ಪಾಟ್ನಾ: ಭಾರತದಲ್ಲೇ ಕೆಲವು ಗಂಡಸರು 5, 10, 20 ಹೆಣ್ಣುಮಕ್ಕಳನ್ನ ಮದುವೆಯಾದ ಕೇಸ್ ಬಗ್ಗೆ ನಾವು ನೀವು ಕೇಳಿದ್ದೇವೆ. ಆದ್ರೆ ಬಿಹಾರದಲ್ಲಿ ನಡೆದ ಜನಗಣತಿಯಲ್ಲಿ 40 ಮಹಿಳೆಯರು ತಮ್ಮ ಪತಿಯ ಹೆಸರು ರೂಪ್‌ಚಂದ್ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಕೆಲವು ಮಕ್ಕಳು ಕೂಡ ತಮ್ಮ ಅಪ್ಪನ ಹೆಸರು ರೂಪಚಂದ್ ಎಂದು ಹೇಳಿದ್ದಾರೆ.
ಬಿಹಾರದ ವಾರ್ಡ್ ನಂಬರ್ 7ರಲ್ಲಿ ರೆಡ್ ಲೈಟ್ ಏರಿಯಾದಲ್ಲಿ ವಾಸಿಸುವ ಹೆಣ್ಣುಮಕ್ಕಳು ಜೀವನ ನಡೆಸುವುದಕ್ಕೆ ಸಂಗೀತ ಮತ್ತು ನೃತ್ಯ ಮಾಡುತ್ತಾರೆ. ಇದರಿಂದ ಬರುವ ಆದಾಯವೇ ಅವರಿಗೆ ಜೀವನಾಧಾರ. ಆದರೆ ಇವರಿಗೆ ಇರಲು ಸರಿಯಾದ ಸೂರಿಲ್ಲ. ಸ್ಥಿರ ವಿಳಾಸವಿಲ್ಲ. ಹಾಗಾಗಿ ಇಲ್ಲಿ ಜನಗಣತಿ ಮಾಡಲಾಗಿತ್ತು. ಈ ವೇಳೆ 40 ಹೆಣ್ಣು ಮಕ್ಕಳು ತಮ್ಮ ಪತಿಯ ಹೆಸರು ರೂಪಚಂದ್ ಎಂದು ಹೇಳಿದ್ದಾರೆ.
ಇದನ್ನು ಕಂಡ ಅಧಿಕಾರಿಗಳಿಗೆ ರೂಪ್‌ಚಂದ್ ಎಂಬುವವನು, 40 ಜನರನ್ನ ವಿವಾಹವಾಗಿದ್ದಾನಾ ಎಂಬ ಸಂಶಯ ಉಂಟಾಗಿದೆ. ಹಾಗಾಗಿ ಅವರು ರೂಪಚಂದ್ ಯಾರು ಎಂದು ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ ಅವರಿಗೆ ರೂಪಚಂದ್ ಸಿಗಲಿಲ್ಲ. ಕೊನೆಗೆ ಮಾಧ್ಯಮದವರು ರೂಪಚಂದ್ ಯಾರು ಎಂದು ತಿಳಿಯಲು, ಇಲ್ಲಿನ ಹೆಣ್ಣುಮಕ್ಕಳಲ್ಲಿ ನಿಮ್ಮ ಪತಿ ರೂಪಚಂದ್ ಯಾರು..? 40 ಜನರಿಗೆ ಒಬ್ಬನೇ ಪತಿಯೇ..? ಎಂದು ತರಹೇವಾರಿ ಪ್ರಶ್ನೆ ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಹೆಣ್ಣು ಮಕ್ಕಳು, ನಮ್ಮ ಜೀವನ ನಡೆಸುವುದಕ್ಕೆ, ನಮ್ಮ ಜೀವನದಲ್ಲಿ ಬೆಲೆಬಾಳುವ ವಸ್ತು ಅಂದ್ರೆ ಅದು ರೂಪಾಯಿ ಮಾತ್ರ. ಹಾಗಾಗಿ ಅದನ್ನೇ ನಮ್ಮ ಪತಿ ಎಂದು ನಾವು ಪರಿಗಣಿಸಿದ್ದೇವೆ. ಹಾಗಾಗಿ ನಮ್ಮ ಪತಿಯ ಹೆಸರಿನ ಜಾಗದಲ್ಲಿ ನಾವು ರೂಪಚಂದ್ ಎಂದು ಬರೆದಿದ್ದೇವೆ ಎಂದು ಹೇಳುವ ಮೂಲಕ, ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ಬೆಳಗಾವಿ ಏರ್ಪೋರ್ಟ್‌ನಲ್ಲಿ ಭೇಟಿಯಾದ ಸಿಎಂ- ಮಾಜಿ ಸಿಎಂ: ವೀಡಿಯೋ ವೈರಲ್
ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್: ಇದು ಪ್ರೀತಿಸಿದವಳಿಗಾಗಿ ಮಾಡಿದ ಕೃತ್ಯ..