Sunday, October 13, 2024

Latest Posts

ಜೈಲಿನಲ್ಲಿ ಮಾರಾಮಾರಿ- 32 ಮಂದಿ ಸಾವು

- Advertisement -

ತಜಕಿಸ್ತಾನ: ತಜಕಿಸ್ತಾನದ ಕಾರಾಗೃಹದಲ್ಲಿ ಖೈದಿಗಳ ನಡುವೆ ಉಂಟಾದ ಮಾರಾಮಾರಿಯಲ್ಲಿ 24 ಮಂದಿ z ಐಸಿಸ್ ಉಗ್ರರು ಸೇರಿದಂತೆ 32 ಜನ ಸಾವನ್ನಪ್ಪಿದ್ದಾರೆ.

ತಜಕಿಸ್ತಾನದ ಕಾರಾಗೃಹವೊಂದರಲ್ಲಿ ಈ ಘಟನೆ ನಡೆದಿದ್ದು, ಶಿಕ್ಷೆ ಅನುಭವಿಸುತ್ತಿದ್ದ ಐಸಿಸ್ ಉಗ್ರರು ಪರಾರಿಯಾಗಲೆತ್ನಿಸಿದ್ದೇ ಈ ಮಾರಣಹೋಮಕ್ಕೆ ಕಾರಣ ಎನ್ನಲಾಗಿದೆ. ಜೈಲಿನಲ್ಲಿದ್ದ ಉಗ್ರರು ಪರಾರಿಯಾಗುವ ಸಂಚು ಹೂಡಿ ಮೊದಲಿಗೆ ಮೂರು ಮಂದಿ ಜೈಲಧಿಕಾರಿಗಳನ್ನು ಚಾಕುವಿನಿಂದ ಇರಿತು ಹತ್ಯೆ ಮಾಡಿದ್ರು. ಅಲ್ಲದೆ 5 ಮಂದಿ ಸಹ ಖೈದಿಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಇದನ್ನು ಕಂಡ ಜೈಲಧಿಕಾರಿಗಳು ಕೂಡಲೇ ಫೈರಿಂಗ್ ಮಾಡಲೆತ್ನಿಸಿದಾಗ, ಅಲ್ಲೇ ಇದ್ದ ಸಹ ಖೈದಿಗಳನ್ನೇ ಒತ್ತಾಯಾಳುಗಳನ್ನಾಗಿರಿಸಿಕೊಂಡು ಪರಾರಿಯಾಗಲೆತ್ನಿಸಿದ್ದಾರೆ. ಈ ವೇಳೆ ಕುಪಿತಗೊಂಡ ಇತರೆ ಸಹ ಖೈದಿಗಳ ಉಗ್ರರ ಮೇಲೆ ದಾಳಿ ನಡೆಸಲು ಮುಂದಾದಾಗ 5 ಮಂದಿ ಸಹ ಖೈದಿಗಳನ್ನೂ ಕೊಂದುಹಾಕಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳಿದಾಗ ಜೈಲಧಿಕಾರಿಗಳು ಫೈರಿಂಗ್ ಮಾಡಿದ ಪರಿಣಾಮ 24 ಮಂದಿ ಉಗ್ರರನ್ನು ಕೊಂದುಹಾಕಿದ್ದಾರೆ.

ಈ ಘಟನೆಯಲ್ಲಿ 24 ಮಂದಿ ಉಗ್ರರು , ಐವರು ಸಹ ಖೈದಿಗಳು ಮತ್ತು ಮೂವರು ಜೈಲಧಿಕಾರಿಗಳು ಸಾವನ್ನಪ್ಪಿದ್ದಾರೆ ಅಂತ ವರದಿಯಾಗಿದೆ.

- Advertisement -

Latest Posts

Don't Miss