Thursday, October 17, 2024

Latest Posts

ಶ್ರೀಮಂತ ಉದ್ಯಮಿ, ಪದ್ಮವಿಭೂಷಣ, ಸರಳ ಜೀವಿ ರತನ್ ಟಾಟಾ(86) ಇನ್ನಿಲ್ಲ

- Advertisement -

Business News: ಶ್ರೀಮಂತ ಉದ್ಯಮಿ, ಸರಳತೆಯ ಸಾಕಾರಮೂರ್ತಿ, ಪದ್ಮವಿಭೂಷಣ ರತನ್ ಟಾಟಾ(86) ಕೊನನೆಯುಸಿರೆಳೆದಿದ್ದಾರೆ. ಕೆಲವು ದಿನಗಳಿಂದ ಟಾಟಾ ಆರೋಗ್ಯ ಹದಗೆಟ್ಟಿದೆ ಎಂದು ಸುದ್ದಿಯಾಗಿತ್ತು. ಆದರೆ ಟಾಟಾ ತಾವೇ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ನಾನು ಆರಾಮವಾಗಿದ್ದೇನೆ. ಸುಳ್ಳುಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದರು.

ಆದರೆ ನಿನ್ನೆ ನಿಜಕ್ಕೂ ಅವರ ಆರೋಗ್ಯ ಹದಗೆಟ್ಟಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಸದೇ, ರಾತ್ರಿ 12 ಗಂಟೆಗೆ ರತನ್ ಟಾಟಾ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾರನ್ನು ಮುಂಬೈ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೊಂಚ ಸುಧಾರಿಸಿದ್ದ ಟಾಾಟಾ ಆರೋಗ್ಯ ಬುಧವಾರ ಮತ್ತಷ್ಟು ಉಲ್ಬಣಿಸಿತ್ತು. ಕೊನೆಗೆ ಚಿಕಿತ್ಸೆ ಫಲಿಸದೇ ಟಾಟಾ ಕೊನೆಯುಸಿರೆಳೆದಿದ್ದಾರೆ.

ರತನ್ ಟಾಟಾ ನಿಧನಕ್ಕೆ ಪ್ರಧಾನಿ ಮೋದಿ, ಸೇರಿ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ರತನ್ ಟಾಾಟಾ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದ್ದು, ಮುಂಬೈನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಸರ್ಕಾರಿ ಗೌರವದೊಂದಿಗೆ ರತನ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.

- Advertisement -

Latest Posts

Don't Miss