ಹಲವು ಆಹಾರಗಳು ನಮ್ಮ ಆರೋಗ್ಯ, ಸೌಂದರ್ಯದ ಅಭಿವೃದ್ಧಿ ಮಾಡುವುದರ ಜೊತೆಗೆ, ನಮ್ಮ ಬುದ್ಧಿ ಮತ್ತೆಯನ್ನು ಕೂಡ ಅಭಿವೃದ್ಧಿಗೊಳಿಸುತ್ತದೆ. ಅಂಥ ಆಹಾರಗಳು ಯಾವುದು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಕ್ಯಾರೆಟ್- ನಾವೆಲ್ಲ ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಸೌಂದರ್ಯ ವೃದ್ಧಿಸುತ್ತದೆ ಅನ್ನೋದನ್ನ ಕೇಳಿದ್ದೇವೆ. ಇದರ ಜೊತೆ ಕ್ಯಾರೆಟ್ ಸೇವನೆಯಿಂದ ಬುದ್ಧಿಮಮತ್ತೆ ಕೂಡ ಚುರುಕಾಗುತ್ತದೆ. ನೀವು ಕ್ಯಾರೆಟ್ ಜ್ಯೂಸ್, ಸ್ಯಾಲೆಡ್ ಕೂಡ ಮಾಡಿ ಸೇವಿಸಬಹುದು. ಇದು ವಿಟಾಮಿನ್ ಎ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ಸ್‌ಗಳಿಂದ ಭರಪೂರವಾಗಿದೆ. ಹೀಗಾಗಿ ಇದು ಕಣ್ಣಿನ ಆರೋಗ್ಯದ ಜೊತೆಗೆ ಬುದ್ಧಿವಂತಿಕೆ ಹೆಚ್ಚಿಸುವಲ್ಲಿಯೂ ಸಹಕಾರಿಯಾಗಿದೆ.
ಬೆರ್ರೀಸ್- ಬೆರ್ರಿಗಳಲ್ಲಿ ಹಲವಾರು ವಿಧಗಳಿದೆ. ಬ್ಲ್ಯಾಕ್ ಬೆರ್ರಿ, ಬ್ಲ್ಯೂ ಬೆರ್ರಿ, ರಾಸ್ ಬೆರ್ರಿ, ಸ್ಟ್ರಾಬೇರಿ ಹಣ್ಣುಗಳ ಸೇವನೆ ಕೂಡ ಉತ್ತಮ. ರುಚಿಕರವಾದ ಈ ಹಣ್ಣಿನಿಂದ ಮಿಲ್ಕ್ ಶೇಕ್ ಮಾಡಿ ಕುಡಿಯಬಹುದು.
ಡ್ರೈಫ್ರೂಟ್ಸ್- ಬಾದಾಮಿ ಬೀಜವನ್ನು ನೆನೆ ಹಾಕಿ, ಸಿಪ್ಪೆ ಬಿಡಿಸಿ ತಿನ್ನುವುದರಿಂದ ನಮ್ಮ ನೆನಪಿನ ಶಕ್ತಿ ಹೆಚ್ಚುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇತರ ಡ್ರೈಫ್ರೂಟ್ಸ್ ಕೂಡಾ ನೆನಪಿನ ಶಕ್ತಿಗೆ ಒಳ್ಳೆಯದು. ಈ ಕಾರಣಕ್ಕಾಗಿಯೇ, ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಲೆಂದು, ಗರ್ಭಿಣಿಯರಿಗೆ ಡ್ರೈಫ್ರೂಟ್ಸ್ ನೀಡಲಾಗುತ್ತದೆ.
ಆಲಿವ್ ಎಣ್ಣೆ- ಆಲಿವ್ ಎಣ್ಣೆಯನ್ನ ಸಲಾಡ್, ಪಾಸ್ತಾಗಳಲ್ಲಿ ಬಳಸುತ್ತಾರೆ. ಆಲಿವ ಆಯಿಲ್ ಹಸಿಯಾಗಿ ತಿಂದ್ರೆ ಮಾತ್ರಾ ಅದರ ಪರಿಣಾಮವಿರುತ್ತದೆ. ಅದನ್ನ ಹೆಚ್ಚು ಬಿಸಿ ಮಾಡಿ, ಬಳಸಬಾರದು. ನೀವು ಒಗ್ಗರಣೆ ಹಾಕುವಾಗ ಆಲಿವ್ ಆಯಿಲ್ ಹಾಕಿ, ಹೆಚ್ಚು ಬಿಸಿ ಮಾಡದೇ, ಒಗ್ಗರಣೆ ಹಾಕಬೇಕು. ಇಲ್ಲದಿದ್ದಲ್ಲಿ, ಅದರ ಸತ್ವ ಕಳೆದುಕೊಳ್ಳುತ್ತದೆ.
ಚಾಕೋಲೇಟ್ಸ್- ಹೌದು. ಆದ್ರೆ ಕೋಕೋದಿಂದ ಮಾಡಿದ ಚಾಕೋಲೇಟ್ಸ್ ತಿಂದ್ರೆ ಮಾತ್ರ ಬುದ್ಧಿ ಮತ್ತೆ ಹೆಚ್ಚೋದು. ಅದರಲ್ಲೂ ಡಾರ್ಕ್ ಚಾಕೋಲೇಟ್ ತಿನ್ನಬೇಕು. ಇದರಿಂದ ಸೌಂದರ್ಯವೂ ಹೆಚ್ಚತ್ತೆ. ಇದನ್ನ ತಿನ್ನುವುದರಿಂದ ನಿಮ್ಮ ಮೆದುಳು ಆರೋಗ್ಯಕರವಾಗಿ, ಆ್ಯಕ್ಟಿವ್ ಆಗಿ ಇರತ್ತೆ.