ಭಾರತದ 2021-22 ರಲ್ಲಿ ಆರ್ಥಿಕತೆಯು ಶೇ.9.2 ಕ್ಕೆ ಬೆಳೆಯಲಿದೆ ಎಂದು ಸರ್ಕಾರದ ದತ್ತಾಂಶಗಳು ಅಂದಾಜಿಸಿವೆ. ಇದು ಕೋವಿಡ್ ಪೂರ್ವ ಮಟ್ಟದಲ್ಲಿ ಚೇತರಿಕೆಯನ್ನು ಕಂಡಿದೆ. ಮುಖ್ಯವಾಗಿ ಕೃಷಿ,ಗಣಿಗಾರಿಕೆ ಮತ್ತು ಉತ್ಪಾದನಾ ವಲಯಗಳಲ್ಲಿ ಸುಧಾರಿತ ಕಾರ್ಯಕ್ಷಮತೆಯ ಕಾರಣದಿಂದ 2020-21 ರ ಅವಧಿಯಲ್ಲಿ 7.3% ಜಿಡಿಪಿ ಸಂಕೋಚನದ ಮೇಲೆ ಆರ್ಥಿಕತೆಯ ಸುಧಾರಣೆ ಬಂದಿದೆ.
ರಾಷ್ಟ್ರೀಯ ಸಾಂಖ್ಯಿಕ ಕಚೇರಿ (N s o) ಶುಕ್ರವಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಆದಾಯದ ಮೊದಲ ಸುಧಾರಿತ ಅಂದಾಜಿನ ಪ್ರಕಾರ ವಲಯಗಳಾದ್ಯಂತ ಬೆಳವಣಿಗೆಗೆ ಸಾಕ್ಷಿಯಾಗಿದೆ. ಭಾರತ ಅಂದಾಜಿನ ಪ್ರಕಾರ 2022 ರ ವೇಳೆಯಲ್ಲಿ ಆರ್ಥಿಕತೆಯಲ್ಲಿ ಮುಂಚೂಣಿಯನ್ನು ಸಾಧಿಬಹುದು ಎಂದಿದ್ದಾರೆ.




