Sandalwood News: ಜಾಮೀನು ನೀಡಲು ದರ್ಶನ್‌ಗೆ ವಿಧಿಸಿರುವ ಷರತ್ತುಗಳೇನು..?

Sandalwood News: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ದರ್ಶನ್‌ಗೆ ತೀವ್ರ ಬೆನ್ನುನೋವು ಇರುವ ಕಾರಣ, ಜಾಮೀನು ನೀಡಿದ್ದು, 6 ವಾರಗಳ ಕಾಲ ಅವರು ಆರೋಗ್ಯದ ಬಗ್ಗೆ ಗಮನ ಕೊಡುವುದರ ಜೊತೆಗೆ, ಚಿಕಿತ್ಸೆ ಪಡೆಯಲಷ್ಟೇ ಸಮಯವನ್ನು ವ್ಯಯಿಸಬೇಕಿದೆ.

ಇನ್ನು ದರ್ಶನ್‌ ಹಲವು ಬಾರಿ ಜಾಮೀನಿಗಾಗಿ ಮನವಿ ಮಾಡಿದ್ದರೂ, ಇಷ್ಟು ಲೇಟಾಗಿ ಜಾಮೀನು ಸಿಗಲು ಕಾರಣ, ಅವರಿಗಿದ್ದ ತೀವ್ರ ಬೆನ್ನು ನೋವು. ಬೆನ್ನು ನೋವಿನ ಕಾರಣ, ದರ್ಶನ್ ಸರಿಯಾಗಿ ನಡೆಯಲು ಕೂಡ ಆಗುತ್ತಿರಲಿಲ್ಲ. ಹಾಗಾಗಿ ಬೆನ್ನು ನೋವು ನಿರ್ಲಕ್ಷಿಸಿದರೆ, ಮುಂದೆ ಪಾರ್ಶ್ವವಾಯುವಾಗುವ ಸಾಧ್ಯತೆ ಇರುವ ಕಾರಣ, ದರ್ಶನ್ ಅವರಿಗೆ ಶಸ್ತ್ರಿ ಚಿಕಿತ್ಸೆ ಪಡೆಯುವುದು ಅಗತ್ಯವಾಗಿತ್ತು. ಹಾಗಾಗಿ ಚಿಕಿತ್ಸೆ ಪಡೆಯಲು ಜಾಮೀನು ಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು.

ಇನ್ನು ಕೋರ್ಟ್ ದರ್ಶನ್‌ಗೆ ಷರತ್ತು ಬದ್ಧ ಜಾಮೀನು ನೀಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲು 6 ವಾರಗಳ ಕಾಲ ಸಮಯ ನೀಡಿದೆ. ಈ ಸಮಯದಲ್ಲಿ ದರ್ಶನ್ ದೇಶ ಬಿಟ್ಟು ಬೇರೆಡೆ ಹೋಗುವಂತಿಲ್ಲ. ಬೆಂಗಳೂರಿನಲ್ಲಿ ಯಾವ ಆಸ್ಪತ್ರೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು ಎಂದು ಹೇಳಲಾಗಿದೆ.

ಇನ್ನು ದರ್ಶನ್ ಯಾವುದೇ ಫಿಲ್ಮ್ ಶೂಟಿಂಗ್‌ನಲ್ಲಿ ಭಾಗವಹಿಸುವಂತಿಲ್ಲವೆಂದು ಷರತ್ತು ಹಾಕಲಾಗಿದೆ. ಕೆಲ ಆರೋಪಿಗಳು ಜಾಮೀನು ಸಿಕ್ಕ ಬಳಿಕ ವಿದೇಶದಲ್ಲಿ ಹೋಗಿ ತಲೆಮರೆಸಿಕೊಳ್ಳುತ್ತಾರೆ. ಅವರನ್ನು ಹುಡುಕಿ ತರರುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ದರ್ಶನ್ ಅವರ ಪಾಸ್‌ಪೋರ್ಟ್ ಸರೆಂಡರ್ ಮಾಡಬೇಕು ಎಂದು ಆದೇಶ ನೀಡಲಾಗಿದೆ.

About The Author