Friday, December 27, 2024

Latest Posts

ಕಣ್ಣಿನ ಕೆಳಗಿರುವ ಕಪ್ಪು ಕಲೆಯನ್ನು ತೆಗೆದು ಹಾಕಲು ಇಲ್ಲಿದೆ ನೋಡಿ ಉತ್ತಮ ಟಿಪ್ಸ್

- Advertisement -

Beauty Tips: ನೀವು ಎಷ್ಟೇ ಬೆಳ್ಳಗಿದ್ದರೂ, ನೋಡಲು ಎಷ್ಟೇ ಚೆಂದವಿದ್ದರೂ, ನಿಮ್ಮ ಕಣ್ಣ ಸುತ್ತಲೂ ಕಪ್ಪು ಕಲೆ ಇದ್ದರೆ, ಆ ಕಪ್ಪು ಕಲೆಯಿಂದಲೇ ನಿಮ್ಮ ಮುಖದ ಸೌಂದರ್ಯ ಹಾಳಾಗುತ್ತದೆ. ಇದನ್ನೇ ಡಾರ್ಕ್ ಸರ್ಕಲ್ ಎನ್ನಲಾಗುತ್ತದೆ. ಹಾಗಾದ್ರೆ ಮನೆ ಮದ್ದನ್ನು ಉಪಯೋಗಿಸಿ, ಡಾರ್ಕ್ ಸರ್ಕಲ್ ಹೋಗಲಾಡಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಕೊಂಚ ಹಸುವಿನ ತುಪ್ಪ ತೆಗೆದುಕೊಂಡು, ರಾತ್ರಿ ಮಲಗುವ ಮುನ್ನ ನಿಮ್ಮ ಕಣ್ಣಿನ ಸುತ್ತಲೂ ಮಸಾಜ್ ಮಾಡಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ನಿಮ್ಮ ಕಣ್ಣಿನ ಸುತ್ತಲೂ ಇರುವ ಕಪ್ಪು ಕಲೆ ಕ್ರಮೇಣ ಕಡಿಮೆಯಾಗುತ್ತದೆ.

ಎರಡನೇಯದಾಗಿ ಸೌತೇಕಾಯಿಯನ್ನು ರೋಸ್ ವಾಟರ್‌ ಜೊತೆ ಮಿಕ್ಸ್ ಮಾಡಿ, ಪೇಸ್ಟ್ ತಯಾರಿಸಿ. ಇದನ್ನು ಕಣ್ಣಿನ ಸುತ್ತಲೂ ಹಚ್ಚಿಕೊಳ್ಳಿ. ಇದರಿಂದಲೂ ನಿಮ್ಮ ಕಣ್ಣಿನ ಅಕ್ಕ ಪಕ್ಕದಲ್ಲಿರುವ ಕಪ್ಪುಕಲೆಗಳು ಹೋಗುವುದಲ್ಲದೇ, ತ್ವಚೆ ತಂಪಾಗುತ್ತದೆ.

ಒಂದು ಸ್ಪೂನ್ ಆ್ಯಲೋವೆರಾ ಜೆಲ್ ಜೊತೆಗೆ ಎರಡು ಹನಿ ಬಾದಾಮಿ ಎಣ್ಣೆ ಬೆರೆಸಿ, ಕಣ್ಣಿನ ಸುತ್ತಲೂ ಹಚ್ಚಬೇಕು. ಮಸಾಜ್ ಮಾಡಬೇಕು. 15 ನಿಮಿಷ ಬಿಟ್ಟು ಮುಖ ತೊಳೆಯಬೇಕು. ಕೊಂಚ ಮೊಸರು, ಚಿಟಿಕೆ ಅರಿಶಿನ ಸೇರಿಸಿ, ಪೇಸ್ಟ್ ತಯಾರಿಸಿ, ಕಣ್ಣಿನ ಸುತ್ತಲೂ ಹಚ್ಚಿ ಕೊಂಚ ಹೊತ್ತು ಮಸಾಜ್ ಮಾಡಿ. 15 ನಿಮಿಷ ಬಿಟ್ಟು ಮುಖ ತೊಳೆಯಬೇಕು. ಇದರಿಂದಲೂ ಕಣ್ಣಿನ ಸೌಂದರ್ಯ ಚೆನ್ನಾಗಿರುತ್ತದೆ.

ಇವೆಲ್ಲದರ ಜೊತೆಗೆ ಚೆನ್ನಾಗಿ ನೀರು ಕುಡಿಯಿರಿ. ದೇಹಕ್ಕೆ ತಂಪಾಗುವ ಆಹಾರ, ಪೇಯ, ತರಕಾರಿ, ಹಣ್ಣು ಸೇವಿಸಿ. 8 ಗಂಟೆಗಳ ಕಾಲ ಉತ್ತಮ ನಿದ್ದೆ ಮಾಡಿ. ನಿದ್ದೆ ಸರಿಯಾಗಿ ಆಗದಿದ್ದಲ್ಲಿ, ಉತ್ತಮ ಆಹಾರಗಳ ಮೂಲಕ, ದೇಹಕ್ಕೆ ಬೇಕಾದ ಪೋಷಕಾಂಶ ಸಿಗದೇ ಇದ್ದಲ್ಲಿ, ಅಥವಾ ನಿಮ್ಮ ದೇಹ ತಂಪಾಗಿ ಇರದೇ ಹೋದಲ್ಲಿಯೂ, ನಿಮ್ಮ ಕಣ್ಣಿನ ಸುತ್ತಲೂ ಕಪ್ಪು ಕಲೆ ಬರುತ್ತದೆ.

- Advertisement -

Latest Posts

Don't Miss