Health Tips: ಕೆಲವರಿಗೆ ಪ್ರತಿದಿನ ತಲೆ ನೋವಾಗತ್ತೆ. ಅದೇ ರೀತಿ ಕೆಲವರಿಗೆ ಕೆಳಸೊಂಟನೋವು ಕೂಡ ಇರುತ್ತದೆ. ಹಾಗಾದ್ರೆ ಈ ಕೆಳಸೊಂಟನೋವು ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂಬುದನ್ನು ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಕೆಳ ಸೊಂಟನೋವು ಬಂದರೆ, ನಿಮ್ಮ ದೇಹದಲ್ಲಿ ಇರುವ ಶಕ್ತಿ ಕಡಿಮೆಯಾಗುತ್ತಿದೆ ಎಂದರ್ಥ. ಇದಕ್ಕೆ ಕಾರಣ, ನಮ್ಮ ಆರೋಗ್ಯ ರಕ್ಷಣೆಗಾಗಿ ನಾವು ಸಮಯ ಮೀಸಲು ಇಡದಿರುವುದು. ಸರಿಯಾದ ಸಮಯಕ್ಕೆ ಆರೋಗ್ಯಕರ ಊಟ ತೆಗೆದುಕೊಳ್ಳದೇ ಇರುವುದು, ಹಣ್ಣು-ತರಕಾರಿ, ಹಾಲು- ಮೊಸರು-ತುಪ್ಪ-ಬೆಣ್ಣೆ-ಮಜ್ಜಿಗೆಯ ಸೇವನೆ ಮಾಡದೇ ಇರುವುದು. ಸೊಪ್ಪು- ಮೊಳಕೆ ಕಾಳುಗಳನ್ನು ತಿನ್ನದೇ ಇರುವುದು.
ಆರೋಗ್ಯ ಹಾಳಾದಾಗ, ರೆಸ್ಟ್ ತೆಗೆದುಕೊಳ್ಳದೇ ದುಡಿಯುವುದು. ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ ಮಾಡದೇ ಇರುವುದೆಲ್ಲ, ನಮ್ಮ ಅಶಕ್ತತೆಗೆ ಕಾರಣವಾಗಿದೆ. ಹಾಗಾಗಿಯೇ ಕೆಳಸೊಂಟ ನೋವು ಸೇರಿ, ದೇಹದ ಹಲವು ಭಾಗಗಳಲ್ಲಿ ನೋವಾಗುತ್ತದೆ. ಹಾಗಾಗಿಯೇ ನೀವು ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ, ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡಲೇಬೇಕು ಅಂತಾರೆ ವೈದ್ಯರು.
ಇನ್ನು ಇಂದಿನ ಕಾಲದಲ್ಲಿ ನಡೆಯುವುದು ತುಂಬಾ ಕಡಿಮೆಯಾಗಿದೆ. ಬೈಕ್, ಸ್ಕೂಟಿ, ಕಾರ್, ಆಟೋ ಮೊರೆ ಹೋಗುವ ಜನ, ನಡೆಯುವುದನ್ನೇ ಮರೆತಿದ್ದಾರೆ ಅಂತಾನೇ ಹೇಳಬಹುದು. ಅಲ್ಲದೇ, ವ್ಯಾಯಾಮ, ಯೋಗ ಯಾವುದೂ ಇಲ್ಲದ ಕಾರಣ, ಕೆಳಸೊಂಟ ನೋವಿನಂಥ ಸಮಸ್ಯೆ ಹೆಚ್ಚಾಗಿ ಬರುತ್ತದೆ. ಹಾಾಗಾದ್ರೆ ಇದಕ್ಕೆ ಪರಿಹಾರವೇನು ಎಂದು ತಿಳಿಯಲು ಈ ವೀಡಿಯೋ ನೋಡಿ.