Sunday, September 8, 2024

Latest Posts

ಮೊದಲ ಬಾರಿಗೆ ತಾಯಿಯಾದ 70 ವರ್ಷದ ಹಣ್ಣಣ್ಣು ಮುದುಕಿ..!

- Advertisement -

www.karnatakatv.net: ಇತ್ತೀಚೆಗೆ ತಡವಾಗಿ ಮದುವೆಯಾಗೋದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಲೈಫಲ್ಲಿ ಏನಾದ್ರೂ ಅಚೀವ್ ಮಾಡ್ತೀವಿ, ಅದೂ ಇದೂ ಅಂತ ಈಗಿನ ಜನರೇಷನ್ ಮಿನಿಮಮ್ ಅಂದ್ರೆ 35 ವರ್ಷವಾಗೋವರೆಗೂ ಮದ್ವೆಯಾಗೋ ಬಗ್ಗೆ ತಲೇನೇ ಕೆಡಿಸಿಕೊಳ್ಳೋದಿಲ್ಲ. ಇಂಥಹವರಿಗೆ ಮಕ್ಕಳಾಗೋದು ಸ್ವಲ್ಪ ಕಷ್ಟವಾಗಬಹುದು. ಇಂಥಹವರಿಗಾಗಿಯೇ ವೈದ್ಯಲೋಕದಲ್ಲಿ ಐವಿಎಫ್ ತಂತ್ರಜ್ಞಾನ ವರದಾನವಾಗಿದೆ. 50 ದಾಟಿದ ಮಹಿಳೆಯರೂ ಕೂಡ ಈ ಐವಿಎಫ್ ತಂತ್ರಜ್ಞಾನದಿoದ ಮಕ್ಕಳನ್ನು ಪಡೀಬಹುದು. ಆದ್ರೆ ಇದೇ ತಂತ್ರಜ್ಞಾನದಿoದ 70 ವರ್ಷ ವಯಸ್ಸಿನ ಅಜ್ಜಿಯೊಬ್ಬರು ಮಗುವನ್ನು ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ನಿಜ..ಇತ್ತೀಚೆಗೆ ಯುವಜನತೆಯನ್ನ ಬಂಜೆತನದ ಸಮಸ್ಯೆ ಅತಿ ಹೆಚ್ಚಾಗಿ ಕಾಡ್ತಿದೆ. ದೇಹದಲ್ಲಿನ ನ್ಯೂನ್ಯತೆ ಸೇರಿದಂತೆ ನಾನಾ ಸಮಸ್ಯೆಗಳು ಬಂಜೆತನಕ್ಕೆ ಕಾರಣವಾಗುತ್ತೆ. ಆದ್ರೆ ನಾವೂ ಎಲ್ಲರಂತೆ ನಮ್ಮ ಕುಟುಂಬವನ್ನು ಸಂಪೂರ್ಣಗೊಳಿಸಬೇಕು, ನಮಗೂ ಒಂದು ಮಗು ಬೇಕು ಅಂತ ಅದೆಷ್ಟೋ ದಂಪತಿ ಹಂಬಲಿಸುತ್ತಿದ್ದಾರೆ. ಇಂತಹವರಿಗಾಗಿಯೇ ಈ ಐವಿಎಫ್ ತಂತ್ರಜ್ಞಾನ ಅವಿಷ್ಕರಿಸಲಾಗಿದೆ. ಹೌದು, ಈ ಐವಿಎಫ್ ತಂತ್ರಜ್ಞಾನದಿoದಾಗಿ ವಿಶ್ವದಲ್ಲಿ ಕೋಟ್ಯಂತರ ಮಂದಿ ದಂಪತಿ ಮಕ್ಕಳನ್ನು ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐವಿಎಫ್ ಚಿಕಿತ್ಸಾ ಪದ್ಧತಿ ಅತಿ ಹೆಚ್ಚು ಚಾಲ್ತಿಯಲ್ಲಿದೆ. 50 ದಾಟಿದವ್ರೂ ಕೂಡ ಈ ಚಿಕಿತ್ಸಾ ವಿಧಾನದಿಂದ ಮಕ್ಕಳನ್ನು ಪಡೀಬಹುದು. ಆದ್ರೆ ನಾವೀಗ ಹೇಳೋದಕ್ಕೆ ಹೊರಟಿರೋದು 70 ವರ್ಷದ ಹಣ್ಣಣ್ಣು ಮುದುಕಿಯೊಬ್ಬರು ಮೊದಲ ಬಾರಿಗೆ ತಾಯಿಯಾಗಿರೋ ಕಥೆಯನ್ನ.

ಈಕೆಯ ಹೆಸ್ರು ಜಿವುಬೆನ್ ವಾಲಾಭಾಯಿ. ಗುಜರಾತ್ ನ ಕಚ್ ಜಿಲ್ಲೆಯ ಮೋರಾ ಗ್ರಾಮದ ನಿವಾಸಿ. ಸುಂದರ ಜೀವನ ನಡೆಸ್ತಿದ್ದ ಜಿವುಬೆನ್ ದಂಪತಿಗೆ ಅದ್ಯಾಕೋ ಮಕ್ಕಳೇ ಆಗಲಿಲ್ಲ. ಸಿಕ್ಕ ಸಿಕ್ಕವರೆಲ್ಲಾ ಮಕ್ಕಳಿಲ್ಲಾ ಅನ್ನೋ ಬಗ್ಗೆ ಈ ದಂಪತಿಯ ಮನಸ್ಸಿಗೆ ನೋವಾಗೋ ಹಾಗೆ ಮಾತನಾಡ್ತಿದ್ರಂತೆ. ಇದರಿಂದ ತುಂಬಾ ಬೇಸರಗೊಂಡಿದ್ದ ಈ ದಂಪತಿಗೆ ಐವಿಎಫ್ ನಿಂದ ಮಗು ಪಡೆಯಬಹುದು ಅನ್ನೋ ವಿಚಾರ ಇತ್ತೀಚೆಗೆ ತಿಳಿದಿದೆ. ಆದ್ರೆ ಮದ್ವೆಯಾಗಿ ಈಗಾಗಲೇ 45 ವರ್ಷಗಳೇ ಕಳೆದುಹೋಗಿವೆ, ಈಗ ಮಕ್ಕಳು ಮರಿ ಏನೂ ಬೇಡಪ್ಪಾ ಅಂತ ಈ ದಂಪತಿ ಸುಮ್ಮನೆ ಕೂರಲಿಲ್ಲ. ಹೇಗಾದ್ರೂ ಮಾಡಿ ನಾವು ಮಕ್ಕಳು ಪಡೀಲೇಬೇಕು ಅಂತ ಜಿವುಬೆನ್ ದೃಢ ನಿರ್ಧಾರ ತೆಗೆದುಕೊಂಡ್ರು. ಅದರಂತೆ ಈ ಹಣ್ಣಣ್ಣು ಮುದುಕಿ ಜಿವುಬೆನ್, ಭುಜ್ ನಲ್ಲಿರೋ ಖಾಸಗಿ ಆಸ್ಪತ್ರೆ ವೈದ್ಯರ ಬಳಿ ತೆರಳಿ ನನಗೆ ಮದುವೆಯಾಗಿ 45 ವರ್ಷ ಆಗಿದೆ, ನನ್ನ ವಯಸ್ಸು 70. ನೀವು ಏನು ಮಾಡ್ತೀರೋ ಏನೋ ನಂಗೆ ಗೊತ್ತಿಲ್ಲ, ನಾನೂ ಒಂದು ಮಗು ಪಡೆಯುವಂತೆ ಚಿಕಿತ್ಸೆ ನೀಡಿ ಅಂತ ಧೈರ್ಯವಾಗಿ ಹೇಳಿದ್ಲು. ಇನ್ನು ಈಕೆಯ ಮಾತು ಕೇಳಿ ವೈದ್ಯರೇ ಕ್ಷಣಕಾಲ ದಂದಾಗಿಬಿಟ್ರು. ಈ ವಯಸ್ಸಲ್ಲೂ ಈಕೆಯ ಈ ಧೈರ್ಯ ನೋಡಿ ವೈದ್ಯರು ಕೂಡ ಚಿಕಿತ್ಸೆ ನೀಡೋದಾಗಿ ತಿಳಿಸಿದ್ರು.

ಇನ್ನುಈ ಅಜ್ಜಿಗೆ ಐವಿಎಫ್ ಮೂಲಕ ಚಿಕಿತ್ಸೆ ನೀಡೋದು ಭುಜ್ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಯಾಕಂದ್ರೆ ಅದಾಗಲೇ ಜಿವುಬೆನ್ ಗೆ ಮುಟ್ಟು ನಿಂತಿತ್ತು. ಹೀಗಾಗಿ ಕೃತಕವಾಗಿ ಮುಟ್ಟಾಗುವಂತೆ ಮಾಡಿ, ಆಕೆಯ ಗರ್ಭಕೋಶಕ್ಕೆ ಶಕ್ತಿ ತುಂಬಿ ಈ ಚಿಕಿತ್ಸೆ ನೀಡಲಾಯ್ತು. ಇನ್ನು ಐವಿಎಫ್ ನಿಂದ ಮಗು ಪಡೆಯೋದೇನೂ ಸುಲಭದ ಮಾತಲ್ಲ, ಇದಕ್ಕೆ ನಾನಾ ನಿಯಮಗಳನ್ನ ಚಾಚೂ ತಪ್ಪದೇ ಪಾಲಿಸಬೇಕು. ಇಲ್ಲದಿದ್ರೆ ಗರ್ಭಾವಸ್ತೆಯ ಯಾವುದೇ ಹಂತದಲ್ಲಾದ್ರೂ ಗರ್ಭಪಾತವಾಗೋ ಚಾನ್ಸಸ್ ಇರುತ್ತೆ. ಹೀಗಾಗಿ ಜಿವುಬೆನ್ ವೈದ್ಯರು ಹೇಳಿದ ಎಲ್ಲಾ ರೂಲ್ಸ್ ಫಾಲೋ ಮಾಡಿದ್ರು. ಹೀಗಾಗಿ ಕಳೆದ ತಿಂಗಳು ಈ ಅಜ್ಜಿ ಜಿವುಬೆನ್ ಶಿಶುವಿಗೆ ಜನ್ಮ ನೀಡಿದ್ದಾರೆ.

ಇನ್ನು ತಾವು ತಾಯಿಯಾಲೇ ಬೇಕು ಅನ್ನುವ ಜಿವುಬೆನ್ ಅವರ ಅಚಲ ನಿರ್ಧಾರವೇ ನಾವು ಈ ಪ್ರಕ್ರಿಯೆ ಶುರುಮಾಡುವಂತೆ ಮಾಡಿತು ಎಂದು ವೈದ್ಯರು ಹೇಳಿದ್ದಾರೆ.

ಒಟ್ಟಾರೆ ಎಲ್ಲಾ ವಯಸ್ಸಿನ ಮಹಿಳೆಯರು ತಾಯಿಯಾಗೋದಕ್ಕೆ ಪೂರಕವಾಗಿರೋ ಈ ಐವಿಎಫ್ ಚಿಕಿತ್ಸಾ ವಿಧಾನ ಸದ್ಯ ಈ ಬೊಚ್ಚು ಬಾಯಿಯ ಅಜ್ಜಿ ಜಿವು ಬೆನ್ ಬಾಳಲ್ಲಿ ಹೊಸ ಬೆಳಕು ತಂದಿದೆ. ಇನ್ನು ಮರಿಮೊಮ್ಮಕ್ಕಳ ಜೊತೆ ಕಾಲ ಕಳೆಯೂ ಈ ವಯಸ್ಸಲ್ಲಿ ಈ ಅಜ್ಜಿ ಮೊದಲ ಬಾರಿಗೆ ತಾಯಿಯಾಗಿರೋದು ಇಡೀ ದೇಶವನ್ನೇ ಬೆರಗುಗೊಳಿಸಿದೆ.

- Advertisement -

Latest Posts

Don't Miss