ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಚಿತ್ರ ಎಲ್ಲೆಲ್ಲೂ ಸದ್ದುಮಾಡುತ್ತಿದೆ. ಈಗಾಗಿ ರಾಧೆ ಶ್ಯಾಮ್ ಚಿತ್ರಕ್ಕೆ ಬಿಡುಗಡೆಗೂ ಮುನ್ನವೇ 400 ಕೋಟಿ ರೂ ಆಫರ್ ಬಂದಿದೆ.
ಈ ಹಿಂದೆ ಜನವರಿ 14 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೋನ ಕಾರಣದಿಂದ ಸದ್ಯಕ್ಕೆ ರಿಲೀಸ್ ಮಾಡದಿರಲು ನಿರ್ಧರಿಸಲಾಗಿತ್ತು. ಆದ್ರೆ ಇದರ ಬೆನ್ನಲ್ಲೇ ಓ ಟಿ ಟಿ ಯ ದೈತ್ಯರೊಬ್ಬರಿಂದ 400 ಕೋಟಿ ರೂ ಆಫರ್ ಬಂದಿದೆ.
ಈಗಾಗಿ ಚಿತ್ರತಂಡ ಚಿಂತನೆಯಲ್ಲಿದೆ. ಇಷ್ಟೊಂದು ಹಣಕ್ಕೆ ಬೇಡಿಕೆ ಬಂದಿರುವಾಗಲೇ ನಾವು ಸಿನಿಮಾವನ್ನು ಓಟಿಟಿಯಲ್ಲಿ ಬಿಡ ಬಹುದೇ ಅಥವಾ ಚಿತ್ರಮಂದಿರಗಳಲ್ಲಿ ತೆರೆಕಾಣಿಸಬೇಕೇ ಎಂದು. ಪ್ರಭಾಸ್ ಕೂಡ ಬಾಹುಬಲಿ ಸಿನಿಮಾ ನಂತರ ಫ್ಯಾನ್ ಇಂಡಿಯಾದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಹೀಗಾಗಿ ಚಿಂತೆಯಲ್ಲಿದ್ದಾರೆ. ಸಿನಿಮಾ ಥಿಯೇಟರ್ ನಲ್ಲಿ ಸಿನಿಮಾಗಳು ಹೆಚ್ಚು ವೀಕ್ಷಕರಿಗೆ ಎಫೆಕ್ಟ್ ಕೊಡುತ್ತವೆ. ಆದರೆ ಓ ಟಿ ಟಿ ಗಳು ಚಿಕ್ಕ ಸಿನಿಮಾಗಳನ್ನು ಬಿಟ್ಟರೆ ಅಂತೇನು ಪ್ರಭಾವವನ್ನು ಬೀರುವುದಿಲ್ಲ… ಈಗಾಗಿ ಪ್ರಭಾಸ್ ಚಿಂತನೆಯಲ್ಲಿದ್ದಾರೆ.
ಖ್ಯಾತ ನಿರ್ದೇಶಕ ರಾಧಾ ಕೃಷ್ಣಕುಮಾರ್ ರವರು ಈ ಚಿತ್ರಕ್ಕೆ ಬಹಳ ಸಮಯ ತೆಗೆದುಕೊಂಡು, ಹೆಚ್ಚು ಪರಿಶ್ರಮ ಪಟ್ಟು ತೆಗೆದಿದ್ದಾರೆ. ಹಾಗಾಗಿ ಏನು ಮಾಡಬಹುದು ಎಂದು ನಿರ್ದೇಶಕರು ಚಿತ್ರತಂಡದ ಜೊತೆಗೆ ಮಾತುಕಥೆಯನ್ನು ನಡೆಸುತ್ತಿದೆ.
Ott ಯಿಂದ Radhe Shyam ಚಿತ್ರಕ್ಕೆ 400 ಕೋಟಿ ಆಫರ್.
- Advertisement -
- Advertisement -