Monday, October 2, 2023

Latest Posts

12 ಲಕ್ಷ ಬೆಲೆ ಬಾಳುವ 211 ಗ್ರಾಂ ತೂಕದ 7 ಮಾಂಗಲ್ಯ ಸರ ವಶ: ಎಸ್ಪಿ ಹರಿರಾಂ

- Advertisement -

Hassan News: ಜಿಲ್ಲೆಯ ಹಾಗೂ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಹಿಳೆಯರ ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಹಿರಿಸಾವೆ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಲಾಗಿದ್ದು ವಿಚಾರಣೆ ವೇಳೆ ೧೨ ಲಕ್ಷದ ೨೩ ಸಾವಿರದ ೨೧೧ ಗ್ರಾಂ ತೂಕದ ೭ ಮಾಂಗಲ್ಯ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ Hariram Shankar ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹಿರೀಸಾವೆ ವೃತ್ತ ಪೊಲೀಸರ ಕಾರ್ಯಚರಣೆಯಲ್ಲಿ ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಮಂಡ್ಯ ಜಿಲ್ಲೆಯ ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರ ಮಾಂಗಲ್ಯ ಸರಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ಅವರಿಂದ ೧೨,೨೩,೦೦೦ ಬೆಲೆಯ ೨೧೧ ಗ್ರಾಂ ತೂಕದ ಚಿನ್ನದ ೭ ಮಾಂಗಲ್ಯ ಸರಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಪಲ್ಸರ್ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಪ್ರಕರಣ ವಿವರ: ೨೦೨೩ ಏಪ್ರಿಲ್ ೨೫ರ ಮಧ್ಯಾಹ್ನ ೧-೧೫ ಗಂಟೆ ಸಮಯದಲ್ಲಿ ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ ತಾಲ್ಲೂಕು, ಚಿಕ್ಕತರಹಳ್ಳಿ ಗ್ರಾಮದ ವಾಸಿ ನಂಜುಂಡೇಗೌಡ, ರವರ ಬಾಬು ಟಿ.ವಿಎಕ್ಸ್ ಸೂಪರ್ ಬೈಕ್‌ನಲ್ಲಿ ಪತ್ನಿ ಪಾರ್ವತಮ್ಮ ರವರೊಂದಿಗೆ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಹಿರಿಬಿಳಿ ಗ್ರಾಮದ ವಾಸಿ ಸೀನುರವರ ಮನೆಯ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬೈಕ್‌ನಲ್ಲಿ ಬಂದು ೧,೨೦,೦೦೦ ಬೆಲೆಯ ೩೦ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ನಂಜುಂಡೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಪ್ರಕರಣ ದಾಖಲಿಸಿ ತನಿಖೆಯಲ್ಲಿತ್ತು.

ಪ್ರಕರಣದ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿ ಪ್ರಕರಣದ ಗಂಭೀರತೆಯನ್ನು ಅರಿತು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಐಪಿಎಸ್ ರವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ತಮ್ಮಯ್ಯ ರವರ ಮಾರ್ಗದರ್ಶನಲ್ಲಿ ರವಿಪ್ರಸಾದ್, ಡಿವೈಎಸ್‌ಪಿ ಚನ್ನರಾಯಪಟ್ಟಣ ಉಪ-ವಿಭಾಗ, ರವರ ನೇತೃತ್ವದಲ್ಲಿ ಕೆ. ಪ್ರಭಾಕರ್, ಸಿಪಿಐ ಹಿರೀಸಾವೆ ವೃತ್ತ, ಚಂದ್ರಶೇಖರ್, ಪಿಎಸ್‌ಐ ಹಿರೀಸಾವೆ, ಶಿವಶಂಕರ್, ಪಿಎಸ್‌ಐ ಶ್ರವಣಬೆಳಗೊಳ ಪೊಲೀಸ್ ಠಾಣೆ, ರಾಮಚಂದ್ರ ಪಿಎಸ್‌ಐ ನುಗ್ಗೇಹಳ್ಳಿ ಪೊಲೀಸ್ ಠಾಣೆ ರವರುಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡಂತೆ ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ವೇಳೆ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ವಡ್ಡರಹಳ್ಳಿ ಗ್ರಾಮದ ವೃತ್ತದಲ್ಲಿ ಅನುಮಾನಾಸದವಾಗಿ ಹೊಂಚುಹಾಕುತ್ತಿದ್ದ ಚನ್ನರಾಯಪಟ್ಟಣ ತಾಲೂಕು ದಂಡಿಗನಹಳ್ಳಿ ಹೋಬಳಿ ಮಾಳೇನಹಳ್ಳಿ ಗ್ರಾಮದ ಎಂ.ಕೆ. ಸುಧಾಕರ್ ಸಾಗರ್ ೨೩ ವರ್ಷ ಎನ್ನುವ ವ್ಯಕ್ತಿಯನ್ನು ದಸ್ತಗಿರಿ ಮಾಡಿಕೊಂಡು ವಿಚಾರಣೆಗೊಳಪಡಿಸಲಾಗಿ ಕಳ್ಳತನ ಮಾಡಿರುವುದಾಗಿ ತಪ್ಪನ್ನೊಪ್ಪಿಕೊಂಡಿದ್ದು, ಅವರಿಂದ ಸ್ವತ್ತುಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗುವುದು ಎಂದು ಹೇಳಿದರು.

ವಿಧಾನಸಭಾ ಚುನಾವಣೆ ಇದ್ದುದರಿಂದ ತನಿಖೆ ಮಾಡಲು ಸಲ್ಪ ತಡವಾಗಿದ್ದು, ನಂತರ ತನಿಖೆ ಮುಂದುವರೆಸಲಾಯಿತು. ಮಾಂಗಲ್ಯ ಸರಗಳ್ಳತನ ಮಾಡುವ ಆರೋಪಿ ಮಾಂಗಲ್ಯವನ್ನು ಸರದಿಂದ ತೆಗೆದು ಅದನ್ನು ಒಂದು ಕೆರೆಗೆ ಹಾಕಿರುವುದಾಗಿ ವಿಚಾರಣೆ ವೇಳೆ ಹೇಳಲಾಗಿದೆ. ಇನ್ನು ಕಳವು ಆಗಿರುವ ಬಗ್ಗೆ ಸುಳಿವು ಇದ್ದರೂ ಕೆಲವನ್ನು ಮಾರಾಟ ಮಾಡಲಾಗಿ ಅಲ್ಲಿಂದ ವಾಪಸ್ ತರಲಾಗಿದೆ ಎಂದರು.

ಇದೆ ವೇಳೆ ಚನ್ನರಾಯಪಟ್ಟಣ ಉಪವಿಭಾಗ ಸಿಪಿಐ ಕೆ. ಪ್ರಭಾಕರ್, ಡಿವೈಎಸ್ಪಿ ರವಿಪ್ರಸಾದ್ ಇತರರು ಉಪಸ್ಥಿತರಿದ್ದರು. Hassan Police

ನಾಗರಾಜ್. ಕರ್ನಾಟಕ ಟಿವಿ. ಹಾಸನ

ರಾಹುಲ್ ಪೌರತ್ವ ಮುಟ್ಟುಗೋಲು, ಗಡೀಪಾರು ಮಾಡಲು ಛಲವಾದಿ ನಾರಾಯಣಸ್ವಾಮಿ ಆಗ್ರಹ

ಶಾಸಕರ ಮನೆ ಹತ್ತಿರವೇ ಕುಡುಕರ ಅಡ್ಡೆ: ಸಿಎಲ್-7 ವಿರುದ್ಧ ಗುಡುಗಿದ ಶಾಸಕ ಸ್ವರೂಪ್

‘ಶೆಟ್ಟರ್, ಸವದಿ, ಗುಬ್ಬಿ ಶ್ರೀನಿವಾಸ್ ಅವರಿಂದ ನಮಗೆ ಶಕ್ತಿ ಬಂದಿದೆ’

- Advertisement -

Latest Posts

Don't Miss