State News: ದೇಶಾದ್ಯಂತ 75ನೇ ಗಣರಾಜ್ಯೋತ್ಸವದ ಸಂಭ್ರಮವಿದ್ದು, ಕರ್ನಾಟಕದ ಕೆಲವು ಭಾಗಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದೆ. ಕೋಲಾರ, ಧಾರವಾಡ, ಹುಬ್ಬಳ್ಳಿಯಲ್ಲಿ ರಾಜಕೀಯ ಗಣ್ಯರು ಧ್ವಜಾರೋಹಣ ನೆರವೇರಿಸಿದ್ದಾರೆ.
Dharwad News: ಧಾರವಾಡ: ಧಾರವಾಾಡದಲ್ಲಿ 75ನೇಯ ಗಣರಾಜ್ಯೋತ್ಸವ ಸಂಭ್ರಮವಿದ್ದು, ದಾರವಾಡದ ಆರ್.ಎನ್.ಶೆಟ್ಟಿ ಮೈದಾನದಲ್ಲಿ ಧ್ವಜಾರೋಹಣ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಧ್ವಜಾರೋಹಣ ಮಾಡಿದ್ದು, ಜಿಲ್ಲಾಧಿಕಾರಿ ಟಿ ಕೆ ಸ್ವರೂಪ್ ಸಾಥ್ ನೀಡಿದ್ದಾರೆ. ಈ ವೇಳೆ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮಾಗಾಂಧಿ ಫೋಟೋಗೆ ಮಾಲಾರ್ಪಣೆ ಮಾಡಿದ್ದು, ವಿವಿಧ ಪೊಲೀಸ್ ತಂಡಗಳಿಂದ ಗೌರವ ಪಥಸಂಚಲನ ನೆರವೇರಿದೆ.
Kolar News: ಕೋಲಾರ: ಕೋಲಾರದಲ್ಲೂ ಗಣರಾಜ್ಯೋತ್ಸವ ಆಚರಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ರಿಂದ ಧ್ವಜಾರೋಹಣ ನೆರವೇರಿದೆ. ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅದ್ದೂರಿ ಗಣರಾಜ್ಯೋತ್ಸವ ಆಚರಣೆ ಮಾಡಿದ್ದು, ಪೋಲೀಸ್ ಹಾಗೂ ವಿದ್ಯಾರ್ಥಿಗಳ ವಿವಿಧ ತಂಡಗಳಿಂದ ಪಥ ಸಂಚಲನ ನಡೆದಿದೆ. ನೂರಾರು ಶಾಲಾ ಮಕ್ಕಳು, ವಿಶೇಷ ಚೇತನ ಶಾಲಾ ಮಕ್ಕಳು ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ವಿಧಾಮ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂಪಾಷ, ಸಿಇಓ ಪದ್ಮಬಸಸಂತಪ್ಪ ಎಸ್ ಪಿ ನಾರಾಯಾಯಣ್ ಭಾಗಿಯಾಗಿದ್ದರು.
Gadag News: ಗದಗ: ಗದಗ ಜಿಲ್ಲೆಯಲ್ಲಿ ಸಂಭ್ರಮದ 75 ನೇ ಗಣರಾಜ್ಯೋತ್ಸವ ನಡೆದಿದ್ದು, ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಎಚ್ ಕೆ ಪಾಟೀಲ್ ರಿಂದ ರಾಷ್ಟ್ರ ಧ್ವಜಾರೋಹಣ ನೆರವೇರಿದೆ. ಎಚ್ ಕೆ ಪಾಟೀಲ್ ರಿಂದ ಪರೇಡ್ ಪರಿವೀಕ್ಷಣೆ ನಡೆಯಿತು. ಪೊಲೀಸ್, ಅಬಕಾರಿ, ಅರಣ್ಯ, ಎನ್ ಸಿ ಸಿ ಸೇವಾದಳ ತಂಡಗಳಿಂದ ಪಥಸಂಚಲನ ನೆರವೇರಿದ್ದು, ಕಾರ್ಯಕ್ರಮದಲ್ಲಿ ವಿ. ಪ. ಸದಸ್ಯ ಎಸ್ ವಿ ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಎಸ್ಪಿ ಬಿ ಎಸ್ ನೇಮಗೌಡ ಭಾಗಿಯಾಗಿದ್ದರು.
ಶೆಟ್ಟರ್ ಅವರ ಇತ್ತೀಚಿನ ಬೆಳವಣಿಗೆ ಗಮನಿಸಿದ್ರೆ ಅವರೊಬ್ಬ ಅವಕಾಶವಾದಿ ಅನ್ನಿಸುತ್ತೆ: ಸಂತೋಷ್ ಲಾಡ್
‘ಕಳೆದ ಬಾರಿ ಬಂದಾಗ ಮೊಟ್ಟೆ ಎಸೆದಿದ್ದರು, ಈ ಬಾರಿ ಹೂವಿನ ಸುರಿಮಳೆ ಸುರಿಸಿದ್ದಾರೆ’
‘ಮಾತೆತ್ತಿದರೆ ಮೋದಿಯನ್ನು ನಿಂದಿಸುವ ಸಿದ್ದರಾಮಯ್ಯರದ್ದು ಕೆಲಸದಲ್ಲಿ ಆಮೆ ವೇಗ ಎನ್ನುವುದಕ್ಕೆ ಇದೇ ಸಾಕ್ಷಿ’




