National crime News: ನವದೆಹಲಿ: 350 ರೂ.ಗಾಗಿ 16 ವರ್ಷದ ಹುಡುಗನೊಬ್ಬ 18 ವರ್ಷದ ಯುವಕನ ಕತ್ತು ಕೊಯ್ತು ಭೀಕರವಾಗಿ ಕೊಲೆ ಮಾಡಿರುವ ಘಟನೆ, ದೆಹಲಿಯ (Delhi) ಕಾಲೊನಿಯೊಂದರಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಹುಡುಗ ಅದೇ ಶವದ ಮೇಲೆ ನೃತ್ಯಮಾಡಿ ವಿಕೃತಿ ಮೆರೆದಿರುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.
ಈಶಾನ್ಯ ದೆಹಲಿಯ (Northeast Delhi) ಪ್ರದೇಶದ ಕಾಲೊನಿಯೊಂದರಲ್ಲಿ ಕೊಲೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿರುವುದಾಗಿ ಪೊಲೀಸರು (Police) ತಿಳಿಸಿದ್ದಾರೆ. ಆರೋಪಿ ಹುಡುಗ 18ರ ಯುವಕನಿಗೆ 60ಕ್ಕೂ ಹೆಚ್ಚು ಬಾರಿ ಇರಿದು ಕೊಂದಿದ್ದಾನೆ, ನಂತರ ಶವದ ಮೇಲೆ ನಿಂತು ನೃತ್ಯ ಮಾಡಿ ವಿಕೃತಿ ಮೆರೆದಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಹುಡುಗ ಕಳ್ಳತನ ಮಾಡುವ ಉದ್ದೇಶದಿಂದ ಆ ಪ್ರದೇಶಕ್ಕೆ ಬಂದಿದ್ದ. ಅದಕ್ಕಾಗಿ ಮೊದಲು ಯುವಕನ ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾನೆ. ನಂತರ ಆತನ ಬಳಿಯಿದ್ದ ಹಣವನ್ನು ದೋಚಿ, ಅನೇಕ ಬಾರಿ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಒಂದು ಕಿರಿದಾದ ರಸ್ತೆಗೆ ಶವವನ್ನ ಎಳೆದುಕೊಂಡು ಹೋಗಿದ್ದಾನೆ. ಅವನು ಸತ್ತಿದ್ದಾನೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಪದೇ ಪದೆ ಕುತ್ತಿಗೆಯನ್ನು ಕೊಯ್ದಿದ್ದಾನೆ. ಅಷ್ಟಕ್ಕೇ ನಿಲ್ಲದ ಕ್ರೌರ್ಯ ಆತನ ತಲೆಯನ್ನ ಒದ್ದು, ಶವದ ಮೇಲೆ ನಿಂತು ಕುಣಿದಾಡಿದ್ದಾನೆ. ಈ ಭೀಕರ ದೃಶ್ಯಗಳೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಹೇಳಿದ್ದಾರೆ..
ಮಂಗಳವಾರ ರಾತ್ರಿ 11:15ರ ವೇಳೆಗೆ ಕೃತ್ಯ ನಡೆದಿತ್ತು. ಜಂತಾ ಮಜ್ದೂರ್ ಕಾಲೋನಿಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ 18 ವರ್ಷದ ಯುವಕನ ಕೊಲೆಯಾಗಿರುವ ಬಗ್ಗೆ ಕಂಟ್ರೋಲ್ ರೂಮ್‌ಗೆ ಕರೆ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಯುವಕನನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ, ಅದಕ್ಕೂ ಮುನ್ನವೇ ಯುವಕ ಮೃತಪಟ್ಟಿರುವುದು ತಿಳಿದು ಬಂದಿತು ಎಂದು ಪೊಲೀಸ್ ಉಪ ಆಯುಕ್ತ ಜಾಯ್ ಟಿರ್ಕಿ ಹೇಳಿದ್ದಾರೆ.
ಮೈಸೂರು ಕೇಂದ್ರ ಕಾರಾಗೃಹದ ಕಾಂಪೌಂಡ್ ಹಿಂಭಾಗ ಗಾಂಜಾ ಮಾರಾಟ, ಅಬಕಾರಿ ಪೊಲೀಸರ ದಾಳಿ
Zameer Ahmed Khan ವಾಸ್ತವ್ಯವಿದ್ದ ಹೋಟೆಲ್ ಮೇಲೆ ತಡರಾತ್ರಿ ಪೊಲೀಸರ ದಾಳಿ