International News: ಕತಾರ್‌ನಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ 8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಬಿಡುಗಡೆಗೊಳಿಸಲಾಗಿದೆ.
ಬೇಹುಗಾರಿಕೆ ಮಾಡುತ್ತಿರುವ ಆರೋಪದಡಿಯಲ್ಲಿ ಭಾರತದ 8 ಮಾಜಿ ಅಧಿಕಾರಿಗಳನ್ನು ಕತಾರ್ ತನ್ನ ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೇ, ಅವರಿಗೆ ಮರಣ ದಂಡನೆಯ ಶಿಕ್ಷೆಯನ್ನು ನೀಡಿತ್ತು. ಆದರೆ ಕೇಂದ್ರ ಸರ್ಕಾರ ತನ್ನ ಸತತ ಪ್ರಯತ್ನಗಳಿಂದ, ಆ ಅಧಿಕಾರಿಗಳನ್ನು ಪುನಃ ಕರೆಯಿಸಿಕೊಳ್ಳುವುದರಲ್ಲಿ ಸಫಲವಾಗಿದೆ. ಹೀಗಾಗಿ ಅಧಿಕಾರಿಗಳು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ. ಬಿಡುಗಡೆಯಾದ 8 ಮಂದಿಯಲ್ಲಿ 7 ಮಂದಿ ಭಾರತಕ್ಕೆ ಮರಳಿದ್ದಾರೆ.
ಈ ಹಿಂದೆ ಅಧಿಕಾರಿಗಳಿಗೆ ನೀಡಿದ್ದ ಮರಣ ದಂಡನೆಯ ಶಿಕ್ಷೆಯನ್ನು ಜೈಲು ಶಿಕ್ಷೆಯಾಗಿ ಪರಿವರ್ತಿಸುವಂತೆ, ಭಾರತ ಸರ್ಕಾರ ಮನವಿ ಮಾಡಿದ್ದ ಕಾರಣಕ್ಕೆ, ಕತಾರ್ ಈ ಅಧಿಕಾರಿಗಳ ಮರಣ ದಂಡನೆ ಶಿಕ್ಷೆ ಬದಲಿಸಿ, ಜೈಲು ಶಿಕ್ಷೆ ನೀಡಿತ್ತು. ಇದೀಗ ಅವರನ್ನು ಬಿಡುಗಡೆಗೊಳಿಸಿ, ಭಾರತಕ್ಕೆ ಕರೆಯಿಸಿಕೊಳ್ಳಲಾಗಿದೆ.
ರಿಲೀಸ್ ಆದ ಅಧಿಕಾರಿಗಳು, ಏರ್ಪೋರ್ಟ್‌ನಲ್ಲಿ ಭಾರತ್ ಮಾತಾ ಕೀ ಜೈ ಎಂದು ಜೈಕಾರ ಕೂಗಿ, ಪ್ರಧಾನಿ ಮೋದಿ ಇಲ್ಲದೇ, ನಮ್ಮ ಬಿಡುಗಡೆ ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ನಮ್ಮ ಧನ್ಯವಾದಗಳು ಎಂದಿದ್ದಾರೆ. ಇನ್ನು ಇವರೆಲ್ಲ ಕತಾರ್‌ಗೆ ಹೇಗೆ ಹೋದರು ಎಂದರೆ, ಕತಾರ್ ನೌಕಾಪಡೆಗೆ ಇವರೆಲ್ಲ ತರಬೇತಿ ನೀಡುತ್ತಿದ್ದರು. ಈ ವೇಳೆ ಇವರ ಮೇಲೆ ಬೇಹುಗಾರಿಕೆ ಆರೋಪ ಹೊರಿಸಿ, ಜೈಲಿಗೆ ಹಾಕಲಾಗಿತ್ತು.
‘ಇಂಥವರಿಗೆ ರಾಮನ ದಯೆಯೂ ಇರಲಾರದು, ಚಾಮುಂಡೇಶ್ವರಿ ಆಶೀರ್ವಾದವೂ ಸಿಗಲಾರದು’
ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್: ಸಚಿವ ಕೆ.ಎನ್.ರಾಜಣ್ಣ