Health Tips: ಎಷ್ಟೋ ಜನರಿಗೆ ಸಣ್ಣ ವಯಸ್ಸಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಇನ್ನು ಕೆಲವರಿಗೆ ಕಿವಿ ನೋವಾಾಗುತ್ತದೆ. ಮತ್ತೆ ಕೆಲವರಿಗೆ ಕಿವಿ ಸೋರುತ್ತದೆ. ಹಾಗಾದ್ರೆ ಈ ಎಲ್ಲ ಸಮಸ್ಯೆಗಳಿಗೆ ಕಾರಣವೇನು..? ಯಾವ ತಪ್ಪಿನಿಂದಾಗಿ, ನಮಗೆ ಕಿವಿಯ ಸಮಸ್ಯೆ ಬರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ಈ ಬಗ್ಗೆ ಮಾತನಾಡಿದ್ದು, ಅಶಿಸ್ತು, ಅಶಕ್ತತೆ, ಅಶುದ್ಧತೆಯೇ ನಮಗೆ ಕಿವಿ ನೋವು ಬರಲು ಮುಖ್ಯ ಕಾರಣ ಎಂದಿದ್ದಾರೆ. ನಾವು ಪ್ರತಿದಿನ ಹಲ್ಲುಜ್ಜುತ್ತೇವೆ, ಸ್ನಾನ ಮಾಡುತ್ತೇವೆ. ದೇಹವನ್ನು, ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆ. ಅದೇ ರೀತಿ, ಕಿವಿಯನ್ನು ಪ್ರತಿದಿನ ಕ್ಲೀನ್ ಮಾಡಿ, ಕಿವಿಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು.
ಇನ್ನು ಅಶಕ್ತಿ ಎಂದರೆ, ನಾವು ಸರಿಯಾದ ಸಮಯಕ್ಕೆ, ಪೌಷ್ಠಿಕಾಂಶಯುಕ್ತವಾದ ಆಹಾರ ಸೇವನೆ ಮಾಡದಿದ್ದಾಗ, ನಮ್ಮ ದೇಹದಲ್ಲಿ ಅಶಕ್ತತೆ ಉಂಟಾಗುತ್ತದೆ. ಇನ್ನು ಅಶಿಸ್ತು ಎಂದರೆ, ತಪ್ಪಾದ ಜೀವನಶೈಲಿಯನ್ನು ಜೀವಿಸುವುದು. ಅನಾರೋಗ್ಯಕರ ಆಹಾರ ಸೇವನೆ, ಹೊತ್ತಲ್ಲದ ಹೊತ್ತಲ್ಲಿ ಊಟ ಮಾಡುವುದು, ಕಡಿಮೆ ನಿದ್ರಿಸುವುದು, ಅಥವಾ ಅಗತ್ಯಕ್ಕಿಂತ ಹೆಚ್ಚು ನಿದ್ರಿಸುವುದು, ಮಧ್ಯಾಹ್ನ ಹೆಚ್ಚು ಹೊತ್ತು ಮಲಗುವುದು. ಇವೆಲ್ಲ ತಪ್ಪು ಜೀವನಶೈಲಿ. ಇಂಥ ಅಶಿಸ್ತಿನಿಂದಾಗಿಯೇ, ಕಿವಿ ನೋವಿನ ಸಮಸ್ಯೆ ಬರುತ್ತದೆ.
ಅಲ್ಲದೇ, ಕೆಲವರು ಕಿವಿ ಸ್ವಚ್ಛಗೊಳಿಸಲು, ಸಿಕ್ಕ ವಸ್ತುಗಳನ್ನು ಬಳಸುತ್ತಾರೆ. ಅವುಗಳು ಸ್ವಚ್ಛವಾಗಿಯೂ ಇರುವುದಿಲ್ಲ. ಹೇರ್ ಪಿನ್, ಸೀರೆಗೆ ಬಳಸುವ ಪಿನ್, ಗಾಡಿ ಕೀ ಹೀಗೆ ಇಂಥ ವಲ್ತುಗಳನ್ನು ಕಿವಿ ಸ್ವಚ್ಛಗೊಳಿಸಲು ಬಳಸುತ್ತಾರೆ. ಇದರಿಂದಾಗಿಯೇ, ಕಿವಿಯಲ್ಲಿ ಸಮಸ್ಯೆ ಉಂಟಾಗಿ, ಕಿವಿ ಕೇಳಿಸದಿರುವುದು, ಕಿವಿಯಲ್ಲಿ ಸೋರುವುದು, ಹೀಗೆ ಇತ್ಯಾದಿ ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವೀಡಿಯೋ ನೋಡಿ.