Thursday, November 30, 2023

Latest Posts

ತಮಿಳುನಾಡಿನ 10 ಕಡೆ ಎನ್ಐಎ ದಾಳಿ- ಉಗ್ರ ಚಟುವಟಿಕೆ ಬಗ್ಗೆ ಪರಿಶೀಲನೆ

- Advertisement -

ತಮಿಳುನಾಡು: ಐಸಿಸ್ ಉಗ್ರ ಚಟುವಟಿಕೆ ಗರಿಗೆದರಿದೆ ಅನ್ನೋ ಮಾಹಿತಿ ಮೇರೆಗೆ ರಾಷ್ಟ್ರೀಯ ತನಿಖಾ ದಳ ತಮಿಳುನಾಡಿನ 10 ಕಡೆ ದಾಳಿ ನಡೆಸಿದೆ ಅಂತ ತಿಳಿದುಬಂದಿದೆ.

ಶ್ರೀಲಂಕಾ ಸರಣಿ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆ ವೇಳೆ ಐಸಿಸ್ ಉಗ್ರರು ಭಾರತದಲ್ಲಿ ಕಾರ್ಯಪ್ರವೃತರಾಗಿರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಇಸ್ಲಾಮಿಕ್ ಸ್ಟೇಟ್ ಉಗ್ರರು ತಮಿಳುನಾಡಿನ ನಾನಾ ಭಾಗಗಳಲ್ಲಿ ಕ್ಯಾಂಪ್ ಮಾಡಿ ಯುವಕರನ್ನು ಸೆಳೆಯಲು ಮುಂದಾಗಿದ್ದಾರೆ ಅಂತ ತಿಳಿದುಬಂದಿದೆ. ಈ ಮಾಹಿತಿ ಆಧರಿಸಿದ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ನಾಮಕ್ಕಲ್, ಮದುರೈನಲ್ಲಿ ಉಗ್ರರು ರಹಸ್ಯ ಸಭೆ ನಡೆಸಿರೋದನ್ನ ಪತ್ತೆ ಹಚ್ಚಿದೆ.

ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ವಾಸವಿರೋ ಕೇರಳಿಗರ ಮೇಲೂ ಎನ್ಐಎ ನಿಗಾ ವಹಿಸಿದ್ದು, ತೀವ್ರ ಪರಿಶೀಲನೆ ನಡೆಸುತ್ತಿದೆ.

ಇನ್ನು ರಾಮನಾಥಪುರಂ, ಸೇಲಂ, ಚಿದಂಬರಂ ಸೇರಿದಂತೆ ತಮಿಳುನಾಡಿನ ನಾನಾ ಭಾಗಗಳಲ್ಲಿ ಎನ್ ಐಎ ಅಧಿಕಾರಿಗಳು ತನಿಖೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕೊನೆ ಕ್ಷಣದಲ್ಲಿ ಯಾರಿಗೆ ದೇವೇಗೌಡರ ಸಪೋರ್ಟ್- ಎಚ್ಡಿಡಿ ಮಾಸ್ಟರ್ ಪ್ಲ್ಯಾನ್ ಏನು? ತಿಳಿದುಕೊಳ್ಳೋದಕ್ಕೆ ಈ ವಿಡಿಯೋ ತಪ್ಪದೇ ನೋಡಿ.

- Advertisement -

Latest Posts

Don't Miss