Thursday, May 30, 2024

Latest Posts

ಜೋಶಿ ಅವರು ಬರೀ ಕಥೆ ಕಟ್ಟುತ್ತಾರೆ. ಬೇರೆಯವರ ಹೆಗಲ ಮೆಲೆ ಬಂದೂಕು ಇಟ್ಟು ಹೊಡೆಯುತ್ತಾರೆ: ಲಾಡ್

- Advertisement -

Dharwad News: ಧಾರವಾಡ: ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಸಚಿವ ಸಂತೋಷ್ ಲಾಡ್ ಕೂಡ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಜೋಶಿ ಅವರು ಯಾರ ಮುಖ ನೋಡಿ ಮತ ಕೇಳ್ತಾರೆ ಕ್ಷೇತ್ರದಲ್ಲಿ..? ನಮ್ಮ ಅಭ್ಯರ್ಥಿನೆ ಬೆಟರ್, ಯವಕ ಕಾಂಗ್ರೆಸ್ ಸಿಂಬಾಲ್ ಮೆಲೆ ಮತ ಕೇಳುತ್ತಿದ್ದಾನೆ. ಜೋಶಿ ಅವರು ಅಡ್ವಾಣಿ , ಬಿಜೆಪಿ ಸಿಂಬಾಲ್ ಮರೆತಿದ್ದಾರೆ. ಒಂದೆ ಓಟಿನಿಂದಾದ್ರೂ ಈ ಬಾರಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಜೋಶಿ ಅವರು ಸರ್ವೆ ಬಗ್ಗೆ ಮಾತನಾಡುತ್ತಾರೆ. 10 ವರ್ಷದಲ್ಲಿ ಬಿಜೆಪಿ ಎನ್ ಮಾಡಿದೆ. ಸಂಸದರು ಮಾತನಾಡೋದು ಸರಿ ಇಲ್ಲ. ಬಡತನ ನಿರ್ಮೂಲನೆ, ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡಬೇಕು ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಕ್ಷೇತ್ರದಲ್ಲಿ ಸಚಿವರುಗಳು ಲೀಡ್ ಕೊಡಲಿಲ್ಲ ಅಂದರೆ ಸಚಿವ ಸ್ಥಾನ ಬಿಟ್ಟು ಕೊಡುವ ವಿಚಾರದ ಬಗ್ಗೆ ಮಾತನಾಡಿರುವ ಸಂತೋಷ್ ಲಾಡ್, ನಾನು ಸದ್ಯ ಪ್ರತಿಕ್ರಿಯೆ ಕೊಡಲ್ಲ, ಅವರ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಜೋಶಿ ಅವರು ಬರಿ ಕಥೆ ಕಟ್ಟುತ್ತಾರೆ. ಬೇರೆಯವರ ಹೆಗಲ ಮೆಲೆ ಬಂದೂಕು ಇಟ್ಟು ಹೊಡೆಯುತ್ತಾರೆ. 26 ಕೋಟಿ ನರೆಗಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂಲಭೂತ ವಿಷಯ ಬಗ್ಗೆ ಮಾತನಾಡಲಿ ಅದಕ್ಕೆ ಉತ್ತರ ಕೊಡುತ್ತೇವೆ ಎಂದಿದ್ದಾರೆ.

ಹೆಣ್ಣು ಮಕ್ಕಳು ಹುಟ್ಟಿದರೆ ಅದು ಗ‌್ಯಾರಂಟಿ ಯೋಜನೆಯ ಮುಖಾಂತರ ಹುಟ್ಟಿದೆ ಎಂದು ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ಗ‌್ಯಾರಂಟಿ ಯೋಜನೆಗಳನ್ನ ಕೊಟ್ಟಿದ್ದೆವೆ, ಇದನ್ನ‌ ಟಿಕೆ ಮಾಡೋದು ಬಿಡಬೇಕು ಜೋಶಿ ಅವರು, ನಾವು ಯಾವತ್ತು ಕೇಳಿಲ್ಲ , ನೀವು ಎನ್ ಮಾಡಿದ್ದೀರಿ. ಗ‌್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದು ಸರಿ ಅಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಈ ಮೊದಲು ನನಗೆ ಇಷ್ಟೆಲ್ಲ ಜನರ ಬೆಂಬಲ ಸಿಕ್ಕಿರಲೇ ಇಲ್ಲ: ಜಗದೀಶ್ ಶೆಟ್ಟರ್

ನಮ್ಮಲ್ಲಿ ಬಿಕ್ಕಟ್ಟಿಲ್ಲ, ನಮ್ಮಲ್ಲಿ ಒಗ್ಗಟ್ಟಿದೆ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಕುಮಾರಸ್ವಾಮಿ ಸಚಿವರಾದರೆ ಅಸ್ತಿತ್ವವೇ ಇರುವುದಿಲ್ಲವೆಂಬ ಭಯ ಡಿಕೆಶಿಗೆ ಕಾಡುತ್ತಿದೆ: ವಿಜಯೇಂದ್ರ

- Advertisement -

Latest Posts

Don't Miss