Friday, July 11, 2025

Latest Posts

BBMP ಗೆ 6000 ಕೋಟಿ ವಿಶೇಷ ಅನುದಾನ

- Advertisement -

ಸರ್ಕಾರ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಗೆ 6.000 ಕೋಟಿ ವಿಶೇಷ ಅನುದಾನ ಕೊಡಲು ಮುಂದಾಗಿದೆ.
ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಈ ಅನುದಾನ ಕೊಡಲು ರೆಡಿಯಾಗಿದೆ. ಈ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
2021 ರ ಆಗಸ್ಟ್ 15 ರಂದು ನಡೆದ ಸ್ವಾತಂತ್ರö್ಯ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ವಾತಂತ್ರö್ಯದ ಅಮೃತ ಮಹೋತ್ಸ÷ವದ ಅಂಗವಾಗಿ ಈ ಯೋಜನೆಯನ್ನು ಪ್ರಕಟಿಸಿದ್ದುç. ಆದರೆ ಮುಂಚೆ ಈ ಯೋಜನೆ 5 ವರ್ಷಗಳವರೆಗೆ ನೀಡುವ ಅನುದಾನ ಇದಾಗಿತ್ತು. ಆದರೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 3 ಕ್ಕೆ ತರಲು ಮುಂದಾಗಿದೆ.
ಇದೇ ವೇಳೆ ನಗರ ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ದಿ ಪಡಿಸಲು 3,885 ಕೋಟಿ ಕ್ರಿಯಾ ಯೋಜನೆಗೂ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸಚಿವ ಸಂಪುಟದ ಬಳಿಕ ಮಾತನಾಡಿ 2022-23 , 2024-25 ರ ವರೆಗೆ ಈ ಯೋಜನೆ ಜಾರಿಗೆ ಬರಲಿದೆ. ಮತ್ತು ಪ್ರತಿವರ್ಷ ಬಿಬಿಎಂಪಿಗೆ ತಲಾ 2,000 ಕೋಟಿ ವಿಶೇಷ ಅನುದಾನ ಒದಗಿಸಲಾಗುವುದು ಎಂದರು.
ಜೊತೆಗೆ ಅತಿಯಾದ ಸಂಚಾರ ದಟ್ಟೆ÷್ಣಯನ್ನು ಹೊಂದಿರುವ ಹೆಬ್ಬಾಳ ಜಂಕ್ಷನ್ ಸುಧಾರಣೆ, ಮತ್ತು ರೈಲು ಮೂಲಸೌಕರ್ಯಗಳ ಅಭಿವೃದ್ದಿಗೆ
ಸಚಿವ ಸಂಪುಟ ಮುಂದಾಗಿದೆ, ಅದೇ ರೀತಿ ಎಲೆಕ್ಟಿçಕ್ ಬಸ್‌ಗಳ ಖರೀದಿಗಾಗಿ ಬಿಎಂಟಿಸಿಗೆ 100 ಕೋಟಿ ಅನುದಾನ ಕೊಡಲು ಮುಂದಾಗಿದೆ. 300 ಎಲೆಕ್ಟಿçಕ್ ಬಸ್ ಖರೀದಿಸಲು ಒಪ್ಪಗೆ ನೀಡಿದೆ.

- Advertisement -

Latest Posts

Don't Miss