Movie News: ಮೊದಲೇ ನಟ ನಟಿಯರು ಡ್ರಗ್ಸ್ ಅನ್ನೋ ಹೆಸರು ಕೇಳಿದ್ರೆನೇ ಹೆದರಿಕೊಳ್ತಿದ್ದಾರೆ. ಏಕೆಂದರೆ, ಈಗಾಗಲೇ ಹಲವು ನಟ ನಟಿಯರು ಡ್ರಗ್ಸ್ ಕೇಸ್ನಲ್ಲಿ ಭಾಗಿಯಾಗಿದ್ದಾರೆಂದು, ಕೆಲವರನ್ನು ಬೆಂಡೆತ್ತಲಾಗಿದೆ. ಇದೇ ವಿಷಯವನ್ನು ಇಟ್ಟುಕೊಂಡ ವಂಚಕನೊಬ್ಬ, ನಟಿಗೆ ಕಾಲ್ ಮಾಡಿ, ನಿಮಗೆ ಡರ್ಗ್ಸ್ ಪಾರ್ಸೆಲ್ ಬಂದಿದೆ ಎಂದು ಹೇಳಿ, 5 ಲಕ್ಷ ರೂಪಾಯಿ ಮೋಸ ಮಾಡಿದ್ದಾನೆ.
ನಟಿ ಅಂಜಲಿ ಪಾಟೀಲ್ಗೆ ಕಾಲ್ ಮಾಡಿರುವ ವಂಚಕ, ತಾನು ಪೊಲೀಸ್ ಎಂದು ಹೇಳಿಕೊಂಡಿದ್ದಾನೆ. ನಾನು ದೀಪಕ್ ಶರ್ಮಾ, ನಿಮ್ಮ ಆಧಾರ್ ಕಾರ್ಡ್ನೊಂದಿಗೆ ಡ್ರಗ್ಸ್ ಪಾರ್ಸೆಲ್ ಸಿಕ್ಕಿದೆ. ನೀವು ಮುಂಬೈ ಪೊಲೀಸರನ್ನು ಸಂಪರ್ಕಿಸಬೇಕು. ನಿಮ್ಮ ಆಧಾರ್ ನಂಬರ್ಗೆ ಲಿಂಕಾಗಿರುವ ಬ್ಯಾಂಕ್ ಅಕೌಂಟ್ಗೆ ಅಕ್ರಮ ಹಣ ಜಮಾ ಆಗಿದೆ. ಅದರ ಪರಿಶೀಲನೆಗೆ ನೀವು, 96,525 ರೂಪಾಯಿ ವರ್ಗಾಯಿಸಬೇಕು ಎಂದಿದ್ದಾನೆ.
ಅಲ್ಲದೇ, ಈ ಅಕ್ರಮ ಹಣ ವರ್ಗಾವಣೆಯಾಗಲು, ನಿಮ್ಮ ಜೊತೆ ಬ್ಯಾಂಕ್ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆಂದು ಹೇಳಿದ ವಂಚಕ ದೀಪಕ್, ಕೇಸ್ ಕ್ಲೋಸ್ ಮಾಡಲು 43 ಲಕ್ಷಕ್ಕೂ ಅಧಿಕ ಹಣ ಕೇಳಿದ್ದಾನೆ. ಎಲ್ಲಿ ತನ್ನ ಹೆಸರು ಹಾಳಾಗುತ್ತದೆಯೋ, ಪೊಲೀಸರು ಎಲ್ಲಿ ತನ್ನನ್ನು ಅರೆಸ್ಟ್ ಮಾಡುತ್ತಾರೆಯೋ ಎಂದು ಹೆದರಿ, ನಟಿ ವಂಚಕ ಕೇಳಿದಷ್ಟು ದುಡ್ಡನ್ನು ವರ್ಗಾಯಿಸಿದ್ದಾರೆ. ಈ ರೀತಿ 5 ಲಕ್ಷಕ್ಕೂ ಹೆಚ್ಚು ಹಣ ವರ್ಗಾಯಿಸಿದ್ದಾರೆ. ಬಳಿಕ ತಾವು ಮೋಸ ಹೋಗಿರುವುದು ಅವರಿಗೆ ಗೊತ್ತಾಗಿ, ಪೊಲೀಸರಿಗೆ ದೂರು ನೀಡಿದ್ದಾರೆ.
ಗೋದ್ರಾ ದುರಂತ ಮರುಕಳಿಸುತ್ತದೆ ಅಂದ್ರೆ ಏನು..? ಹಿಂದೂಗಳನ್ನು ಸುಡ್ತೀರಾ..?: ಬೆಲ್ಲದ್ ಪ್ರಶ್ನೆ..
ನಾವು ರಾಮ ಭಕ್ತರಾಗಿ ಬಂದಿದ್ದೇವೆ,ಆಂಜನೇಯ ಆಗೋಕೆ ಬಿಡಬೇಡಿ: ಪೊಲೀಸರಿಗೆ ಆರ್.ಅಶೋಕ್ ಎಚ್ಚರಿಕೆ