Thursday, November 7, 2024

Latest Posts

ಋಷಿ ಪುತ್ರ ರಾವಣ ರಾಕ್ಷಸನಾಗಲು ಕಾರಣವೇನು..? ಸಕಲ ಕಲಾ ವಲ್ಲಭನೇಕೆ ದುಷ್ಟನಾದ..?

- Advertisement -

Spiritual: ರಾಮಾಯಣದಲ್ಲಿ ರಾಮನ ಪಾತ್ರಕ್ಕೆ ಎಷ್ಟು ಮಹತ್ವವಿದೆಯೋ, ಅದೇ ರೀತಿ ರಾವಣನ ಪಾತ್ರಕ್ಕೂ ಮಹತ್ವವಿದೆ. ರಾವಣ ರಾಕ್ಷಸನಾಗಿದ್ದರೂ ಕೂಡ, ಸಕಲ ವಿದ್ಯಾ ಪಾರಂಗತನಾಗಿದ್ದ. ಶಸ್ತ್ರ ವಿದ್ಯೆಯಿಂದ ಹಿಡಿದು, ಶಾಸ್ತ್ರ ವಿದ್ಯೆಯವರೆಗೂ ಎಲ್ಲವನ್ನೂ ಬಲ್ಲವನಾಗಿದ್ದ. ಆದರೆ ಒಬ್ಬರ ಶಾಪದ ಕಾರಣ, ರಾಕ್ಷಸನಾದ. ಹಾಗಾದರೆ, ರಾವಣ ಬ್ರಾಹ್ಮಣನಾದರೂ ರಾಕ್ಷಸನಾಗಲು ಕಾರಣವೇನು..? ಯಾರ ಶಾಪದಿಂದ ಹೀಗಾದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ನಾರದ ಮುನಿಗಳ ಶಾಪದಿಂದ ರಾವಣ, ರಾಕ್ಷಸನಾದ. ಬ್ರಹ್ಮದೇವ, ಕುಬೇರ, ಇವರ ಶಾಪವೂ ಅವನ ಜೀವನ ಬಹುಬೇಗ ಅಂತ್ಯವಾಗಲು ಕಾರಣವಾಯಿತು. ವೈಶ್ರವ ಮುನಿ ಮತ್ತು ಕೈಕಸಿ ವಿವಾಹವಾಗಿ, ಜೀವನ ನಡೆಸುತ್ತಿದ್ದರು. ತಾವು ಓರ್ವ ಅತ್ಯುತ್ತಮ ಪುತ್ರನಿಗೆ ಜನ್ಮ ನೀಡಿ, ಅವನಲ್ಲಿ ಸಾತ್ವಿಕ ಗುಣ ತುಂಬಿ ಲೋಕಕಲ್ಯಾಣಕ್ಕೆ ಉಪಯುಕ್ತನಾಗುವ ರೀತಿ ಆತನನ್ನು ಬೆಳೆಸಬೇಕು ಎಂದು ಮುನಿಗಳ ಆಸೆಯಿತು.

ಆದರೆ ತಾಯಿ ಕೈಕಸಿ ತನ್ನ ಹಠದಿಂದ, ವೈಶ್ರವ ಮುನಿಗಳು ಎಷ್ಟೇ ಬೇಡವೆಂದರೂ, ಮುಸ್ಸಂಜೆ ಹೊತ್ತಿನಲ್‌ಲಿ ಸಂಭೋಗ ನಡೆಸಿದಳು. ಬಳಿಕ ತಾಯಿಯಾದಳು. ಈ ವೇಳೆ ನಾರದರು, ನಿನಗೆ ಹುಟ್ಟುವ ಮಗುವಿನಲ್ಲಿ ಸಾತ್ವಿಕ ಗುಣವಿರಲು ಸಾಧ್ಯವೇ ಇಲ್ಲ. ಆತ ರಾಕ್ಷಸನಾಗಿ ಕೆಟ್ಟ ಗುಣಗಳನ್ನೇ ಅಳವಡಿಸಿಕೊಳ್ಳುತ್ತಾನೆಂದು ಭವಿಷ್ಯ ನುಡಿದರು. ಹಾಗಾಗಿಯೇ ಇಂದಿನ ಕಾಲದಲ್ಲಿಯೂ, ಅಪ್ಪಿತಪ್ಪಿ ಮುಸ್ಸಂಜೆ ವೇಳೆ ಸಂಭೋಗ ಮಾಡಿ, ಮಕ್ಕಳನ್ನು ಹೆರಬಾರದು ಅಂತಾ ಹಿರಿಯರು ಬುದ್ಧಿ ಮಾತು ಹೇಳುತ್ತಾರೆ.

ರಾವಣ ತನ್ನ ಶಕ್ತಿ ಪ್ರದರ್ಶನ ಮಾಡಲು ಕೈಲಾಸ ಪರ್ವತವನ್ನು ಎತ್ತಲು ಪ್ರಯತ್ನಿಸಿದನು. ಈ ಕಾರಣದಿಂದ ಶಿವನಿಗೆ ಕೋಪ ಬಂದಿತ್ತು. ಆದರೆ ರಾವಣ ಶಿವನ ಪರಮಭಕ್ತನಾದ ಕಾರಣ, ಶಿವನಲ್ಲಿ ಕ್ಷಮೆ ಕೇಳಿದರು. ಶಿವ ತನ್ನ ಭಕ್ತರಲ್ಲಿ ಅಪಾರ ಪ್ರೀತಿ ಹೊಂದಿದ ಕಾರಣ, ರಾವಣಣನನ್ನು ಕ್ಷಮಿಸಿದನು. ಆದರೆ ಬ್ರಹ್ಮ, ನಿನ್ನ ಸರ್ವನಾಶ ಶ್ರೀರಾಮನಿಂದಾಗುವುದು ಸುನಿಶ್ಚಿತವೆಂದು ಹೇಳಿದರು. ಹಾಗಾಗಿಯೇ ರಾಮಾಯಣ ಯುದ್ಧದಲ್ಲಿ ರಾವಣನ ವಧೆ ಶ್ರೀರಾಮನಿಂದ ಆಯಿತು.

ಇಷ್ಟೇ ಅಲ್ಲದೇ, ಕುಬೇರನಿಗೆ ಸೇರಿದ ರಾಾಜ್ಯವನ್ನು, ಆಸ್ತಿ ಅಂತಸ್ತನ್ನು ಕಸಿಯುವ ಪ್ರಯತ್ನ ರಾವಣ ಮಾಡಿದ್ದ. ಆತನನ್ನು ತಿದ್ದಲು, ಕುಬೇರ ಎಷ್ಟೇ ಪ್ರಯತ್ನಿಸಿದರೂ, ರಾಾವಣ ಸ್ವರ್ಣ ಲಂಕೆಯನ್ನು ಕುಬೇರನಿಂದ ಕಸಿದು, ತನ್ನದಾಗಿಸಿಕೊಂಡ. ಹಾಗಾಗಿ ಕುಬೇರ, ರಾವಣನಿಗೆ ನಿನ್ನ ಅತೀಯಾದ ಅಹಂಕಾರವೇ ನಿನ್ನ ಅಂತ್ಯಕ್ಕೆ ಕಾರಣವಾಗುತ್ತದೆ ಎಂದು ಶಾಪ ನೀಡಿದನು.

ಇನ್ನು ತಾಯಿ ಕೈಕಸಿ ರಾಕ್ಷಸ ಕುಲದವಳಾದ ಕಾರಣ, ಮತ್ತು ದುಡುಕಿ ರಾವಣನನ್ನು ಹೆತ್ತ ಕಾರಣ, ಆತನನಲ್ಲಿ ದುಷ್ಟ ಗುಣಗಳು ತುಂಬಿಕೊಂಡಿದ್ದವು.

- Advertisement -

Latest Posts

Don't Miss