Sandalwood News: ನಿನ್ನೆಯಷ್ಟೇ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಸುದ್ದಿಯಾಗಿದ್ದು, ನಟ ಜಗ್ಗೇಶ್, ಗುರುಪ್ರಸಾದ್ ಜೊತೆ ಓಡನಾಟದ ಬಗ್ಗೆ ಹೇಳಿದ್ದಾರೆ. ಗುರುಪ್‌ರಸಾದ್‌ಗೆ ಇದ್ದ ಅಹಂ ಬಗ್ಗೆ ಜಗ್ಗೇಶ್ ಬೇಸರ ಹೊರಹಾಕಿದ್ದರು.
ಗುರುಪ್ರಸಾದ್ ಓರ್ವ ಬ್ರಾಹ್ಮಣನಾಗಿದ್ದ. ಆದರೆ ಬ್ರಾಹ್ಮಣ್ಯ ಪಾಲಿಸುತ್ತಿರಲಿಲ್ಲ. ತಾಯಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದ. ದೇವರನ್ನು ನಂಬುತ್ತಿರಲಿಲ್ಲ. ಬಿಜೆಪಿ ವಿರೋಧಿಸುತ್ತಿದ್ದ. ಮರ್ಯಾದೆ ತೆಗೆಯಲು ಕಾದು ಕುಳಿತಿರುತ್ತಿದ್ದ. ಕಾಂಟರ್‌ವರ್ಸಿ ಎಳೆದುಕೊಳ್ಳುತ್ತಿದ್ದ. ಮದ್ಯದ ಬಾಟಲಿಯನ್ನೇ ಗಿಫ್ಟ್ ಆಗಿ ಕೊಡಲು ಕೇಳುತ್ತಿದ್ದ. ಮಿತಿಮೀರಿ ಕುಡಿತದ ದಾಸನಾಗಿದ್ದ. ಮಿತಿಮೀರಿ ಸಾಲವೂ ಮಾಡಿದ್ದ. ತಪ್ಪು ತಿದ್ದಿಕೊಳ್ಳಲು ಹೇಳಿದರೆ, ನಾನು ಮಾಡಿದ್ದೇ ಸರಿ ಎನ್ನುತ್ತಿದ್ದ. ಹೀಗೆ ಹಲವು ವಿಷಯಗಳ ಬಗ್ಗೆ ಜಗ್ಗೇಶ್ ಮಾತನಾಡಿದ್ದರು.
ಈ ಬಗ್ಗೆ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಬೇಸರ ಹೊರಹಾಕಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಸಾವನ್ನಪ್ಪಿದ್ದು, ಅವರ ಸಾವಿನಲ್ಲೂ ಜಗ್ಗೇಶ್ ವಿಕೃತಿ ಮೆರೆದಿದ್ದಾರೆ. ಸಾವಿನ ಸಮಯದಲ್ಲಿ ಅವರ ಬಗ್ಗೆ ಹೀಗೆ ಕೆಳಮಟ್ಟದ ಟೀಕೆ ಮಾಡಿದ್ದು ಸರಿಯಲ್ಲವೆಂದು ಜಗದೀಶ್ ಎಂದು ಹೇಳಿದ್ದಾರೆ.
ವಾವ್.. ಜಗ್ಗೇಶ್.. ಸತ್ತ ವ್ಯಕ್ತಿ ಬಗ್ಗೆ ಎಂಥ ವಿಶ್ಲೇಷಕ ಕೃತಿಯನ್ನು ಕೊಟ್ಟೆ ಜಗ್ಗೇಶ್. ಸಾವಿನಿಂದ ವಿಕೃತಿ ಕಾಣಬಹುದು ಅಂತಾ ನಿನ್ನಿಂದ ಕಲಿಬೇಕಾಗಿದೆ ಜಗ್ಗೇಶ್. ನಿನ್ನ ಸಂಸ್ಕೃತಿ ಅದೇ ತರಹ ಇದೆಯೋ, ನಿನ್ನ ಮನಸ್ಸು ಅಷ್ಟು ವಿಕೃತವಾಗಿದೆಯೋ ನನಗಂತೂ ಗೊತ್ತಿಲ್ಲ. ಗುರುಪ್ರಸಾದ್‌ಗೆ ಕೆರೆತ ಇತ್ತಾ..? ಕಿವೂ ರಕ್ತ ಬರ್ತಾ ಇತ್ತಾ..? ವಾಟ್ ಎ ಮ್ಯಾನ್ ಮ್ಯಾನ್..? ನಿನ್ನನ್ನು ಯಾವ ಆ್ಯಂಗಲ್‌ನಿಂದ ಮನುಷ್ಯ ಎನ್ನಬೇಕು ಅಂತ ನನಗೆ ಗೊತ್ತಾಗ್ತಾ ಇಲ್ಲ ಎಂದಿದ್ದಾರೆ.
ಅಲ್ಲದೇ, ನಿನನ್ನು ನೀನು ರಾಯರಭಕ್ತ ಎಂದು ಹೇಳಿಕೊಳ್ಳುತ್ತೀಯ. ನಿನಗೆ ಡೈರೆಕ್ಟರ್ ಗುರುಪ್ರಸಾದ್ ಲೈಫ್ ಕೊಟ್ಟ. ಮಠ ಫಿಲ್ಮ್ ಮೂಲಕ ನಿನಗೆ ಲೈಫ್ ಕೊಟ್ಟ. ನಿನ್ನನ್ನು ಮರೆತಿದ್ದ ಜನಕ್ಕೆ ನಿನ್ನನ್ನು ನೆನಪಿಸಿಕೊಟ್ಟ. ನಿನ್ನ ಮತ್ತು ಅಶೋಕ್ ಮಧ್ಯೆ ಇರುವ ಡೀಲ್ ಬಗ್ಗೆ ನನಗೆ ಗೊತ್ತು. ಕಾಲಾಯ ತಸ್ಮಯೇ ನಮಃ. ಇವತ್ತು ಗುರುಪ್ರಸಾದ್ ಮನೆಗೆ ಹೋಗಿದ್ದ ಯಮ, ನಾಳೆ ಯಾರ ಮನೆ ಬಾಗಿಲಿಗಾದರೂ ಬರಬಹುದು ಎಂದು ಜಗದೀಶ್ ಹೇಳಿದ್ದಾರೆ.