Thursday, August 7, 2025

Latest Posts

ಇವರ ಜೊತೆ ಪೋಟೋ ತೆಗಿಸಿಕೊಳ್ಳೋಕ್ಕೆ ಕಿಚ್ಚ 36 ವರ್ಷ ಕಾದಿದ್ದರಂತೆ..!

- Advertisement -

ಕೆಲವರಿಗೆ ಒಂದಲ್ಲ ಒಂದು ಆಸೆ ಇದ್ದೇ ಇರತ್ತೆ, ನಾನು ಈ ಸ್ಟಾರ್ ಜೊತೆ ಒಂದು ದಿನ ಫೋಟೋ ತೆಗಿಸಿಕೊಳ್ಳಬೇಕು. ಇವರ ಜೊತೆ ಒಮ್ಮೆಯಾದರೂ ಮಾತನಾಡಲೇಬೇಕು. ಒಂದು ದಿನ ಇವರನ್ನು ನಾನು ನೋಡೇ ನೋಡ್ತೀನಿ. ಹೀಗೆ ಸೆಲೆಬ್ರಿಟಿಗಳ ಬಗ್ಗೆ ಹಲವರಿಗೆ ಆಸೆಯಿರುತ್ತದೆ. ಅದೇ ರೀತಿ ಕಿಚ್ಚ ಸುದೀಪ್ ಕೂಡ ಒಬ್ಬರೊಂದಿಗೆ ಫೋಟೋ ತೆಗೆಸಿಕೊಳ್ಳಲು 36 ವರ್ಷಗಳಿಂದ ಕಾದಿದ್ದರಂತೆ. ಹೀಗಂತಾ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋವೊಂದರ ಪೋಸ್ಟ್ ಹಾಕಿದ್ದಾರೆ.

https://www.instagram.com/p/CXpzol4LzXg/

ಅಷ್ಟಕ್ಕೂ ಕಿಚ್ಚ ಸುದೀಪ್ ಫೋಟೋ ತೆಗಿಸಿಕೊಳ್ಳೋದಕ್ಕೆ 36  ವರ್ಷದಿಂದ ಕಾದಿದ್ದ ಆ ಸೆಲೆಬ್ರಿಟಿ, ಇಂಡಿಯನ್ ಕ್ರಿಕೇಟ್ ಟೀಮ್‌ನ ಮಾಜಿ ಕ್ಯಾಪ್ಟನ್ ಕಪೀಲ್ ದೇವ್. ಕಪಿಲ್ ಮೊದಲ ಬಾರಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಕಥೆಯನ್ನ ಆಧರಿಸಿ ಬರುತ್ತಿರುವ 83 ಸಿನಿಮಾ ಪ್ರಮೋಷನ್‌ಗಾಗಿ ಬೆಂಗಳೂರಿಗೆ ಆಗಮಿಸಿದ್ದರು.

https://www.instagram.com/p/CXqIP__PnZ-/

ಈ ವೇಳೆ ಬಾಲಿವುಡ್ ನಟ ರಣಬೀರ್ ಸಿಂಗ್, ಸುದೀಪ್, ಮಾಜಿ ಕ್ರಿಕೇಟಿಗ ಶ್ರೀಕಾಂತ್ ಉಪಸ್ಥಿತರಿದ್ದರು. 83 ಸಿನಿಮಾದ ಪ್ರಮೋಷನ್ ನಡೆಯುವ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಸೆಲೆಬ್ರಿಟಿಗಳು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಬಳಿಕ ಸೆಲೆಬ್ರಿಟಿಗಳು ಫೋಟೋ ತೆಗಿಸಿಕೊಂಡರು. ಈ ವೇಳೆ ಸುದೀಪ್, ಕಪೀಲ್ ದೇವ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನ ತಮ್ಮ ಇನ್‌ಸ್ಟಾ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರೊಂದಿಗೆ ಈ ಒಂದು ಫೋಟೋಗಾಗಿ 36 ವರ್ಷ ಕಾದಿದ್ದಾಗಿ ಬರೆದುಕೊಂಡಿದ್ದಾರೆ.

- Advertisement -

Latest Posts

Don't Miss