2025 Horoscope: ಈ ರಾಶಿಯವರಿಗೆ ಶನಿ ಕಾಟ ಮುಗಿಯಿತು, ಇನ್ನೇನಿದ್ರೂ ರಾಜಯೋಗ

 

Horoscope: 2025ನೇ ಇಸವಿ ಶುರುವಾಗಲು ಇನ್ನು ಎರಡೇ ದಿನ ಬಾಕಿ ಉಂಟು. 2025ನೇ ವರ್ಷ ನನಗೆ ಎಷ್ಟು ಲಕ್ಕಿ, ಎಷ್ಟು ಅನ್‌ಲಕ್ಕಿ ಎಂದು ತಿಳಿದುಕೊಳ್ಳುವ ಕುತೂಹಲ ಹಲವರಿಗೆ ಇರುತ್ತದೆ. ಹಾಗಾಗಿ ಕರ್ನಾಟಕ ಟಿವಿಯಲ್ಲಿ ಜ್ಯೋತಿಷಿಗಳು, ಸಂಸ್ಕತ ವಿದ್ವಾನರೂ ಆದ ಶ್ರೀ ವೇಣುಗೋಪಾಲ್ ಶರ್ಮಾ ಅವರು ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ.

ಮೇಷ: ಈ ವರ್ಷ ಭೂಮಿ ವಿಚಾರದಲ್ಲಿ ಮೇಷ ರಾಶಿಯವರು ತುಂಬಾ ಹುಷಾರಾಗಿರಬೇಕು. ಆಕಸ್ಮಾತ್ ಆಗಿ ಉದ್ಯೋಗದಲ್ಲಿ ಬದಲಾವಣೆಯಾಗಬಹುದು. ಅಥವಾ ಪ್ರಮೋಷನ್ ಕೂಡ ಸಿಗಬಹುದು. ಆದರೆ ನಿದ್ರಾಹೀನತೆ ಸಮಸ್ಯೆ ಉಂಟಾಗುವ ಎಲ್ಲ ಸಾಧ್ಯತೆ ಇದೆ. ಇನ್ನು ಈ ವರ್ಷ ಮೇಷ ರಾಶಿಯವರಿಗೆ ಸಾಡೇಸಾಥಿ ಆರಂಭವಾಗಲಿದೆ. ಆದರೆ ಹಣದ ಕೊರತೆ ಕಾಡುವುದಿಲ್ಲ. ಸಡನ್ ಆಗಿ ಪ್ರಯಾಣಿಸುವ ಸಾಧ್ಯತೆ ಇರುತ್ತದೆ.

ವೃಷಭ: ವೃಷಭ ರಾಶಿಯವರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ವೃಷಭ ರಾಶಿಯ ಮಹಿಳೆಯರು ಗರ್ಭಿಣಿಯರಾಗಿದ್ದಲ್ಲಿ, ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಹಣದ ವಿಚಾರದಲ್ಲಿ ದುಡುಕುವ ಕೆಲಸ ಮಾತ್ರ ಈ ವರ್ಷ ನೀವು ಮಾಡಬಾರದು. ಹಾಗೇನಾದರೂ ದುಡುಕಿದ್ದಲ್ಲಿ, ನೀವು ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಮಿಥುನ: ಮಿಥುನ ರಾಶಿಯವರು ಈ ವರ್ಷ ಕೋಪ ಕಡಿಮೆ ಮಾಡಿಕೊಂಡು, ತಾಳ್ಮೆಯಿಂದ ಇರುವುದು ಉತ್ತಮ. ಏಕೆಂದರೆ, ನಿಮ್ಮ ಮಾತಿನಿಂದಲೇ ನಿಮ್ಮ ಜೀವನದಲ್ಲಿ ಏರುಪೇರಾಗುವ, ನಿಮಗೆ ಬರಬೇಕಾದ ಲಾಭ ಕೈತಪ್ಪಿಹೋಗುವ ಸಾಧ್ಯತೆ ಇರುತ್ತದೆ.

ಕರ್ಕ: ಕರ್ಕಾಟಕ ರಾಶಿಯವರಿಗೆ ಉದ್ಯೋಗದಲ್ಲಿ ಒತ್ತಡಗಳು ಹೆಚ್ಚಾಗುತ್ತದೆ. ನರಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗುತ್ತದೆ. ಇನ್ನು ಕರ್ಕಾಟಕ ರಾಶಿಯವರು ಬಿಪಿ, ಶುಗರ್ ಇರುವವರು ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ.

ಉಳಿದ ರಾಶಿಗಳ ಬಗ್ಗೆ ತಿಳಿಯಲು ವೀಡಿಯೋ ನೋಡಿ.

ಗುರೂಜಿಯೊಂದಿಗೆ ಮಾತನಾಡಲು ಈ ನಂಬರ್‌ಗೆ ಸಂಪರ್ಕಿಸಿ: 9980201685

About The Author