Chanakya Neeti: ಚಾಣಕ್ಯರು ವಿವಾಹ, ಜೀವನ, ಶ್ರೀಮಂತಿಕೆ ಸೇರಿ, ಜೀವನ ನಡೆಸಲು ಮನುಷ್ಯನಿಗೆ ಇರಬೇಕಾದ ಜಾಣತನದ ಬಗ್ಗೆ ಹಲವು ವಿಚಾರಗಳನ್ನು ಹೇಳಿದ್ದಾರೆ. ಅದೇ ರೀತಿ, ತಂದೆ ತಾಯಿ ಮಕ್ಕಳ ವಿಷಯದಲ್ಲಿ ಏನೇನು ತಪ್ಪು ಮಾಡಬಾರದು ಅನ್ನೋ ಬಗ್ಗೆಯೂ ಹೇಳಿದ್ದಾರೆ ಆ ಬಗ್ಗೆ ತಿಳಿಯೋಣ ಬನ್ನಿ..
ಕದಿಯುವುದು, ಸುಳ್ಳು ಹೇಳುವುದು: ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಿದ್ದರೂ, ಬೇರೆಯವರ ವಸ್ತು ಕದಿಯುತ್ತಾರೆ ಎಂದು ಗೊತ್ತಿದ್ದರೂ, ಪೋಷಕರು ಸುಮ್ಮನಿದ್ದರೆ, ಅವರು ಜೀವನದ ದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂದರ್ಥ. ಮಕ್ಕಳು ಸುಳ್ಳು ಹೇಳಲು ಮತ್ತು ಕದಿಯಲು ಶುರು ಮಾಡಿದರೆ, ಆ ಬಗ್ಗೆ ಬೈದು ಅವರಿಗೆ ಬುದ್ಧಿ ಹೇಳಬೇಕು. ಅದು ಕೆಟ್ಟ ಕೆಲಸವೆಂದು ಅವರಿಗೆ ತಿಳಿ ಹೇಳಬೇಕು. ತಮಾಷೆಗೆ ಸುಳ್ಳು ಹೇಳಿದರೂ, ತಿಂಡಿಯನ್ನೇ ಕದ್ದರೂ ಅದು ತಪ್ಪು ಎನ್ನುವುದು ಅವರಿಗೆ ಮನವರಿಕೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಮಕ್ಕಳು, ಅದನ್ನೇ ಚಟವಾಗಿಸಿಕೊಳ್ಳುತ್ತಾರೆ. ಇದರಿಂದ ಅವರ ಭವಿಷ್ಯ ಹಾಳಾಗುತ್ತದೆ.
ಹಿರಿಯರಲ್ಲಿ ಅಗೌರವ ತೋರುವುದು: ಪುಟ್ಟ ಮಕ್ಕಳಿಂದಲೇ ಹಿರಿಯರಿಗೆ ಗೌರವ ನೀಡಬೇಕು ಎಂದು ಮಕ್ಕಳಿಗೆ ಹೇಳಿ ಕೊಡಬೇಕು. ಮಕ್ಕಳು ಹಿರಿಯರನ್ನು ಗೌರವಿಸಬೇಕು ಎಂದರೆ, ಪೋಷಕರು ಕೂಡ ತಮ್ಮ ಹಿರಿಯರಿಗೆ ಗೌರವಿಸಬೇಕು. ಎದುರುತ್ತರ ನೀಡುವುದು, ಬೈಯ್ಯುವುದು, ಅವಮಾನಿಸುವುದು ಮಾಡಿದ್ದಲ್ಲಿ, ಮಕ್ಕಳು ಕೂಡ ಹಿರಿಯರಿಗೆ ಗೌರವ ನೀಡದೇ, ಎದುರುತ್ತರ ನೀಡಲು ಶುರು ಮಾಡುತ್ತಾರೆ. ಇದೇ ಬುದ್ಧಿ ಮುಂದೆ ನಿಮ್ಮ ಗೌರವವನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ.
ಕೆಟ್ಟ ಕೆಲಸ ಮಾಡುವುದು, ಬೈಯ್ಯುವುದು: ಮಕ್ಕಳಿಗೆ ಬುದ್ಧಿ ಇರುವುದಿಲ್ಲ. ಹಾಗಾಗಿ ಹಿರಿಯರು ಮಾಡಿದ್ದನ್ನೇ ಅವರು ಮಾಡುತ್ತಾನೆ. ಹಿರಿಯರು ಮಾತನಾಡಿದ್ದನ್ನೇ ಅವರೂ ಮಾತನಾಡುತ್ತಾರೆ. ಹಾಗಾಗಿ ಮನೆಯಲ್ಲಿ ಬೈಯ್ಯುವುದನ್ನು ನಿಲ್ಲಿಸಿಬಿಡಬೇಕು. ಅಲ್ಲದೇ, ಬೈಯ್ಯುವುದು ಕೆಟ್ಟ ಗುಣ ಅನ್ನೋದನ್ನು ಅವರಿಗೆ ಹೇಳಬೇಕು. ಏಕೆಂದರೆ, ಇತರರ ಎದುರು, ಕೆಟ್ಟ ಪದ ಬಳಸಿ, ಬೈಯ್ಯುವುದರಿಂದ, ನಿಮ್ಮ ಗೌರವಕ್ಕೇ ಧಕ್ಕೆ ಬರುತ್ತದೆ ಹೊರತು, ಮಕ್ಕಳನ್ನು ಯಾರೂ ದೂರುವುದಿಲ್ಲ.
ಇನ್ನು ಕೆಟ್ಟ ಕೆಲಸ ಮಾಡುವಾಗ, ಅದನ್ನು ನೀವು ತಡೆಯಬೇಕು. ಮಗು ಏನೂ ಗೊತ್ತಾಗುವುದಿಲ್ಲವೆಂದು ಸುಮ್ಮನಿರಬಾರದು. ಅದು ಮಗುವಾಗಿರುವ ಕಾರಣಕ್ಕೆ, ಬುದ್ಧಿ ಇಲ್ಲದೇ, ಕೆಟ್ಟ ಕೆಲಸ ಮಾಡಲು ಹೊರಟಿರುತ್‌ತದೆ. ಆದರೆ ಅದು ತಪ್ಪು ಎಂದು ನೀವು ತಿಳಿಸಿ ಹೇಳಿದಾಗಲೇ, ತನ್ನ ತಪ್ಪನ್ನು ಮಗು ತಿದ್ದಿಕೊಳ್ಳುತ್ತದೆ. ಉದಾಹರಣೆಗೆ, ಮನೆಗೆ ಬಂದ ಅತಿಥಿಗಳೊಂದಿಗೆ ಸರಿಯಾಗಿ ನಡೆದುಕೊಳ್ಳದಿರುವುದು, ಅವರ ವಸ್ತುವನ್ನು ಮುಟ್ಟುವುದು, ಹೋದಲ್ಲಿ ಸಿಕ್ಕ ಸಿಕ್ಕ ವಸ್ತುವನ್ನು ಹೇಳದೇ ಕೇಳದೇ ತೆಗೆದುಕೊಂಡು ಬರುವುದು, ಇತ್ಯಾದಿ ಉತ್ತಮಮ ಅಭ್ಯಾಸವಲ್ಲ.