International News: ಹಲವು ದಿನಗಳಿಂದ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧ, ಮುಗಿಯುವ ಸೂಚನೆಯೇ ಸಿಗುತ್ತಿಲ್ಲ. ಇಂದು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 78 ಮಂದಿ ಪ್ಯಾಲೇಸ್ತಿನ್ ನಾಗರಿಕರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಐವರು ಇಸ್ರೇಲ್ ಒತ್ತೆಯಾಳುಗಳ ಶವ ಸಿಕ್ಕಿದೆ.
ಗಾಜಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, 78 ಮಂದಿ ಪ್ಯಾಲೆಸ್ತಿನ್ ನಿರಾಶ್ರಿತರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಗಾಜಾದ ಸುರಂಗವೊಂದರಲ್ಲಿ ಐವರು ಇಸ್ರೇಲ್ ಒತ್ತೆಯಾಳುಗಳ ಶವ ಸಿಕ್ಕಿದ್ದು, ಅದನನ್ನನು ಇಸ್ರೇಲ್ ಸೇನೆ ವಶಪಡಿಸಿಕೊಂಡಿದೆ.
ವಿಪರ್ಯಾಸದ ಸಂಗತಿ ಏನಂದ್ರೆ, ಇಂದು ಕ್ರಿಸ್‌ಮಸ್ ಹಬ್ಬವಾಗಿದೆ. ಆದರೆ ಏಸುವಿನ ಜನ್ಮಭೂಮಿಯಲ್ಲೇ ಕ್ರಿಸ್‌ಮಸ್ ಸಂಭ್ರಮವಿಲ್ಲ. ಪ್ಯಾಲೆಸ್ತಿನ್‌ನ ಬೆತಲ್‌ಹೆಮ್‌ನಲ್ಲಿ ಏಸುವಿನ ಜನನವಾಗಿತ್ತು. ಇದೇ ದಿನವನ್ನು ಕ್ರಿಶ್ಚಿಯನ್ನರು ಕ್ರಿಸ್‌ಮಸ್ ಎಂದು ಆಚರಿಸುತ್ತಾರೆ. ಆದರೆ ಸದ್ಯ ಈ ಭೂಮಿಯಲ್ಲೇ ಇಸ್ರೇಲ್- ಹಮಾಸ್ ಯುದ್ಧ ನಡೆಯುತ್ತಿದ್ದು, ಸಂಭ್ರಮಾಚರಣೆ ಇರುವ ಸ್ಥಳದಲ್ಲಿ ಶೋಕಾಚರಣೆ ನಡೆಯುತ್ತಿದೆ.
ಸಿದ್ದರಾಮಯ್ಯ ಮುಗ್ಧ ಅಲ್ಲ, ಧೂರ್ತರಿದ್ದಾರೆ – ಕೇಂದ್ರ ಸಚಿವ ಜೋಶಿ ಕಿಡಿ
ಬಿ.ಕೆ.ಹರಿಪ್ರಸಾದ್ ಮಾನಸಿಕ ಸ್ಥಿತಿ ಸರಿಯಲ್ಲ: ಮಾಜಿ ಡಿಸಿಎಂ ಗೋವಿಂದ ಕಾರಜೋಳ
ಪ್ರತ್ಯೇಕ ಧರ್ಮದ ಹೆಸರಲ್ಲಿ ಒಡೆಯುವಂಥ ಕೆಲಸ ಮಾಡಬೇಡಿ: ಜಗದೀಶ್ ಶೆಟ್ಟರ್




