Thursday, December 5, 2024

Latest Posts

ಸಾಂಕ್ರಾಮಿಕ ರೋಗಗಳು ಹರಡೋದು ಯಾಕೆ? ಇದಕ್ಕೆಲ್ಲ ಕಾರಣಗಳೇನು?

- Advertisement -

Health Tips: ಜ್ವರ, ನೆಗಡಿ, ಕೆಮ್ಮು, ಕೆಲವು ಚರ್ಮರೋಗಗಳು ಸಾಂಕ್ರಾಮಿಕ ರೋಗಗಳಾಗಿದೆ. ಇವುಗಳನ್ನು ಯಾಕೆ ಸಾಂಕ್ರಾಮಿಕ ರೋಗಗಳು ಅಂತಾ ಕರೆಯುವುದು ಎಂದರೆ, ಇವುಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಾಗಾದ್ರೆ ಯಾಕೆ ಈ ರೋಗಗಳು ಹರಡುತ್ತದೆ..? ಇದಕ್ಕೆಲ್ಲ ಕಾರಣಗಳೇನು ಅಂತಾ ತಿಳಿಯೋಣ ಬನ್ನಿ..

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಯಾವಾಗ ಕಡಿಮೆಯಾಗುತ್ತದೆಯೋ, ಆಗ ಸಾಾಂಕ್ರಾಮಿಕ ರೋಗಗಳು ಹರಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ, ವಾತಾವರಣದಲ್ಲಿ ಹರಡುವ ಸೋಂಕುಗಳು ಬಹುಬೇಗ ದೇಹವನ್ನು ಆವರಿಸುತ್ತದೆ. ಹಾಗಾಗಿ ನಮ್ಮ ದೇಹದಲ್ಲಿ ನಾವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕಾಗುತ್ತದೆ.

ನಾವು ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಜೀರ್ಣವಾಗುವಂಥ ಆಹಾರ ಸೇವಿಸಬೇಕು. ಉಗುರು ಬೆಚ್ಚಗಿನ ನೀರು ಕುಡಿಯುವ ಮೂಲಕ ನಮ್ಮ ದೇಹದಲ್ಲಿರುವ ತ್ಯಾಜ್ಯವನ್ನು ಶುದ್ಧಗೊಳಿಸಬೇಕು. ಹೆಚ್ಚು ಎಣ್ಣೆಯುಕ್ತ ಪದಾರ್ಥ, ಬೀದಿಬದಿ ಆಹಾರದ ಸೇವನೆ ಮಾಡಬಾರದು. ಮಸಾಲೆಯುಕ್ತ ಪದಾರ್ಥ, ಖಾರ ಖಾರವಾದ ಪದಾರ್ಥ, ಹೆಚ್ಚು ಮಾಂಸಾಹಾರಗಳ ಸೇವನೆ ಮಾಡಬಾರದು. ಇಂಥ ಪದಾರ್ಥ ಸೇವನೆಯಿಂದಾಗಿ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಾಗುತ್ತದೆ.

ಹಾಗಾಗಿಯೇ ಬಿಸಿ ಬಿಸಿ ಪದಾರ್ಥಗಳ ಸೇವನೆ ಮಾಡಬೇಕು. ಫ್ರಿಜ್‌ನಲ್ಲಿ ಇರಿಸಿದ ಪದಾಾರ್ಥಗಳ ಸೇವನೆ ಅಥವಾ ಅದನ್ನೇ ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದೆಲ್ಲ ಆರೋಗ್ಯಕ್ಕೆ ಉತ್ತಮವಲ್ಲ. ಇನ್ನು ನಮ್ಮ ದೇಹವನ್ನು ಯಾವ ರೀತಿ ಶುದ್ಧ ಮಾಡಬೇಕು. ಮತ್ತು ದೇಹ ಶುದ್ಧವಾದ ಮೇಲೆ ಏನು ಸೇವಿಸಬೇಕು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.

- Advertisement -

Latest Posts

Don't Miss