Wednesday, July 2, 2025

Latest Posts

ಕೋಟ ಶ್ರೀನಿವಾಸ ಪೂಜಾರಿಗೆ 25 ಸಾವಿರ ರೂ. ಚುನಾವಣಾ ಠೇವಣಿ ನೀಡಿದ ಚುರುಮುರಿ ಅಂಗಡಿ ಮಾಲೀಕ

- Advertisement -

Political News: ಲೋಕಸಭೆ ಚುನಾವಣೆಗೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೋಟ ಶ್ರೀನಿವಾಸ ಪೂಜಾರಿ ಇಂದು ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿ, ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಪ್ರಚಾರ ಕಾರ್ಯದ ವೇಳೆ ಚುರುಮುರಿ ಅಂಗಡಿಯವರೊಬ್ಬರು ಕೋಟಾ ಶ್ರೀನಿವಾಸ ಪೂಜಾರಿಗೆ 25 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. ಚುನಾವಣಾ ಠೇವಣಿಗೆ ಈ ದುಡ್ಡು ನೀಡಿದ್ದು, ಟಿಕೇಟ್ ಸಿಕ್ಕಿದ್ದಕ್ಕೆ, ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಸಚಿವ ಸಿ.ಟಿ.ರವಿ, ನನ್ನೂರಿನ ಶಕ್ತಿ ಇದು. ಪಕ್ಷದ ದೇವ ದುರ್ಲಭ ಕಾರ್ಯಕರ್ತರು ನಮ್ಮೂರಿನ ಪ್ರತಿ ಮನೆಯಲ್ಲೂ ತಮ್ಮ ಶಕ್ತಿ ಮೀರಿ ಪಕ್ಷಕ್ಕೆ ತನು ಮನ ಧನದ ಧಾರೆ ಎರೆದು ಕೈಹಿಡಿಯುತ್ತಾರೆ. ಇಂದು ಉಡುಪಿ ಚಿಕ್ಕಮಗಳೂರಿನ ಲೋಕಸಭಾ ಅಭ್ಯರ್ಥಿ ಶ್ರೀ ಕೋಟ ಶ್ರೀನಿವಾಸ್ ಪೂಜಾರಿಯವರ ಚುನಾವಣಾ ಪ್ರಚಾರ ಕಾರ್ಯದಲ್ಲಿರುವಾಗ ತೇಗೂರು ಗೇಟ್ ನ ಚುರುಮುರಿ ವ್ಯಾಪಾರಿ ಶ್ರೀ ಲೋಕೇಶ್ ಅವರು ಚುನಾವಣಾ ಠೇವಣಿಗೆ ರೂಪಾಯಿ 25,000.00 ನೀಡಿ ಶುಭಾಶಯ ಕೋರಿದರು. “ದೇಶಕ್ಕೆ ಮೋದಿ – ಉಡುಪಿ ಚಿಕ್ಕಮಗಳೂರಿಗೆ ಕೋಟ” ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್’ನ್ನು ನಾವು ಶಕ್ತಿ ಹೀನಗೊಳಿಸುವ ಅಗತ್ಯವಿಲ್ಲ, ಜನರೇ ಶಕ್ತಿಹೀನಗೊಳಿಸಿದ್ದಾರೆ: ಪ್ರಹ್ಲಾದ್ ಜೋಶಿ

ಅಳೆದು ತೂಗಿ ಅಸೂಟಿಗೆ ಲೋಕಸಭೆ ಟಿಕೆಟ್ – ರಾಜಕೀಯ ಹಿನ್ನೆಲೆ

ಮೇಕೆದಾಟು ಯೋಜನೆ ಕುರಿತು ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ: ಬಸವರಾಜ ಬೊಮ್ಮಾಯಿ

- Advertisement -

Latest Posts

Don't Miss