America: ವಿವಾಹವಾದ ಕೆಲ ಸಮಯದಲ್ಲೇ ವರನ ಸಾ*: ಪವಾಡ ಸದೃಶವಾಗಿ ಬದುಕುಳಿದ ವಧು..

America: ಮದುವೆಯಾದ ಕೆಲ ಗಂಟೆಗಳಲ್ಲೇ ಭಾರತ ಮೂಲಕ ಪೈಲಟ್ ಸಾವಿಗೀಡಾದ ಘಟನೆ ನಡೆದಿದೆ. ಅಮೆರಿಕಾದ ಜಾರ್ಜಿಯಾದಲ್ಲಿ ಪೈಲಟ್ ಡೇವ್ ಫಿಜಿ ಎಂಬುವವರು ಜೆಸ್ನಿ ಎಂಬುವವರನ್ನ ಮದುವೆಯಾಗಿದ್ದರು. ಆದರೆ ಕೆಲ ಸಮಯದ ಬಳಿಕ ಅವರು ಹೆಲಿಕ್ಯಾಪ್ಟರ್‌ನಲ್ಲಿ ಚಲಿಸುತ್ತಿದ್ದಾಗ, ಅಪಘಾತವಾಗಿ ಡೇವ್ ಸಾವನ್ನಪ್ಪಿದರೆ, ಜಸ್ನಿ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ.

ಡೇವ್ (25) ಮತ್ತು ಜಸ್ನಿ ಕೇರಳ ಮೂಲದವರಾಗಿದ್ದು, ಇಬ್ಬರೂ ಮದುವೆ ಸಂಭ್ರಮದಲ್ಲಿದ್ದರು. ಮದುವೆಯಾದ ಬಳಿಕ ನವದಂಪತಿ ಹೋಟೇಲ್ ತೆರಳಲು ಮುಂದಾಗಿದ್ದರು. ಆದರೆ ಹೆಲಿಕಾಪ್ಟರ್ ಹತ್ತಿ ಕೆಲ ಕ್ಷಣಗಳಲ್ಲೇ ದುರಂತ ಸಂಭವಿಸಿದೆ. ಈ ಬಗ್ಗೆ ಶೋಧ ನಡೆದಿದ್ದು ಅರಣ್ಯದಲ್ಲಿ ಮಳೆ ಮತ್ತು ಮಂಜಿನ ಕಾರಣದಿಂದ ಈ ದುರಂತ ಸಂಭವಿಸಿದೆ. ಈ ಕಾರಣದಿಂದ ಅರಣ್ಯದಲ್ಲಿ ಅಪಘಾತವಾಗಿ ಹೆಲಿಕಾಪ್ಟರ್ ಅರಣ್ಯದಲ್ಲೇ ಬಿದ್ದಿದೆ.

ಜೆಸ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಜರ್ಜರಿತವಾಗಿ ಘಾಸಿಯಾಗಿದ್ದರೂ ಬದುಕಿದ್ದು ಮಾತ್ರ ಪವಾಡ ಎಂದಿದ್ದಾರೆ ವೈದ್ಯರು. ಇನ್ನು ಸ್ಥಳೀಯ ಪೋಲೀಸರು ಈ ಬಗ್ಗೆ ತನಿಖೆ ನಡೆಸಿದ್ದು, ರಕ್ಷಣಾತ್ಮಕ ವಾಹನ ಎಂದು ಸಾಬೀತಾಗಿದ್ದರೂ, ಆ ಹೆಲಿಕಾಪ್ಟರ್ ಅದು ಹೇಗೆ ಅಪಘಾತಕ್ಕೀಡಾಯಿತು ಎಂದು ಶೋಧ ನಡೆಸುತ್ತಿದ್ದಾರೆ.

About The Author