ಇನ್ಮುಂದೆ ನಿಮ್ಮ ಪರ್ಸ್ನಲ್ಲಿ ಪ್ಲಾಸ್ಟಿಕ್ ಕರೆನ್ಸಿ ನೋಟುಗಳು ಬರೋ ಟೈಮ್ ಹತ್ತಿರ ಆಗ್ತಾ ಇದೆ.. ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಆರಂಭದಲ್ಲಿ 10 ರೂಪಾಯಿ ಮತ್ತೆ 20 ರೂಪಾಯಿ ಪಾಲಿಮರ್ ನೋಟುಗಳನ್ನ ತರೋ ಪ್ಲಾನ್ ಮಾಡಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ, 2027ರ ಏಪ್ರಿಲ್ನಿಂದ ಈ ನೋಟುಗಳು ಚಲಾವಣೆಗೆ ಬರೋ ಸಾಧ್ಯತೆ ಇದೆ. ಅದಕ್ಕೆ ಸಂಬಂಧಿಸಿದಂತೆ 200 ಕೋಟಿ ನೋಟುಗಳನ್ನ ಕ್ಷೇತ್ರ ಪ್ರಯೋಗಕ್ಕೆ ಸಿದ್ಧಪಡಿಸೋ ಪ್ರಸ್ತಾವನೆಗೂ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಮೊದಲು 10 ಮತ್ತೆ 20 ರೂಪಾಯಿ ನೋಟುಗಳನ್ನೇ ಯಾಕೆ ಆಯ್ಕೆ ಮಾಡಿದ್ದಾರೆ ಅಂದ್ರೆ, ಡೈಲಿ ಖರೀದಿ, ಸಣ್ಣಪುಟ್ಟ ವ್ಯವಹಾರ ಮತ್ತೆ ಬಸ್ಸಲ್ಲಿ ಇವುಗಳ ಬಳಕೆ ತುಂಬಾ ಜಾಸ್ತಿ. ಕಾಗದದ ನೋಟುಗಳಿಗೆ ಹೋಲಿಸಿದ್ರೆ ಪಾಲಿಮರ್ ನೋಟುಗಳು ನೀರು, ಧೂಳಿಗೆ ಬೇಗ ಹಾಳಾಗಲ್ಲ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳೋ ಪ್ರಕಾರ, ಇವು ಕಾಗದದ ನೋಟುಗಳಿಗಿಂತ ಎರಡರಿಂದ ನಾಲ್ಕು ಪಟ್ಟು ಹೆಚ್ಚು ಬಾಳಿಕೆ ಬರ್ತವೆ. ಇದರಿಂದ ಪದೇಪದೆ ನೋಟು ಪ್ರಿಂಟ್ ಮಾಡೋ ಖರ್ಚೂ ಉಳಿಯುತ್ತೆ ಅಂತ ಮಾಹಿತಿ ಬಿಚ್ಚಿಟ್ಟಿದ್ದಾರೆ..
ಇದರ ಜೊತೆಗೆ ‘ಇಲ್ಲಿ ಜನರಿಗೆ ಬರೋ ದೊಡ್ಡ ಡೌಟ್ ಏನಂದ್ರೆ, ಹಳೆ 10 ಮತ್ತೆ 20 ರೂಪಾಯಿ ಕಾಗದದ ನೋಟುಗಳು ಬ್ಯಾನ್ ಆಗ್ತಾವಾ? ಖಂಡಿತ ಇಲ್ಲ.. ಎರಡೂ ಒಟ್ಟಿಗೆ ಚಲಾವಣೆಯಲ್ಲಿ ಇರ್ತವೆ. ಹಾಗೆಯೇ 100, 200, 500 ರೂಪಾಯಿ ನೋಟುಗಳನ್ನ ಪಾಲಿಮರ್ನಲ್ಲಿ ತರೋ ಯಾವುದೇ ಪ್ಲಾನ್ ಸದ್ಯಕ್ಕೆ ಇಲ್ಲ. ನೋಟುಗಳ ಸೈಜ್ ಕೂಡ ಸೇಮ್ ಇರೋದ್ರಿಂದ ಎಟಿಎಂಗಳಲ್ಲಿ ದೊಡ್ಡ ಬದಲಾವಣೆ ಬೇಕಾಗಲ್ಲ.
ನಮ್ಮ ಹವಾಮಾನಕ್ಕೆ ಈ ನೋಟುಗಳು ಎಷ್ಟು ಹೊಂದಿಕೊಳ್ತವೆ ಅಂತ ಟೆಸ್ಟ್ ಮಾಡಿದ ಮೇಲಷ್ಟೇ ಫೈನಲ್ ಡಿಸಿಷನ್ ಆಗುತ್ತೆ ಅಂತ ಹೇಳಲಾಗ್ತಿದೆ..




