ಮಂಡ್ಯದಲ್ಲಿ 3408 ಜನರು ಅಂಚೆ ಮತಪತ್ರದ ಮೂಲಕ ಮನೆಯಿಂದಲೇ ಮತದಾನ..

ಮಂಡ್ಯ: ಜಿಲ್ಲೆಯಲ್ಲಿ 37439 80 ವರ್ಷ ಮೇಲ್ಪಟ್ಟ ಮತದಾರರಲ್ಲಿ 2630 ಮತದಾರರು ಮನೆಯಿಂದಲೇ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಒಪ್ಪಿಗೆ ನೀಡಿರುತ್ತಾರೆ. 23068 ವಿಕಲಚೇತನರ ಪೈಕಿ 778 ವಿಕಲಚೇತನರು ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಒಪ್ಪಿಗೆ ನೀಡಿರುತ್ತಾರೆ ಒಟ್ಟಾರೆ 3408 ಜನರು ಜಿಲ್ಲೆಯಲ್ಲಿ ಮನೆಯಿಂದಲೇ ಅಂಚೆ ಮತದಾನದ ಮೂಲಕ ಮತದಾನ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.

ಅವರು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಮನೆಯಿಂದಲೇ ಮತ ಚಲಾಯಿಸಲು ಒಪ್ಪಿಗೆ ನೀಡಿರುವ ವಿಕಲಚೇತನರು ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಮತದಾನಕ್ಕೆ ಮೇ 3, 4 ಹಾಗೂ 5 ರಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸೆಕ್ಟರ್‍ವಾರು ತಂಡದ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವೇಳಪಟ್ಟಿ ನೀಡಲಾಗುವುದು. ಅಂಚೆ ಮತಪತ್ರದ ಮೂಲಕ ಮತದಾನಕ್ಕೆ ಒಪ್ಪಿಗೆ ನೀಡಿರುವವರಿಗೆ ಮೇ 10 ರಂದು ಮತದಾನಕ್ಕೆ ಅವಕಾಶವಿರುವುದಿಲ್ಲ. ಅಂಚೆಮತ್ರದ ಮೂಲಕ ಮತದಾನ ಮಾಡಲು ಒಪ್ಪಿಗೆ ನೀಡಿರುವ ವಿಕಲಚೇತನರು ಹಾಗೂ 80 ವರ್ಷ ಮೇಲ್ಪಟ್ಟವರು ತಪ್ಪದೇ ಮತದನ ಮಾಡಿ ಎಂದು ಮನವಿ ಮಾಡಿದರು.

ಮೇ 10 ರಂದು ಚುನಾವಾಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳಿಂದ ನಮೂನೆ 12 ರಲ್ಲಿ ಅಂಚೆ ಮತದಾನಕ್ಕೆ ಅರ್ಜಿ ಸ್ವೀಕರಿಸಿದ್ದು, ಅವರುಗಳಿಗೆ ಮೇ 2 ರಂದು ನೀಡಲಾಗುವ ತರಬೇತಿ ಸಂದರ್ಭದಲ್ಲಿ ಮತದಾನಕ್ಕೆ ಅಂಚೆ ಮತದಾನ ಸೌಲಭ್ಯ ಕೇಂದ್ರ ತೆರೆಯಲಾಗುವುದು. ಎಲ್ಲಾ ಸಿಬ್ಬಂದಿಗಳು ತಪ್ಪದೇ ಮತದಾನ ಮಾಡಿ ಎಂದರು.
ಅಗತ್ಯ ಸೇವಾ ವಲಯದಡಿ ನಮೂನೆ 12 ಡಿ ಯಲ್ಲಿ ಅರ್ಜಿ ಸಲ್ಲಿಸಿರುವ 280 ಅರ್ಹ ಮತದಾರರಿಗೆ ಮೇ 2,3, ಮತ್ತು 4 ರಂದು ಆಯಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮತದಾನ ಮಾಡಲು ಮತಕೇಂದ್ರ ತೆರೆಯಲಾಗುವುದು. ಇದಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ 653 ಸೇವಾ ಮತದಾರರಿದ್ದು, ಏಪ್ರಿಲ್ 25 ರ ಮಧ್ಯಾಹ್ನ 3 ಗಂಟೆಯೊಳಗೆ ಇ.ಟಿ.ಪಿ.ಬಿಎಸ್ ತಂತ್ರಾಂಶದ ಮೂಲಕ ಅಂಚೆ ಮತ ಪತ್ರವನ್ನು ಆನ್‍ಲೈನ್ ಮೂಲಕ ಕಳುಹಿಸಿಕೊಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಇ.ವಿ.ಎಂ ಮತಯಂತ್ರಗಳ ರ್ಯಾಂಡಮೈಜೇಷನ್ ಕಾರ್ಯವನ್ನು ಕೈಗೊಂಡ ಮತಗಟ್ಟೆಗಳಿಗೆ ಇ.ವಿ.ಎಂ ಯಂತ್ರಗಳನ್ನು ಹಂಚಿಕೆ ಮಾಡಿ, ಏಪ್ರಿಲ್ 29 ಹಾಗೂ 30 ರಂದು ಮತಯಂತ್ರಗಳಿಗೆ ಮತಪತ್ರಗಳನ್ನು ಅಳವಡಿಸಲು ಕ್ರಮವಹಿಸಲಾಗುವುದು ಎಂದರು.

ಮಾನ್ಯತೆ ಪಡೆದ ರಾಷ್ಟ್ರ ಮತ್ತು ರಾಜ್ಯ ಪಕ್ಷದವರಿಂದ ಅಭ್ಯರ್ಥಿಗಳಿಗೆ (ಎ ಮತ್ತು ಬಿ ಫಾರಂ) ಚುನವಣಾ ಆಯೋಗದಿಂದ ಹಂಚಿಕೆಯಾಗಿರುವ ಚಿಹ್ನೆಗಳನ್ನು ನೀಡಲಾಗುತ್ತದೆ. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚಿಹ್ನೆಯನ್ನು ಹಂಚಿಕೆ ಮಾಡಲಿದ್ದಾರೆ ಎಂದರು.

ಚುನಾವಣೆ ಘೋಷಣೆಯಾದ ನಂತರ ಮಾರ್ಚ್ 29 ರಿಂದ ಏಪ್ರಿಲ್ 24ರವರೆಗೆ ರೂ. 83,28,153 ನಗದು, ರೂ. 1,07,54,886 ಮೌಲ್ಯದ 50456.65 ಲೀಟರ್ ಮದ್ಯ, ರೂ.55,550 ಮೌಲ್ಯದ 1 ಕೆ.ಜಿ 805 ಗ್ರಾಂ ಡ್ರಗ್ಸ್ ಹಾಗೂ ರೂ. 12,23,170 ಮೌಲ್ಯದ 21,984 ಇನ್ನಿತರ ಪದಾರ್ಥಗಳು ಸೇರಿದಂತೆ ಒಟ್ಟಾರೆ ನಗದು ಹಾಗೂ ವಸ್ತುಗಳ ಮೌಲ್ಯವು ರೂ. 2,03,61,759 ವಶಪಡಿಸಿಕೊಳ್ಳಲಾಗಿದೆ ಎಂದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಆರಕ್ಷಕ ಇಲಾಖೆಯ 12 ಪ್ರಕರಣ, ಅಬಕಾರಿ ಇಲಾಖೆ 551 ಪ್ರಕರಣಗಳು ಹಾಗೂ 71 ವಾಹನಗಳನ್ನು ಜಪ್ತಿ ಮಾಡಲಾಗಿರುತ್ತದೆ. ಆರ್.ಟಿ.ಓ ಇಲಾಖೆಯಿಂದ 425 ಪ್ರಕರಣಗಳನ್ನು ದಾಖಲಿಸಿ ರೂ 8,16,517/- ರೂ ದಂಡ ವಿಧಿಸಲಾಗಿರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಶೇಕ್ ತನ್ವಿರ್ ಆಸಿಫ್,ಅಪರ ಜಿಲ್ಲಾಧಿಕಾರಿ ಡಾ.ಹೆಜ್ ಎಲ್ ನಾಗಾರಾಜು, ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ತಿಮ್ಮಯ್ಯ, ಅಬಕಾರಿ ಜಿಲ್ಲಾ ಆಯುಕ್ತರಾದ ಡಾ.ಮಹದೇವಿಬಾಯಿ, ವಾರ್ತಾ ನತ್ಯ ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್ ಹೆಚ್ ನಿರ್ಮಲ ಉಪಸ್ಥಿತರಿದ್ದರು.

‘ಮೋಸ ಮಾಡಿ ಹೋದವರಿಗೆ ಭಗವಂತ ತಕ್ಕ ಪಾಠ ಕಲಿಸುತ್ತಾನೆ’

ವಿಧಾನಸಭಾ ಚುನಾವಣೆ ಮೂಲಕ ರಾಜ್ಯದಲ್ಲಿ ಐತಿಹಾಸಿಕ ಬದಲಾವಣೆ: ಕೆ.ಅಣ್ಣಾಮಲೈ

ಇದು ಹತಾಶೆಯ ಆಗಮನ: ಬಿಜೆಪಿ ಕೇಂದ್ರ ಸಚಿವರ ಬಗ್ಗೆ ರೇವಣ್ಣ ವ್ಯಂಗ್ಯ..

About The Author