International News: ಗಾಜಾದಲ್ಲಿ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಈ ಘಟನೆ ನಡೆದಿದ್ದು, 19ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಸೇರಿ 34 ಜನರು ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 7ರಂದು ಶುರುವಾಗಿರುವ ಇಸ್ರೇಲ್ ಮತ್ತು ಗಾಜಾ ಯುದ್ಧ ಇಂದಿಗೂ ಅಂತ್ಯವಾಗಿಲ್ಲ. ಸತತ 11 ತಿಂಗಳಿಂದ ಯುದ್ಧ ನಡೆಯುತ್ತಲೇ ಇದ್ದು, ಒಂದು ವರ್ಷ ಸಮೀಪಿಸುತ್ತಿದೆ. ಯುದ್ಧದಲ್ಲಿ ಪ್ಯಾಲೇಸ್ತಿನ್ ನಾಗರಿಕರು ಲಕ್ಷಾಂತರ ಜನ ಸಾವನ್ನಪ್ಪಿದ್ದು, ಪುಟ್ಟ ಪುಟ್ಟ ಶಿಶುಗಳು ಸಹ, ಹುಟ್ಟಿದ ಕೆಲ ದಿನಗಳಲ್ಲೇ ಕಣ್ಣು ಮುಚ್ಚಿದೆ.
ಎಷ್ಟೋ ಜನ ತಮ್ಮ ಜೀವ ಉಳಿಸಿಕೊಳ್ಳಲು, ತಾವಿರುವ ಜಾಗದಿಂದ ಸೇಫ್ ಆಗಿರುವ ಸ್ಥಳಕ್ಕೆ ಹೋಗಿದ್ದರೂ, ಅಲ್ಲಿ ಶೆಲ್ ದಾಳಿಗೆ ಬಯಲಾಗಿದ್ದಾರೆ. ಇನ್ನು ಆಸ್ಪತ್ರೆ, ಶಾಲೆ, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಬಾಂಬ್ ಸ್ಪೋಟವಾಗಿದ್ದು, ಲೆಕ್ಕಕ್ಕೆ ಸಿಗದಷ್ಟು ರೋಗಿಗಳು, ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಬದುಕಿರುವವರು ನಾವು ಯಾಕಾದರೂ ಬದುಕಿದ್ದೆವೋ, ಬೇಗ ಸಾವು ಬರಲಿ ಎಂದು ಕಾದು ಕುಳಿತಂತೆ ಜೀವನ ಮಾಡುತ್ತಿದ್ದಾರೆ.
ಇನ್ನು ಇಸ್ರೇಲ್ ಮಾತ್ರ, ಮೂಲೆ ಮೂಲೆಗೆ ದಾಳಿ ನಡೆಸಿ, ಹಮಾಸ್ ಉಗ್ರರನ್ನು ಮಾತ್ರ ಸದೆಬಡೆಯುತ್ತೇವೆ ಎಂದು ಹೇಳಿ, ಇಲ್ಲಿಯವರೆಗೂ ಯುದ್ಧ ನಿಲ್ಲಿಸುವ ಮಾತೇ ಆಡುತ್ತಿಲ್ಲ. ಹಮಾಸ್ ಮತ್ತು ಇಸ್ರೇಲ್ ಮದ್ಯೆ ನಡೆಯುತ್ತಿರುವ ದಾಳಿಯಲ್ಲಿ ಪ್ಯಾಲೇಸ್ತೀನ್‌ನ ನಾಗರಿಕರು ಸಾವನ್ನಪ್ಪುತ್ತಿರುವುದು ಮಾತ್ರ ವಿಪರ್ಯಾಸ.