ಶಿವಮೊಗ್ಗದ ರಾಜಕೀಯ ಧೃವೀಕರಣಗೊಂಡಿದೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿರುವ ವೇಳೆ ಡಾ.ಧನಂಜಯ ಸರ್ಜಿ ಮತ್ತು ಕೆ.ಎಸ್.ಪ್ರಶಾಂತ್ ಬಿಜೆಪಿಗೆ ಸೇರ್ಪಡೆಗೊಂಡ ಕಾರಣ ಪಕ್ಷಕ್ಕೆ ಇನ್ನೂ ಬಲಬಂದಿದೆ.
ಜನ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಮತ್ತು ಸಾಗರದ ಕೆ.ಎಸ್.ಪ್ರಶಾಂತ್ ನಿರೀಕ್ಷೆಯಂತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸಂಸದ ಬಿ.ವೈ ರಾಘವೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್, ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ್ ಆಯನೂರು ಮಂಜುನಾಥ್, ಡಿ.ಎಸ್.ಅರುಣ್ ರುದ್ರೇಗೌಡ, ಮೊದಲಾದವರ ನೇತೃತ್ವದಲ್ಲಿ ಡಾ.ಸರ್ಜಿ ಮತ್ತು ಪ್ರಶಾಂತ್ ಸೇರಿದಂತೆ 15 ಜನ ಸೇರ್ಪಡೆಗೊಂಡಿದ್ದಾರೆ.
ತಮಿಳಿಗೆ ಹೊಂಬಾಳೆ ಫಿಲಂಸ್; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘುತಥಾ’ ಚಿತ್ರದ ನಿರ್ಮಾಣ
ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ರಾಜಕೀಯ ಧೃವೀಕರಣವಾಗ್ತಿದೆ. ಇದು ನಿಂತನೀರಲ್ಲ. ಕಾರ್ಯಕರ್ತರು ಕಳೆದ ಐದು ವರ್ಷದಿಂದ ಶ್ರಮ ವಹುಸುತ್ತಿದ್ದಾರೆ. ಇಂದು ಪ್ರಶಾಂತ್, ಡಾ.ಸರ್ಜಿ ಮತ್ತು ಇತರೆ 15 ಜನರ ಸೇರ್ಪಡೆ ಅರ್ಥ ಪಡೆದಿದೆ ಎಂದರು.