Thursday, December 5, 2024

Latest Posts

ಕರ್ಮ ರಿಟರ್ನ್ಸ್ ಅನ್ನೋ ಪದದ ಅರ್ಥ ಎಷ್ಟು ಚಂದವಾಗಿ ವಿವರಿಸಿದ್ದಾರೆ ನೋಡಿ ಚಾಣಕ್ಯ

- Advertisement -

Spiritual: ಚಾಣಕ್ಯ ಎಂದರೆ, ಇಡೀ ಜೀವನ ಸಾರಾಂಶವನ್ನು ತಿಳಿದ ಬುದ್ಧಿವಂತ. ಹಾಾಗಾಗಿಯೇ ಚಾಣಕ್ಯ ನೀತಿ ಅರಿತವರು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ ಅಂತಾ ಹೇಳಲಾಗುತ್ತದೆ. ಚಾಣಕ್ಯರು ಮನುಷ್ಯನ ಜೀವನದ ಬಗ್ಗೆ ಅದೆಷ್ಟು ತಿಳುವಳಿಕೆ ಹೊಂದಿದ್ದರು ಎಂದರೆ, ಇತ್ತೀಚಿನ ದಿನಗಳಲ್ಲಿ ನಾವು ಹೇಳುವ ಕರ್ಮ ರಿಟರ್ನ್ಸ್ ಅನ್ನುವ ಪದದ ಅರ್ಥವನ್ನೂ ಸಹ ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.

ಕರ್ಮ ರಿಟರ್ನ್ಸ್ ಎಂದರೆ, ನಾವು ಮಾಡಿದ ಕರ್ಮ ನಮ್ಮನ್ನು ಕಾಡದೇ ಬಿಡುವುದಿಲ್ಲವೆಂದರ್ಥ. ಇದೇ ಕರ್ಮದಿಂದಲೇ, ನಾವು ನಮ್ಮ ಜೀವನದಲ್ಲಿ ಕಷ್ಟ ಸುಖಗಳನ್ನು ಅನುಭವಿಸುತ್ತೇವೆ ಅಂತಾರೆ ಚಾಣಕ್ಯರು. ನಾವು ಇನ್ನೊಬ್ಬರಿಗೆ ಮೋಸ ಮಾಡುವುದು, ಇನ್ನೊಬ್ಬರ ವಸ್ತುವನ್ನು ಕದಿಯುವುದು. ಇನ್ನೊಬ್ಬರಿಗೆ ಹಿಂಸೆ ಕೊಡುವುದು, ಇನ್ನೊಬ್ಬರ ಸಂಬಂಧವನ್ನು ಹಾಳು ಮಾಡುವುದು, ಹೀಗೆ ಇತ್ಯಾದಿ ಕೆಟ್ಟ ಕೆಲಸಗಳೇ ನಮ್ಮ ಕೆಟ್ಟ ಕರ್ಮಗಳಾಗಿ ಕಾಡುತ್ತದೆ.

ಅದೇ ರೀತಿ ನೀವು ಪುಣ್ಯದ ಕೆಲಸ ಮಾಡಿದರೆ, ಅದರಿಂದ ನಿಮಗೆ ಪುಣ್ಯವೇ ಸಿಗುತ್ತದೆ. ಇನ್ನೊಬ್ಬರಿಗೆ ಒಳಿತು ಬಯಸುವುದು, ಆದಷ್ಟು ಉತ್ತಮ ಕಾರ್ಯ ಮಾಡುವುದು, ಕಷ್ಟದಲ್ಲಿ ಇರುವವರಿಗೆ ಸ್ಪಂದಿಸುವುದು. ಇತ್ಯಾದಿ ಕೆಲಸಗಳು ನಿಮಗೆ ಸಾಕಷ್ಟು ಸುಖ ನೀಡದಿದ್ದರೂ, ಕಷ್ಟಗಳನ್ನಂತೂ ನೀಡುವುದಿಲ್ಲ.

ಇನ್ನು ಕಷ್ಟದಲ್ಲಿ ಇರುವಾಗ, ಮನುಷ್ಯನಿಗೆ ಸಂಬಂಧ, ದೇವರು ಎಲ್ಲರೂ ನೆನಪಿನಲ್ಲಿರುತ್ತಾರೆ. ಆದರೆ ಸುಖದ ಸುಪ್ಪತ್ತಿಗೆಯಲ್ಲಿ ಕುಳಿತಾಗ, ಸಂಬಂಧ, ದೇವರು ಎಲ್ಲವನ್ನೂ ಮರೆತು, ತನ್ನಿಂದವೇ ಎಲ್ಲವೂ, ತಾನೇ ಎಲ್ಲವನ್ನೂ ಸಾಧಿಸಿದ್ದು ಎಂದು ಮೆರೆಯುತ್ತಾನೆ. ಕೆಲವು ಮಕ್ಕಳು ಬೆಳೆದು ದೊಡ್ಡವರಾಗಿ ಕೆಲಸಕ್ಕೆ ಸೇರಿದ ಬಳಿಕ, ತಾನೇ ಕಲಿತು, ಕೆಲಸ ಗಿಟ್ಟಿಸಿಕೊಂಡು ಉದ್ಧಾರವಾಗಿದ್ದು ಎನ್ನವ ರೀತಿ ಆಡುತ್ತಾರೆ. ಆದರೆ ಅವರನ್ನು ಹೆತ್ತು, ಹೊತ್ತು, ಸಾಕಿ, ಓದಿಸಿ, ತಮ್ಮ ಆಸೆಗಳನ್ನೇಲ್ಲ ಬದಿಗಿಟ್ಟು, ಮಕ್ಕಳ ಆಸೆ ಪೂರ್ತಿಗೊಳಿಸಿದ ತಂದೆ ತಾಯಿಯ ನೆನಪು ಅವರಿಗೆ ಬರುವುದಿಲ್ಲ. ಇದನ್ನೇ ಸ್ವಾರ್ಥ ಗುಣ ಎನ್ನುವಂಥದ್ದು. ಈ ಸ್ವಾರ್ಥ ಗುಣ ಕೂಡ ಮುಂದೊಂದು ದಿನ ಕೆಟ್ಟ ಕರ್ಮವಾಗಿ ನಮ್ಮನ್ನು ಕಾಡುತ್ತದೆ.

ಹಾಗಾಗಿ ಮನುಷ್ಯ ತನ್ನನ್ನು ಹೆತ್ತ ತಂದೆ ತಾಯಿ, ವಿದ್ಯೆ ಕಲಿಸಿದ ಗುರು, ಕಷ್ಟ ಸುಖದಲ್ಲಿ ಭಾಗಿಯಾಗುವ, ಸಹೋದರ, ಸಹೋದರಿ, ತನ್ನನ್ನೇ ನಂಬಿ ಬಂದ ಜೀವನ ಸಂಗಾತಿ, ತಾನು ಹುಟ್ಟಿಸಿದ ಮಕ್ಕಳು ಎಲ್ಲರಲ್ಲೂ ಸದಾಕಾಲ ಪ್ರೀತಿ ಹೊಂದಿರಬೇಕು ಎನ್ನುತ್ತಾರೆ ಚಾಣಕ್ಯರು.

- Advertisement -

Latest Posts

Don't Miss