International News: ಅಮೆರಿಕದಲ್ಲಿ ಪಿಜ್ಜಾ ಡಿಲೆವರಿ ಮಾಡುತ್ತಿದ್ದ ಭಾರತೀಯ ಡಿಲೆವರಿ ಬಾಯ್ ಹ*ತ್ಯೆ

America: ಅಮೆರಿಕದಲ್ಲಿ ಪಿಜ್ಝಾ ಡಿಲೆವರಿ ಮಾಡುತ್ತಿದ್ದ ಭಾರತೀಯ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ತೆಲಂಗಾಣ ಮೂಲದ 28 ವರ್ಷದ ಅನ್ಶುಲ್ ಸಾವನ್ನಪ್ಪಿದ ಯುವಕನಾಗಿದ್ದು, ಫಿಲಡೆಲ್ಫಿಯಾ ಎಂಬಲ್ಲಿ ದುಷ್ಕರ್ಮಿಗಳು ಈತನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಅನ್ಶುಲ್ ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಕೆಲಸ ಮಾಡುವುದರ ಜೊತೆಯಲ್ಲಿ ಪಿಜ್ಜಾ ಡಿಲೆವರಿ ಕೂಡ ಮಾಡುತ್ತಿದ್ದರು. ಇದನ್ನರಿತಿದ್ದ ದುಷ್ಕರ್ಮಿಗಳು, ಜನರಿಲ್ಲದ ಜಾಗಕ್ಕೆ ಪಿಜ್ಜಾ ಆರ್ಡರ್ ಮಾಡಿ, ಆತನನ್ನು ಸಾಯಿಸಿದ್ದಾರೆಂದು, ಅನ್ಶುಲ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಏಕೆಂದರೆ, ಅನ್ಶುಲ್ ಪಿಜ್ಜಾ ಡಿಲೆವರಿ ನೀಡಲು ಹೋಗಿದ್ದಾಗ, ಅಲ್ಲಿ ಆತನನ್ನು ಗುಂಡಿಕಿ ಕೊಲ್ಲಲಾಗಿದೆ. ಮತ್ತು ಆ ಪ್ರದೇಶ ನಿರ್ಜನ ಪ್ರದೇಶವಾಗಿತ್ತು ಎಂದು ಸ್ಥಳೀಯ ಪೋಲೀಸರು ತಿಳಿಸಿದ್ದಾರೆ. ಅಲ್ಲದೇ, ಗುಂಡಿಕ್ಕಿದ ಬಳಿಕ ಕೊಲೆಗಡುಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಳಿಕ ಈತನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಅನ್ಶುಲ್ ಸಾವನ್ನಪ್ಪಿದ್ದಾನೆ.

ಆದರೆ ಅನ್ಶುಲ್ ಬಳಿ ಇದ್ದ ಮೊಬೈಲ್, ಹಣ ಯಾವುದೂ ಕಳುವಾಗಿಲ್ಲ. ಆದರೆ ಬರೀ ಆತನ ಪ್ರಾಣವನ್ನು ತೆಗೆಯಲಾಗಿದೆ. ಅಂದರೆ, ಯಾವುದೋ ದ್ವೇಷದ ಮೇಲೆಯೇ ಆತನನ್ನು ಕೊಲ್ಲಲಾಗಿದೆ ವಿನಃ ಆತನಿಂದ ಏನನ್ನೂ ಕಿತ್ತುಕೊಳ್ಳಲು ಅಲ್ಲ ಅನ್ನೋದು ಸ್ಪಷ್ಟವಾಗುತ್ತದೆ.

ಇನ್ನು ಕೊಲೆಯಾದ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ, ಕಪ್ಪುಬಟ್ಟೆ ಧರಿಸಿದ ಮಾಸ್ಕ್ ಹಾಕಿದ ಕೆಲವರು ಆ ಸ್ಥಳದಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೋಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

About The Author