ಆಂಧ್ರಪ್ರದೇಶ: ತೆಲುಗು ದೇಶಂ ಪಕ್ಷದ ನಾಲ್ವರು ರಾಜ್ಯಸಭಾ ಸದಸ್ಯರು ಇಂದು ದಿಢೀರನೆ ಬಿಜೆಪಿ ಸೇರ್ಪಡೆಗೊಳ್ಳೋ ಮೂಲಕ ಮಾಜಿ ಸಿಎಂ ಚಂದ್ರ ಬಾಬು ನಾಯ್ಡುಗೆ ಶಾಕ್ ನೀಡಿದ್ದಾರೆ.
ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿರೋ ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ಇದೀಗ ಕುಟುಂಬದೊಡನೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಇದೀಗ ಟಿಡಿಪಿಯ 4 ಮಂದಿ ರಾಜ್ಯಸಭಾ ಸದಸ್ಯರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೆ ಸನ್ನದ್ಧರಾಗಿದ್ದಾರೆ. ರಾಜ್ಯಸಭಾ ಸದಸ್ಯರಾದ ಟಿ.ಜಿ.ವೆಂಕಟೇಶ್, ವೈ.ಎಸ್ ಚೌಧರಿ, ಸಿ.ಎಂ ರಮೇಶ್ ಮತ್ತು ಗಿರಿಕಪಟಿ ಮೋಹನ್ ಇಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ರನ್ನು ಭೇಟಿ ಮಾಡಿ ಬಿಜೆಪಿ ಸೇರ್ಪಡೆಗೆ ಬಗ್ಗೆ ಚರ್ಚಿಸಿದ್ದಾರೆ.
ಇನ್ನು ಕೇವಲ 6 ರಾಜ್ಯಸಭಾ ಸದ್ಯರಳ್ಳ ಟಿಡಿಪಿಗೆ ಇದೀಗ ನಾಲ್ವರ ಪಕ್ಷಾಂತರದಿಂದ ತೀವ್ರ ಆಘಾತ ಎದುರಾಗಲಿದೆ. ಅಲ್ಲದೆ ವಿಧಾನಸಭೆಯ 175 ಸ್ಥಾನಗಳಲ್ಲಿ ಟಿಡಿಪಿ ಕೇವಲ 23 ಸ್ಥಾನ ಗಳಿಸಿದ್ದು, ಇನ್ನೂ ಅನೇಕ ಮಂದಿ ಶಾಸಕರು ಬಿಜೆಪಿ ಸೇರ್ಪಡೆಗೆ ಒಲವು ತೋರಿದ್ದು, ಟಿಡಿಪಿಗೆ ಪ್ರತಿಪಕ್ಷ ಸ್ಥಾನವೂ ಕೈತಪ್ಪಲಿದೆ ಅಂತ ಹೇಳಲಾಗ್ತಿದೆ. ಟಿಡಿಪಿಯ ಸದಸ್ಯರ ರಾಜೀನಾಮೆಯಿಂದ ಬಿಜೆಪಿಗೆ ಮೇಲ್ಮನೆಯಲ್ಲಿ ಸಂಖ್ಯಾಬಲ ಹೆಚ್ಚಾಗೋದಲ್ಲದೆ, ತನ್ನ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತಾದ ಬಿಲ್ ಗಳನ್ನು ಪಾಸ್ ಮಾಡೋದಕ್ಕೆ ಸುಲಭವಾಗಲಿದೆ.
ಇನ್ನೆಂಟು ವರ್ಷದಲ್ಲಿ ಈ ವಿಚಾರದಲ್ಲಿ ಭಾರತ ನಂಬರ್ ಒನ್ ಆದ್ರೆ ಸಮಸ್ಯೆ ಗ್ಯಾರೆಂಟಿ…! ಮಿಸ್ ಮಾಡದೇ ಈ ವಿಡಿಯೋ ನೋಡಿ