Saturday, April 19, 2025

Latest Posts

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ 4 ಸಂಘಟನೆಗಳು ಮನವಿ ಸಲ್ಲಿಸಿವೆ- ಈಶ್ವರ ಉಳ್ಳಾಗಡ್ಡಿ

- Advertisement -

Hubballi- Dharwad News: ಧಾರವಾಡ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಅದ್ದೂರಿಯಾಗಿ ಗಣೇಶನ ಪ್ರತಿಷ್ಠಾಪನೆ ನಡೆಸಲು 4 ಸಂಘಟನೆಗಳು ಮನವಿ ಸಲ್ಲಿಸಿವೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದ್ರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತರು, ಮಹಾನಗರ ಪಾಲಿಕೆಯ ಒಡೆತನದ ರಾಣಿಚನ್ನಮ್ಮ ವೃತ್ತದ ಹತ್ತಿರವಿರುವ ಮಹಾನಗರ ಪಾಲಿಕೆಯ ಒಡೆತನದ ಸಿಟಿಎಸ್ ನಂ, 174 ರ 01 ಎಕರೆ 5 ಗುಂಟೆ 76 ಚೌ.ಪು ಜಾಗೆಯಲ್ಲಿ ಗಣೇಶ ಉತ್ಸವಕ್ಕೆ ಅನುಮತಿ ನೀಡಲಾಗುವುದು.

ಈಗಾಗಲೇ I) ಅಧ್ಯಕ್ಷರು, ಶ್ರೀ ಗಜಾನನ ಮಹಾ ಮಂಡಳಿ (ರಿ) ಹುಬ್ಬಳ್ಳಿ:
2) ಅಧ್ಯಕ್ಷರು, ಶ್ರೀರಾಮ ಸೇನಾ, ಹುಬ್ಬಳ್ಳಿ
3) ಅಧ್ಯಕ್ಷರು, ರಾಣಿಚೆನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ, ಭವಾನಿ ಆರ್ಕಟ್, ಹುಬ್ಬಳ್ಳಿ,
4) ಸಂಚಾಲಕರು, ರಾಣಿಚಿನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ, ಶ್ರೀ ರಾಮ ಕಾಂಪ್ಲೆಕ್ಸ್‌, ಹುಬ್ಬಳ್ಳಿ ಹೀಗೆ ಸದರಿ ಸಂಘಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿರುತ್ತಾರೆ.

ಸಾರ್ವಜನಿಕವಾಗಿ ಗಣೇಶ ಉತ್ಸವವನ್ನು ಆಚರಿಸಲು ಇನ್ನುಳಿದ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳನ್ನೊಳಗೊಂಡ ತಂಡದೊಂದಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯನ್ನು ಕಲ್ಪಿಸಿ, ಅವಶ್ಯಕ ಎಲ್ಲ ಸಕ್ಷಮ ಪ್ರಾಧಿಕಾರಗಳಿಂದ ಸಾರ್ವಜನಿಕ ಗಣೇಶ ಉತ್ಸವಕ್ಕೆ ಪೂರ್ವಾನುಮತಿ ಪತ್ರ ಪಡೆದು ಹಾಜರಪಡಿಸಬೇಕಾಗುತ್ತದೆ.

ಶ್ರೀಗಣೇಶ ಉತ್ಸವ ಆಚರಣೆಯ ಕುರಿತು ಬಂದ ಅರ್ಜಿಗಳನ್ನು ಪಾಲಿಕೆಯ ಸಾಮಾನ್ಯ ಸಭೆಯ ಸೂಕ್ತ ನಿರ್ಣಯಕ್ಕಾಗಿ ಠರಾವು ಮಂಡಿಸಲಾಗಿದೆ ಎಂದು ತಿಳಿಸಿದರು ಆಯುಕ್ತರು ಇದೇ ಸಂದರ್ಭದಲ್ಲಿ ತಿಳಿಸಿದ್ರು.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ- ಮೇಯರ್ ವೀಣಾ ಬರದ್ವಾಡ್ …

ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?

HDK Fans: ಎಚ್.ಡಿ.ಕೆ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಯಿಂದ ಉರುಳು ಸೇವೆ

- Advertisement -

Latest Posts

Don't Miss