National news :
ಆಕೆಯದ್ದು ಇನ್ನೂ ಮಗ್ಧತೆಯ ಬದುಕು ಇನ್ನೇನು ಜೀವನದ ವೈಭವವನ್ನು ಅನುಭವಿಸಬೇಕಾಗಿತ್ತು ಆದರೆ ಅದಾಗಲೇ ಆಕೆ ಎಲ್ಲ ವನ್ನು ತ್ಯಾಗ ಮಾಡಿ ಜೀವನದಲ್ಲಿ ಹೊಸ ಹೆಜ್ಜೆಯನ್ನು ಹಿಟ್ಟಿದ್ದಾಳೆ..
ಹೌದು ಅವಳಿಗೆ ಯಾವುದರಲ್ಲೂ ಕಮ್ಮಿ ಇರಲಿಲ್ಲ ತಂದೆಯ ಐಷಾರಾಮಿ ಬಂಗಲೆಯಲ್ಲಿ ಡ್ಯಾಡ್ಸ್ ಲಿಟಲ್ ಪ್ರಿನ್ಸöಸ್ ಆಗಿ ಬದುಕ ಬಹುದಿತ್ತು. ದಿನಕ್ಕೊಂದು ಕಾರಿನಲ್ಲಿ ಸುತ್ತಾಡಬಹುದಿತ್ತು. ಸ್ನೇಹಿತರ ಜೊತೆ ಆಟವಾಡಿಕೊಂಡು ಜೀವನವನ್ನು ಫುಲ್ ಎಂಜಾಯ್ ಮಾಡಬಹುದಿತ್ತು.ಆದರೆ ಆಕೆ ಮಾಡಿದ್ದು ಮಾತ್ರ ನಿಜಕ್ಕೂ ಜಗತ್ತೇ ನಿಬ್ಬೆರಗಾಗಿಸುವ ಆ ಮಹಾ ಕರ‍್ಯ.
ಎಲ್ಲವನ್ನು ಬದಿಗೊತ್ತಿ ಐಷಾರಾಮಿ ಜೀವನವನ್ನು ತ್ಯಜಿಸಿದ ೯ ರ ಬಾಳೆ ಧರ‍್ಮಿಕತೆಗೆ ಮನಸೋತು ಚಿಕ್ಕ ವಯಸ್ಸಿನಲ್ಲೇ ಸನ್ಯಾಸತ್ವವನ್ನು ಸ್ವೀಕರಿಸಿ ಮಹಾನ್ ಎನಿಸಿಕೊಂಡಿದ್ದಾಳೆ.
ಹೌದು ಈ ಪುಟಾಣಿ ಇನ್ನು ಮುಂದೆ ತಂದೆಯ ಐಷಾರಾಮಿ ಕಾರಿನಲ್ಲಿ ಓಡಾಡುವಂತಿಲ್ಲ ಬಣ್ಣ ಬಣ್ಣದ ಬಟ್ಟೆ ತೊಡುವಂತಿಲ್ಲ.ಕಲರ್ ಫುಲ್ ಜೀವನ ನಡೆಸುವಂತಿಲ್ಲ ಇನ್ನೇನಿದ್ರೂ ಬಿಳಿ ನೂಲಿನ ಬಟ್ಟೆಯೇ ಅವಳಿಗೆ ಬವಣೆ ಧರ‍್ಮಿಕ ಮಂತ್ರಗಳೇ ಆಕೆಯ ಭಾವನೆ.
ಇನ್ನೂ ಸನ್ಯಾಸತ್ವದ ಗಂಧಗಾಳಿಯೇ ಅರಿಯದ ೯ರ ದೇವಾಂಶಿ ಜೈನ ಗುರು ಆಚರ‍್ಯವಿಜಯ್ ಕರ‍್ತಿಯಶ್ ಸೂರಿಜ್ ಮಹರಾಜ್ ಅವರ ಸಮ್ಮುಖದಲ್ಲಿ ಸೂರತ್ ನ ವೇಸು ಪ್ರದೇಶದಲ್ಲಿ ಜೈನ ದೀಕ್ಷೆ ಪಡೆದುಕೊಂಡು ಆಧ್ಯಾತ್ಮತೆಯೆಡೆಗೆ ತನ್ನ ಜೀವನ ಬದಲಿಸಿದ್ದು ನಿಜಕ್ಕೂ ವಿಶೇಷ.
ವಜ್ರದ ಪಾಲಿಶಿಂಗ್ ಮತ್ತು ರಫ್ತು ಉದ್ಯಮ ನಡೆಸುವ ಸಾಂಘಿ ಆಂಡ್ ಸನ್ಸ್ ಸಂಸ್ಥೆಯ ಒಡೆಯ ಧಾನೇಶ್ ಮತ್ತು ಅಮಿ ಸಾಂಘ್ವಿ ದಂಪತಿಗೆ ಇಬ್ಬರು ಪುತ್ರಿಯರು. ದೇವಾಂಶಿ ಹಿರಿಯ ಪುತ್ರಿ.ಆಕೆ ತಂಗಿ ಕಾವ್ಯಾಳಿಗೆ ಇನ್ನೂ ೫ ವರ್ಷ.ದೇವಾಂಶಿಗೆ ಮೊದಲೇ ಧರ‍್ಮಿಕತೆಯ ಕುರಿತಾಗಿ ಅಪಾರ ಸೆಳೆತವಿತ್ತು ಸುಮಾರು ೩೭೭ ಧರ‍್ಮಿಕ ದೀಕ್ಷೆ ಕರ‍್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಧರ‍್ಮಿಕ ಗುರುಗಳ ಜೊತೆ ಸುಮಾರು ೭೦೦ ಕಿ.ಮೀ ಹೆಜ್ಜೆ ಹಾಕಿದ್ದಾಳೆ ಈ ೯ ರ ತುರಣಿ.ಹಾಗೆಯೇ ಆಕೆ ಆಲಿಸಿದಂತಹ ಧರ‍್ಮಿಕ ಪ್ರವಚನವೇ ಆಕೆಯನ್ನು ಧರ‍್ಮಿಕ ದೀಕ್ಷೆ ಪಡೆಯುವಂತೆ ಮಾಡಿದೆ ಎನ್ನುತ್ತಾರೆ ಸಾಂಘಿ ಕುಟುಂಬ. ಒಟ್ಟಾರೆ ಅದೇನೆ ಇರಲಿ ಆಕೆಯ ವಯಸ್ಸಿಗೂ ಮೀರಿದ ಈ ನಿರ್ಧಾರಕ್ಕೆ ಹ್ಯಾಟ್ಸಾಪ್ ಹೇಳಲೇ ಬೇಕು…
ಕಾಂಗ್ರೆಸ್ ತೊರೆದ ಕ್ಷಣಾರ್ಧದಲ್ಲೇ ಬಿಜೆಪಿ ಸೇರಿದ ಮಾಜಿ ಹಣಕಾಸು ಸಚಿವ..?!