Friday, November 28, 2025

Latest Posts

ಬಿಗ್‌ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ: ಸಿಂಗರ್‌, ಕುರಿಗಾಹಿ ಹನುಮಂತುಗೆ ವಿಶೇಷ ಅಧಿಕಾರ

- Advertisement -

Bigg Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಲಾಯರ್ ಜಗದೀಶ್ ಮತ್ತು ರಂಜಿತ್ ಹೊರನಡೆದಿದ್ದು, ಇದೀಗ ಬಿಗ್‌ಬಾಸ್ ಮನೆಗೆ ವೈಲ್ಡ್‌ ಕಾರ್ಡ್ ಎಂಟ್ರಿಯಾಗಿದೆ.

ಸಿಂಗರ್ ಆಗಿ ಮಿಂಚಿದ್ದ ಕುರಿಗಾಹಿ ಹನುಮಂತು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹನುಮಂತುಗೆ ಬಿಗ್‌ಬಾಸ್ ವಿಶೇಷ ಅಧಿಕಾರವನ್ನೂ ಕೊಟ್ಟಿದ್ದಾರೆ. ಅವರು ಬಂದ ಕೂಡಲೇ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಹನುಮಂತ ಈಗಾಗಲೇ ಸರಿಗಮಪ ಮತ್ತು ಕಾಮಿಡಿ ಕಿಲಾಡಿಗಳು ಶೋನಲ್‌ಲಿ ಮಿಂಚಿದ್ದರು. ಸಖತ್ ಕಾಮಿಡಿ ಮಾಡುವ ಹನುಮಂತನ ಮಾತು ಎಲ್ಲರಿಗೂ ಇಷ್ಟವಾಗುತ್ತಿತ್ತು. ಇದೀಗ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿರುವ ಹನುಮಂತ ಹೇಗೆ ಆಟವಾಡ್ತಾರೆ ಅಂತಾ ಕಾದು ನೋಡಬೇಕಿದೆ.

ಇನ್ನು ಬಿಗ್‌ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಇಷ್ಟು ಬೇಗ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ. ಇನ್ನು ಬಿಗ್‌ಬಾಸ್ ಸೀಸನ್ 11 ಟಾಸ್ಕ್, ಎಂಟರ್‌ಟೈನ್‌ಮೆಂಟ್‌ಗಿಂತ ಹೆಚ್ಚಾಗಿ, ಜಗಳಕ್ಕೇ ಹೆಸರು ಮಾಡಿತ್ತು. ಹಾಗಾಗಿ ಜನರಿಗೆ ಸ್ವಲ್ಪ ಮನೋರಂಜನೆ ಸಿಗಲಿ ಅಂತಲೇ, ಹನುಮಂತುನನ್ನು ಕರೆಸಿರುವ ಸಾಧ್ಯತೆ ಇದೆ.

- Advertisement -

Latest Posts

Don't Miss