Health Tips: ನುಗ್ಗೇಕಾಯಿ ಅಂದ್ರೆ ದೂರ ಓಡುವವರು ತುಂಬಾ ಕಡಿಮೆ. ಯಾಕಂದ್ರೆ ಇದನ್ನು ಬಳಸುವುದರಿಂದಲೇ, ಸಾಂಬಾರ್ ರುಚಿ ಹತ್ತು ಪಟ್ಟು ಹೆಚ್ಚಾಗುತ್ತದೆ. ನುಗ್ಗೇಕಾಯಿ ಸಾಂಬಾರ್ ಪರಿಮಳ ತೆಗೆದುಕೊಳ್ಳುತ್ತಲೇ, ಅದನ್ನು ತಿನ್ನಬೇಕು ಅಂತಾ ಅನ್ನಿಸುವಷ್ಟು ರುಚಿ ಇರುತ್ತದೆ. ಆದರೆ ನುಗ್ಗೇಕಾಯಿ ಎಷ್ಟು ರುಚಿಕರವೋ, ನುಗ್ಗೆಸೊಪ್ಪು ಅದಕ್ಕಿಂತ ಆರೋಗ್ಯಕರ. ಹಾಗಾದ್ರೆ ನುಗ್ಗೆಸೊಪ್ಪನ್ನು ಹೇಗೆ ಬಳಸಬೇಕು..? ನುಗ್ಗೆಸೊಪ್ಪಿನ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ನುಗೆಸೊಪ್ಪನ್ನು ಚೆನ್ನಾಗಿ ತೊಳೆದು, ಕೊಂಚ ತುಪ್ಪ ಹಾಕಿ ಹುರಿದು, ಅದರೊಂದಿಗೆ ಒಣ ಮೆಣಸನ್ನೂ ಹುರಿದು. ಆರಿದ ಬಳಿಕ, ಮೊಸರು, ಕಾಯಿತುರಿ, ಉಪ್ಪಿನೊಂದಿಗೆ ರುಬ್ಬಿದರೆ, ನುಗ್ಗೆಸೊಪ್ಪಿನ ತಂಬುಳಿ ರೆಡಿ. ನೀವು ವಾರದಲ್ಲಿ ಮೂರು ಬಾರಿಯಾದರೂ ನುಗ್ಗೆಸೊಪ್ಪಿನ ತಂಬುಳಿ ಮಾಡಿ ಸೇವಿಸಬೇಕು.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನುಗ್ಗೆಸೊಪ್ಪು ಸಹಕಾರಿಯಾಗಿದೆ. ನಿಮಗೆ ಪದೇ ಪದೇ ಜ್ವರ ಬರುತ್ತದೆ. ನೆಗಡಿಯಾಗುತ್ತದೆ. ದೇಹದಲ್ಲಿ ಶಕ್ತಿಯೇ ಇಲ್ಲ ಎಂದೆನ್ನಿಸುತ್ತದೆ ಎಂದಾದಲ್ಲಿ, ನುಗ್ಗೆಸೊಪ್ಪಿನ ಪದಾರ್ಥ ಮಾಡಿ ಸೇವಿಸಿ. ಇದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ನೀವು ಆರೋಗ್ಯವಾಗಿ ಇರುತ್ತೀರಿ.
ಕೆಲವರು ನುಗ್ಗೆಸೊಪ್ಪನ್ನು ಒಣಗಿಸಿ, ಅದನ್ನು ಚಹಾಕ್ಕೆ ಸೇರಿಸಿ ಕುಡಿಯುತ್ತಾರೆ. ನುಗ್ಗೆ ಸೊಪ್ಪಿನ ಕಶಾಯ, ಸಾಂಬಾಾರ್, ಪಲ್ಯ, ಚಟ್ನಿ ಮಾಡಿ ಸೇವಿಸಲಾಗುತ್ತದೆ. ಇವೆಲ್ಲವೂ ಆರೋಗ್ಯಕ್ಕೆ ಉತ್ತಮ.
ಶುಗರ್ ಇದ್ದವರು ನುಗ್ಗೆಸೊಪ್ಪಿನ ಸೇವನೆ ಮಾಡಿದರೆ, ಶುಗರ್ ಕಂಟ್ರೋಲಿನಲ್ಲಿರಿಸಬಹುದು.
ಡಯಟ್ ಮಾಡುವವರು ನುಗೆಸೊಪ್ಪಿನ ಸೇವನೆಯ ಪದಾರ್ಥ ಸೇವಿಸಬೇಕು. ಇದರ ಸೇವನೆಯಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ, ದೇಹದ ತೂಕ ಇಳಿಯುತ್ತದೆ.
ನುಗ್ಗೆಸೊಪ್ಪಿನಲ್ಲಿ ವಿಟಾಮಿನ್ ಡಿ ಇದ್ದು, ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವಂತೆ ಮಾಡುತ್ತದೆ. ಮಲಬದ್ಧತೆ ಸಮಸ್ಯೆಯೂ ದೂರವಾಗುವಂತೆ ಮಾಡುತ್ತದೆ.
ನಿಮ್ಮ ಸೌಂದರ್ಯ ವೃದ್ಧಿಯಾಗಬೇಕು. ನಿಮ್ಮ ಕೂದಲ ಬುಡ ಗಟ್ಟಿಯಾಗಬೇಕು ಅಂದ್ರೆ ನೀವು ನುಗ್ಗೆಸೊಪ್ಪಿನ ಪದಾರ್ಥ ಸೇವಿಸಿ. ಇದು ಕೂದಲ ಬುಡ ಗಟ್ಟಿಗೊಳಿಸಿ, ಕೂದಲು ಉದುರದಂತೆ ತಡೆಗಟ್ಟುತ್ತದೆ.
ಇನ್ನು ನಿಮಗೆ ನುಗ್ಗೆಸೊಪ್ಪನ್ನು ಸೇವಿಸಿದರೆ ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ಬಳಿಕ ನುಗ್ಗೆಸೊಪ್ಪಿನ ಸೇವನೆ ಮಾಡುವುದು ಉತ್ತಮ.

