ರಹಿಸಿದ್ದು, 18 ಕೋಟಿ ಹಣವನ್ನು 18 ಬ್ಯಾಗ್‌ಗಳಲ್ಲಿ ಸಂಗ್ರಹಿಸಿ ಇಡಲಾಗಿತ್ತು. ತಲಾ 1 ಕೋಟಿಯಂತೆ 18 ಬ್ಯಾಗ್‌ನಲ್ಲಿ ಹಣ ಇರಿಸಲಾಗಿತ್ತು.

ಮಾಹಿತಿ ಪ್ರಕಾರ, ಇವೆಲ್ಲವೂ ಮತದಾರರಿಗೆ ಹಂಚಲು ತಂದಿರುವ ಹಣ ಎನ್ನಲಾಗಿದೆ. ಇನ್ನು ಈ ಬಸವರಾಜ್ ಯಾಾರೆಂದರೆ, ಕಾಂಗ್ರೆಸ್ ಮುಖಂಡ ಯ.ಬಿ.ಶೆಟ್ಟಿ ಎಂಬುವರ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಸಿಕ್ಕ ಹಣವನ್ನು ಐಟಿ ಅಧಿಕಾರಿಗಳು ಮತ್ತು ಚುನಾವಣಾ ಸಿಬ್ಬಂದಿಗಳು ಸೀಜ್ ಮಾಡಿ, ಪ್ಯಾಕ್ ಮಾಡಿದ್ದಾರೆ.

ಮೆರವಣಿಗೆ ಮೂಲಕ ಕಾಂಗ್ರೆಸ್ ಶಕ್ತಿಪ್ರದರ್ಶನ: ನಾಮಪತ್ರ ಸಲ್ಲಿಸಿದ ವಿನೋದ್ ಅಸೂಟಿ

ಜೋಶಿ ಅವರು ಬರೀ ಕಥೆ ಕಟ್ಟುತ್ತಾರೆ. ಬೇರೆಯವರ ಹೆಗಲ ಮೆಲೆ ಬಂದೂಕು ಇಟ್ಟು ಹೊಡೆಯುತ್ತಾರೆ: ಲಾಡ್

ಮೋದಿ‌ ಸ್ವರ್ಗ ತೋರಿಸುತ್ತೇನೆ ಎಂದು ನರಕ ತೋರಿಸಿದ್ದಾರೆ: ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್

- Advertisement -

Latest Posts

Don't Miss