Thursday, April 17, 2025

Latest Posts

‘ಪೆಂಡಿಂಗ್ ಇರೋ ಬಿಲ್‌ಗಳಿಗೆ ಎನ್ಓಸಿ ಪಡೆಯೋದಕ್ಕೂ 5%, 10% ಕಮಿಷನ್ ಕೊಡಬೇಕಿದೆ ‘

- Advertisement -

Hassan Political News: ಹಾಸನ: ಗುತ್ತಿಗೆದಾರರಿಂದ ಲಂಚ ಸ್ವೀಕಾರ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಹಾಸನ ಶಾಸಕ ಸ್ವರೂಪ್, ಹಾಸನದಲ್ಲೂ ಅನೇಕ ಕಾಮಗಾರಿಗಳು ಮುಗಿದಿವೆ. ಆದರೂ ನಮಗೆ ಇನ್ನೂ ಹಸ್ತಾಂತರ ಆಗಿಲ್ಲ ಎಂದು ಹೇಳಿದ್ದಾರೆ.

ಕೇಳಿದ್ರೆ ಕಂಟ್ರಾಕ್ಟರ್‌ಗಳು ಬಿಲ್ ಪಾವತಿಯಾಗಿಲ್ಲ ಅದಕ್ಕೆ ಹಸ್ತಾಂತರಿಸಿಲ್ಲ ಎನ್ನುತ್ತಾರೆ. ಗುತ್ತಿಗೆರಾರರನ್ನ ಕೇಳಿದ್ರೆ ನಾವು ಮನೆ, ಮಠ ಮಾರಿಕೊಂಡು ಬೀದಿಗೆ ಬಂದಿದ್ದೇವೆ ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಗುತ್ತಿಗೆದಾರರು ಆಪದನೆ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತು ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಕು. ಪೆಂಡಿಂಗ್ ಇರೋ ಬಿಲ್‌ಗಳಿಗೆ ಎನ್ಓಸಿ ಪಡೆಯೋದಕ್ಕೂ 5%, 10% ಕಮಿಷನ್ ಕೊಡಬೇಕಿದೆ . ಗುತ್ತಿಗೆದಾರರು ಸಂಪೂರ್ಣವಾಗಿ ನೆಲ ಕಚ್ಚಿದ್ದಾರೆ. ಮೊನ್ನೆ ಸಿಕ್ಕಿರೋ 42 ಕೋಟಿ ಯಾರದ್ದು ಏನು ಎಂಬುದನ್ನ ನಾನು ಚರ್ಚೆ ಮಾಡೋಕೆ ಹೋಗಲ್ಲ. ಅದನ್ನ ದೊಡ್ಡವರು ನೋಡಿಕೊಳ್ತಾರೆ ಎಂದು ಸ್ವರೂಪ್ ಹೇಳಿದ್ದಾರೆ.

KC Raghu : ಖ್ಯಾತ ಆಹಾರ ತಜ್ಞ ಕೆ.ಸಿ ರಘು ವಿಧಿವಶ

ಐಟಿಎಫ್‌ ಪುರುಷರ ನಗದು ಬಹುಮಾನ ಟೆನಿಸ್‌ ಪಂದ್ಯಾವಳಿಗೆ ಧಾರವಾಡ ಸಜ್ಜು

ಲೋಕಾ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ದಾವಣಗೆರೆ ಅಬಕಾರಿ ಡಿಎಸ್‌ಪಿ ಪರಾರಿ

- Advertisement -

Latest Posts

Don't Miss