Sunday, September 8, 2024

Latest Posts

‘ನಾನೂ ಆರ್ಮಿ ಸೇರುತ್ತೇನೆ’- ಮೊಮ್ಮಕ್ಕಳ ಜೀವ ಉಳಿಸಲು ಯುದ್ಧ ಮಾಡಲು ಬಂದ ವೃದ್ಧ..

- Advertisement -

ಉಕ್ರೇನ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮಕ್ಕಳು, ಮಹಿಳೆಯರು ರೋದಿಸುತ್ತಿರುವ ವೀಡಿಯೋ, ಫೋಟೋ ಎಲ್ಲ ವೈರಲ್ ಆಗುತ್ತಿದೆ. ತಿನ್ನುವ ಅನ್ನಕ್ಕೂ ಕುತ್ತು ಬಂದಿರುವ ಪರಿಸ್ಥಿತಿ. ಭಾರತೀಯ ವಿದ್ಯಾರ್ಥಿಗಳು ಕೂಡ ಇದೇ ರೀತಿ ಒದ್ದಾಡುತ್ತಿದ್ದಾರೆ. ಓರ್ವ ವಿದ್ಯಾರ್ಥಿ ಹೇಳುವ ಪ್ರಕಾರ, ನಾವು ಮೂರು ದಿನದಿಂದ ಬ್ರೆಡ್, ಚಿಪ್ಸ್ ತಿಂದು ನೀರು ಕುಡಿದು ಬದುಕುತ್ತಿದ್ದೇವೆ ಎಂದಿದ್ದಾರೆ. ಸದ್ಯ ಅಷ್ಟು ಹದಗೆಟ್ಟ ಪರಿಸ್ಥಿತಿ ಉಕ್ರೇನ್‌ದು.

ಇಂಥ ಪರಿಸ್ಥಿತಿಯಲ್ಲಿ 80 ವರ್ಷ ವಯಸ್ಸಿನ ವೃದ್ಧನೋರ್ವ, ತಾನೂ ಕೂಡ ಆರ್ಮಿ ಸೇರಿಕೊಳ್ಳುತ್ತೇನೆಂದು ಹೇಳಿ ಬಂದಿದ್ದಾರೆ. ಬರುವಾಗ ಒಂದು ಪುಟ್ಟ ಬ್ಯಾಗ್ ತಂದಿದ್ದಾರೆ. ಆ ಬ್ಯಾಗ್‌ನಲ್ಲಿ ಟೂತ್ ಬ್ರಶ್, 2 ಜೊತೆ ಪ್ಯಾಂಟ್- ಶರ್ಟ್, ತಿನ್ನಲು ಒಂದೆರಡು ಸ್ಯಾಂಡ್‌ವಿಚ್ ತಂದಿದ್ದಾರೆ. ಈ ವಯಸ್ಸಿನಲ್ಲಿ ಯಾಕೆ, ಈ ನಿರ್ಧಾರ ಎಂದು ಕೇಳಿದರೆ, ಈ ದಾಳಿಯಿಂದ ನನ್ನ ಮೊಮ್ಮಕ್ಕಳನ್ನು ರಕ್ಷಿಸುವುದಕ್ಕಾಗಿ, ನಾನು ಆರ್ಮಿ ಸೇರಲು ಬಂದಿದ್ದೇನೆಂದು ಹೇಳಿದ್ದಾರೆ.

ನೆಟ್ಟಿಗರು ಇವರ ಮಾತಿಗೆ ಭೇಷ್ ಎಂದಿದ್ದಾರೆ. ಈ ವಯಸ್ಸಿನಲ್ಲೂ ವೃದ್ಧನ ಧೈರ್ಯಕ್ಕೆ ಮೆಚ್ಚಿದ್ದಾರೆ. ಓರ್ವ ವೃದ್ಧ ಈ ಫೋಟೋಗೆ ಕಾಮೆಂಟ್ ಮಾಡಿದ್ದು, ನನಗೂ ವಯಸ್ಸು 80 ಆಗುತ್ತ ಬಂದಿದೆ. ದೇಶಕ್ಕಾಗಿ ಹೋರಾಡುವ  ಪರಿಸ್ಥಿತಿ ಬಂದ್ರೆ, ನಾನೂ ಸಿದ್ಧನಾಗಿದ್ದೇನೆ ಎಂದಿದ್ದಾರೆ. ಅಲ್ಲದೇ ಇನ್ನೋರ್ವರು ಕಾಮೆಂಟ್ ಮಾಡಿದ್ದು, ಉಕ್ರೇನಿಯನ್ನರಿಗೆ ತಮ್ಮ ದೇಶದ ಮೇಲಿರುವ ಪ್ರೀತಿ ಎಂಥದ್ದು ಎಂದು ಪುಟೀನ್ ಇನ್ನೂ ಅರ್ಥ ಮಾಡಿಕೊಂಡಿಲ್ಲವೆಂದು ಹೇಳಿದ್ದಾರೆ.

- Advertisement -

Latest Posts

Don't Miss