Friday, April 4, 2025

Latest Posts

5 ದಿನಗಳಲ್ಲಿ 5 ಮರ್ಡರ್: ಹುಬ್ಬಳ್ಳಿ ಧಾರವಾಡ ಪೋಲಿಸರು ಹೈ ಅಲರ್ಟ್

- Advertisement -

Dharwad News: ಧಾರವಾಡ: ಧಾರವಾಡದಲ್ಲಿ 5 ದಿನಗಳಿಂದ 5 ಕೊಲೆಯಾಗಿರುವ ವಿಚಾರಕ್ಕೆ, ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರೆಟ್ ಹೈ ಅಲರ್ಟ್ ಆಗಿದ್ದಾರೆ.

ಎಲ್ಲ ಪೋಲಿಸ್ ಠಾಣೆ ಗಳಿಂದ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಪೋಲಿಸ್ ಕಮಿಷನರ್ ರೇಣುಕಾ ಸುಕುಮಾರ ಆದೇಶದಂತೆ, ಪೊಲೀಸರು ನೈಟ್ ರೌಂಡ್ಸ್ ನಡೆಸಿದ್ದಾರೆ. ಎಲ್ಲ ಪೋಲಿಸ್ ಠಾಣೆಯ ಪಿಎಸ್ ಐ ಮತ್ತು ಸಿಪಿಐಗಳಿಗೆ ಪೊಲೀಸ್ ಕಮಿಷನರ್‌ ರೇಣುಕಾ ಸುಕುಮಾರ್ ವಾರ್ನ್ ಮಾಡಿದ್ದು, ರಾತ್ರಿ 11 ಗಂಟೆಯಾದರೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ಧಾರವಾಡದ ವಿದ್ಯಾಗಿರಿ, ಪೋಲಿಸ್ ಠಾಣೆ ಉಪನಗರ ಪೋಲಿಸ್ ಠಾಣೆ, ಶಹರ ಪೋಲಿಸ್ ಠಾಣೆಯಿಂದ ನೈಟ್ ರೌಂಡ್ಸ್ ನಡೆದಿದೆ.ಎಸಿಪಿ ಪ್ರಶಾಂತ ಸಿದ್ದನಗೌಡರಿಂದ ನೈಟ್ ರೌಂಡ್ಸ್ ನಡೆದಿದ್ದು, ಇವರಿಗೆ ಸಿಪಿಐ ದಯಾನಂದ ಸೇಗುಣಸಿ, ಸಂಗಮೇಶ ದಿಡಗಿನಾಳ್, ಸಾಥ್ ನೀಡಿದ್ದಾರೆ. ಬರಿ ನೈಟ್ ರೌಂಡ್ಸ್ ನಡೆಸುವುದಲ್ಲದೇ, ಯುವಕರಲ್ಲಿ 112 ಬಗ್ಗೆ, ಪ್ರಶಾಂತ್‌ ಸಿದ್ದನಗೌಡ ಮಾಹಿತಿ ನೀಡುತ್ತಿದ್ದಾರೆ. ಈ ಮೂಲಕ ಅವಳಿ ನಗರದಲ್ಲಿ ಕ್ರೈಂ ತಡೆಗಟ್ಟಲು ಪೊಲೀಸರು ಸನ್ನದ್ಧರಾಗಿದ್ದಾರೆ.

ಸಂಸದರ ಜೊತೆ ಪಾರ್ಲಿಮೆಂಟ್ ಕ್ಯಾಂಟೀನ್‌ನಲ್ಲಿ ಊಟ ಸವಿದ ಪ್ರಧಾನಿ ಮೋದಿ

Pakistan Election Result: ಲಾಹೋರ್‌ನಲ್ಲಿ ನವಾಜ್ ಷರೀಫ್‌ಗೆ 55ಸಾವಿರ ಮತಗಳ ಅಂತರದಿಂದ ಗೆಲುವು

ರಾಜ್ಯ ಸಭೆಯಲ್ಲಿ ಕ್ಷಮೆ ಕೇಳಿದ ನಟಿ, ಸಂಸದೆ ಜಯಾ ಬಚ್ಚನ್.. ಯಾಕೆ..?

- Advertisement -

Latest Posts

Don't Miss