Sunday, April 20, 2025

Latest Posts

ಮಾರಿಷಿಯಸ್‌ನಲ್ಲಿ ರಾಮಮಂದಿರ ಉದ್ಘಾಟನೆ ದಿನ ಹಿಂದೂಗಳಿಗೆ ಪ್ರಾರ್ಥನೆಗಾಗಿ 2 ಗಂಟೆ ವಿಶೇಷ ವಿಶ್ರಾಂತಿ

- Advertisement -

International News: ಜನವರಿ 22ಕ್ಕೆ ಅಯೋಧ್ಯಾ ರಾಮಮಂದಿರ ಉದ್ಘಾಟನೆ ನಡೆಯಲಿದ್ದು, ಬರೀ ಭಾರತದಲ್ಲಷ್ಟೇ ಅಲ್ಲ, ಈಗ ಪ್ರಪಂಚದಾದ್ಯಂತ ಎಲ್ಲೆಲ್ಲೂ ರಾಮಂದೇ ಸುದ್ದಿ. ಮಾರಿಷಿಯಸ್‌ನಲ್ಲಿ ಹಿಂದೂ ಅಧಿಕಾರಿಗಳಿಗೆ, ಜ.22ರಂದು ರಾಮಮಂದಿರ ಉದ್ಘಾಟನೆ ವಿಶೇಷವಾಗಿ 2 ಗಂಟೆಯ ವಿಶ್ರಾಂತಿ ಕೂಡ ನೀಡಲಾಗಿದೆ.

ಉದ್ಘಾಟನೆ ವೇಳೆ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು 2 ಗಂಟೆ ಕೆಲಸದ ವಿಶ್ರಾಂತಿ ನೀಡಲಾಗುತ್ತಿದೆ. ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಸೇರಿ, ರಾಮಲಲ್ಲಾ ಪ್ರಾಣಪ್ರತಿಷ್ಛೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಇದರ ನೇರಪ್ರಸಾರವಾಗಲಿದೆ. ಈ ವೇಳೆ ಪ್ರಾಣಪ್ರತಿಷ್ಠೆಯಾಗುವ ಸಮಯದಲ್ಲಿ 2 ಗಂಟೆಗಳ ಕಾಲ, ಆ ಸಮಾರಂಭವನ್ನು ನೋಡಿ, ರಾಮನನ್ನು ಪ್ರಾರ್ಥಿಸಲು ಹಿಂದೂಗಳಿಗೆ, ಮಾರಿಷಿಯಸ್ ಸರ್ಕಾರ ರಜೆ ಘೋಷಿಸಿದೆ.

ಬರೀ ಭಾರತ, ನೇಪಾಳದಲ್ಲಿ ಅಷ್ಟೇ ಅಲ್ಲದೇ, ಮಾರಿಷಿಯಸ್ ನಲ್‌ಲೂ ಹಿಂದೂಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಇಲ್ಲಿ ಹಿಂದುತ್ವಕ್ಕೆ ಬೆಲೆ ಕೊಡಲಾಗುತ್ತದೆ. ಅಲ್ಲದೇ ಆಫ್ರಿಕಾ ದೇಶದಲ್ಲಿ ಅತಿಹೆಚ್ಚು ಹಿಂದೂ ಧರ್ಮದವರು ಇರುವ ಸ್ಥಳ ಅಂದ್ರೆ ಮಾರಿಷಿಯಸ್. ಅಲ್ಲಿ ಹೆಚ್ಚಾಗಿ ಭಾರತೀಯ ಹಿಂದೂಗಳೇ ಹೆಚ್ಚಾಗಿದ್ದಾರೆ. ಹಾಗಾಗಿ ಈ ಬಾರಿ ರಾಮಮಂದಿರ ಉದ್ಘಾಟನೆಯ ದಿನ ಪ್ರಾರ್ಥನೆಗಾಗಿ ಹಿಂದೂ ಅಧಿಕಾರಿಗಳಿಗೆ 2 ಗಂಟೆ ವಿಶೇಷ ವಿಶ್ರಾಂತಿ ನೀಡಲಾಗುತ್ತಿದೆ.

ಎಕ್ಸ್ ಸಂಸ್ಥೆಯ ಸುರಕ್ಷತಾ ವಿಭಾಗದಿಂದ 1ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್

ಶವವಾಗಿ ಪತ್ತೆಯಾದ ಪೋರ್ನ್ ಸ್ಟಾರ್ ಥೈನಾ..

ಏರ್ ಇಂಡಿಯಾ ವೆಜ್ ಊಟದಲ್ಲಿ ಚಿಕನ್ ಪೀಸ್ ಪ್ರತ್ಯಕ್ಷ..

- Advertisement -

Latest Posts

Don't Miss