www.karnatakatv.net : ಬೆಂಗಳೂರು : ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಹೌಸ್ ಪುಲ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನಗಳ ಭರ್ತಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಂತಸ ಮನೆಮಾಡಿದೆ. ಹೀಗಾಗಿ ಚಿತ್ರೀಕರಣ ಮುಗಿಸಿ ರಿಲೀಸ್ ಗಾಗಿ ಕಾಯುತ್ತಿದ್ದ ಕನ್ನಡದ 3 ಹೈಬಜೆಟ್ ಚಿತ್ರಗಳು ಶೀಘ್ರವೇ ತೆರೆಗೆ ಬರಲಿವೆ.
ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ – ೨ ಚಿತ್ರ ,ಅಕ್ಟೋಬರ್ 29 ರಂದು ತೆರೆಗೆ ಬರಲಿದೆ. ದುನಿಯಾ ವಿಜಯ್ ನಿರ್ದೇಶನ ಮತ್ತು ನಟನೆ ಮಾಡಿರೋ ಸಲಗ ಚಿತ್ರ ಕೂಡ ಅಕ್ಟೋಬರ್ 14 ರಂದು ತೆರೆ ಕಾಣಲಿದೆ. ಇನ್ನು ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಕೂಡ ಅಕ್ಟೋಬರ್ 14 ರಂದೆ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿದೆ ಹೀಗಾಗಿ ಒಂದೇ ತಿಂಗಳಲ್ಲೇ ಬೆಳ್ಳಿತೆರೆ ಮೇಲೆ ಸ್ಟಾರ್ ವಾರ್ ಶುರುವಾಗಲಿದೆ. ಇನ್ನು ಸಲಗ ಮತ್ತು ಕೋಟಿಗೊಬ್ಬ 3 ಒಂದೇ ದಿನ ರಿಲೀಸ್ ಆಗೋದ್ರಿಂದ ರಾಜ್ಯದಲ್ಲಿ ಸ್ಟಾರ್‌ವಾರ್ ಶುರುವಾಗುವ ಸಾಧ್ಯತೆಗಳಿವೆ.
ಮೊದಲಿಗೆ ನಿರ್ದೇಶಕರು ಚರ್ಚೆಮಾಡಿ ರಿಲೀಸ್ ಡೇಟ್ ಘೋಷಣೆ ಮಾಡುತ್ತೇವೆ ಅಂತ ಹೇಳಿದ್ರು. ಆದರೆ ಅವರಲ್ಲೇ ಗೊಂದಲ ಉಂಟಾಗಿ ಕೊನೆಗೆ ಒಂದೇ ದಿನ ರಿಲೀಸ್ ಮಾಡೋಕೆ ನಿರ್ಧರಿಸಿದ್ದಾರೆ. ಆದ್ರೆ ಇದು ಸಿನಿರಸಿಕರಲ್ಲಿ ಗೊಂದಲವುಂಟುಮಾಡಿದೆ. ಯಾಕಂದ್ರೆ ಎರಡೂ ಥ್ರಿಲ್ಲಿಂಗ್ ಸಿನಿಮಾಗಳಾಗಿರುವುದರಿಂದ ಯಾವುದನ್ನು ಮೊದಲು ನೋಡೋದು ಅನ್ನೋದು ಅಭಿಮಾನಿಗಳನ್ನ ಕನ್ಫ್ಯೂಸ್ ಮಾಡಿಸಿದೆ..
ಕರೋನಾ ಎರಡನೇ ಅಲೆ ಬಳಿಕ ರಿಲೀಸ್ ಆಗಬೇಕಿದ್ದ ಈ ಚಿತ್ರಗಳಿಗೆ 3ನೇ ಅಲೆ ಶಾಕ್ ನೀಡಿತ್ತು. ಹೀಗಾಗಿ ಸದ್ಯ ಕೊರೋನಾ ಸೋಂಕಿನ ಸಂಖ್ಯೆ ಕೂಡ ಕಮ್ಮಿಯಾಗ್ತಿದ್ದು, ಹೌಸ್ ಫುಲ್ ಪ್ರದರ್ಶನಕ್ಕೂ ಸರ್ಕಾರ ಅಸ್ತು ಎಂದಿದೆ.
ಹೀಗಾಗಿ ಕೊರೋನ ನಂತರ ಕನ್ನಡ ಚಿತ್ರರಂಗ ಮತ್ತೆ ಎಂದಿನಂತೆ ಆಕ್ಟಿವ್ ಆಗ್ತಿದೆ. ಇನ್ನು ಸಿನಿ ರಸಿಕರು ಮಾತ್ರ ತಮ್ಮ ನೆಚ್ಚಿನ ಹೀರೋಗಳ ಸಿನಿಮಾ ನೋಡೋದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ .
ಸಂಪತ್ ಶೈವ ನ್ಯೂಸ್ ಡೆಸ್ಕ್ ,ಕರ್ನಾಟಕ ಟಿವಿ – ಬೆಂಗಳೂರು