Saturday, October 19, 2024

Latest Posts

ಬಿಷ್ಣೋಯಿ ಸಮಾಜದವರ ಹಿನ್ನೆಲೆ ಏನು..? ಕೃಷ್ಣಮೃಗದ ಮೇಲೆ ಏಕಿಷ್ಟು ಭಕ್ತಿ.?: ಭಾಗ 1

- Advertisement -

Bollywood News: ಸದ್ಯ ಭಾರತದಲ್ಲಿ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ, ಲಾರೆನ್ಸ್ ಬಿಷ್ಣೋಯ್ ಸುದ್ದಿ. ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ನನ್ನು ಕೊಲೆ ಮಾಡುವುದೇ ನನ್ನ ಜೀವನ ಗುರಿ ಎನ್ನುತ್ತಿರುವ ಬಿಷ್ಣೋಯ್, ಸಲ್ಮಾನ್ ಖಾನ್‌ಗೆ ಸಪೋರ್ಟ್ ಮಾಡುವವರನ್ನೆಲ್ಲ ಕೊಲ್ಲುವ ತಯಾರಿ ನಡೆಸಿದ ಹಾಗಿದೆ. ಕೆಲ ದಿನಗಳ ಹಿಂದೆ ಸಲ್ಮಾನ್ ಆಪ್ತನಾಗಿದ್ದ ಬಾಬಾ ಸಿದ್ಧಕಿ ಹತ್ಯೆಯಾಗಿದ್ದು, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್, ಈ ಹತ್ಯೆಯ ರೂವಾರಿ ತಾನೇ ಎಂದು ಒಪ್ಪಿಕೊಂಡಿದ್ದಾನೆ.

ಅಲ್ಲದೇ, ತಾನು ಮತ್ತು ತನ್ನ ಸಂಗಡಿಗರು ಕೊಲೆ ಮಾಡಬೇಕಾದ ಕೆಲ ಸೆಲೆಬ್ರಿಟಿಗಳ ಪಟ್ಟಿ ಕೂಡ ರಿಲೀಸ್ ಮಾಡಿ, ತನ್ನ ಹಿಟ್ ಲೀಸ್ಟ್‌ನಲ್ಲಿ ಯಾರ್ಯಾರು ಇದ್ದಾರೆ ಅಂತಲೂ ಹೇಳಿದ್ದಾನೆ. ಹಾಾಗಾಗಿ ಸಲ್ಮಾನ್ ಸೇರಿ, ಹಲವು ಬಾಲಿವುಡ್‌ ಸ್ಟಾರ್ಸ್‌ಗಳಿಗೆ ಸೆಕ್ಯೂರಿಟಿ ನೀಡಲಾಗುತ್ತಿದೆ. ಈತನಿಂದಾಗಿ, ಜೀವ ಉಳಿಸಿಕೊಳ್ಳುವ ಸಲುವಾಗಿ, ಸಲ್ಮಾನ್ ಖಾನ್ ಇನ್ನೊಂದು ಬುಲೆಟ್ ಪ್ರೂಫ್ ಗಾಡಿ ಖರೀದಿಸಿದ್ದಾರೆ. ಸಲ್ಮಾನ್ ಬಾಡಿಗಾರ್ಡ್ ಅಂತೂ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಸಲ್ಮಾನ್ ಖಾನ್ ರಕ್ಷಣೆ ಮಾಡುತ್ತಿದ್ದಾರೆ.

ಇಷ್ಟೆಲ್ಲ ಸಿಟ್ಟು, ಕೊಲ್ಲುವಷ್ಟು ದ್ವೇಷ ಇಟ್ಟುಕೊಂಡಿರುವುದಕ್ಕೆ ಕಾರಣ, ಲಾಾರೆನ್ಸ್‌ಗೆ ತನ್ನ ಬಿಷ್ಣೋಯಿ ಸಮಾಜದ ಬಗ್ಗೆ ಇರುವ ಪ್ರೀತಿ, ಗೌರವ, ಮತ್ತು ಕೃಷ್ಣಮೃಗದ ಮೇಲಿರುವ ಭಕ್ತಿ. ಬಿಷ್ಣೋಯಿ ಸಮಾಜದವರಿಗೆ ಕೃಷ್ಣಮೃಗ ಎಂದರೆ, ದೇವರಿದ್ದ ಹಾಗೆ. ಮತ್ತು ತಮ್ಮ ದೇವರನ್ನು ಸಲ್ಮಾನ್ ಖಾನ್ ಬೇಟೆಯಾಡಿ ಕೊಂದಿದ್ದಾನೆ. ಹಾಗಾಗಿ ತಮ್ಮ ದೇವರನ್ನು ಕೊಂದವರನ್ನು, ತಮ್ಮ ಸಮಾಜ ನಿಂದಕರನ್ನು ತಾನೆಂದೂ ಬಿಡುವುದಿಲ್ಲವೆಂದು ಲಾರೆನ್ಸ್ ಪಣತೊಟ್ಟಿದ್ದಾನೆ.

ಸಲ್ಮಾನ್ ಖಾನ್ 1998ರಲ್ಲಿ ಕೃಷ್ಣಮೃಗವನ್ನನು ಬೇಟೆಯಾಡಿದ್ದು, ಬಿಷ್ಣೋಯ್ ಸಮಾಜದ ಲಾರೆನ್ಸ್ ಆಗ ಪುಟ್ಟ ಬಾಲಕನಾಗಿದ್ದ. ಆದರೆ ಅವನಿಗೆ ತನ್ನ ಸಮಾಜದ ಮೇಲೆ ಇರುವ ಗೌರವ, ದೇವರ ಮೇಲೆ ಇದ್ದ ಭಕ್ತಿ, ಧರ್ಮ ರಕ್ಷಣೆಯ ಕಿಚ್ಚು, ಕೆಲ ಹುಡುಗರ ಸಹವಾಸ ಸೇರಿ, ಲಾರೆನ್ಸ್ ಗ್ಯಾಂಗ್‌ಸ್ಟರ್ ಆಗಲು ಕಾರಣವಾಯಿತು. ಪ್ರಾಣಿಗಳಿಗೆ ಇಷ್ಟು ಮಹತ್ವ ಕೊಡುವ ಬಿಷ್ಣೋಯಿಗಳು ಯಾರು..? ಯಾಕೆ ಇವರಿಗೆ ಕೃಷ್ಣಮೃಗವನ್ನು ಕಂಡರೆ ಅಷ್ಟು ಭಕ್ತಿ..? ಚಿಪ್ಕೋ ಆಂದೋಲನ ಮತ್ತು ಬಿಷ್ಣೋಯಿ ಸಮಾಜಕ್ಕೂ ಇರುವ ನಂಟೇನು ಅಂತಾ ಮುಂದಿನ ಭಾಗದಲ್ಲಿ ತಿಳಿಯೋಣ.

- Advertisement -

Latest Posts

Don't Miss