Friday, July 11, 2025

Latest Posts

ಲಾಲ್‌ಬಾಗ್ ಮೇಲೂ ವಕ್ಫ್ ಕರಿನೆರಳು: ಸುತ್ತಮುತ್ತಲಿನ ಪ್ರದೇಶ ತನ್ನದು ಎನ್ನುತ್ತಿದೆ ವಕ್ಫ್

- Advertisement -

Bengaluru: ವಿಜಯನಗರದಲ್ಲಿ ರೈತರ ಭೂಮಿ ತಮ್ಮದು ಎಂದು ಹಲವು ರೈತರಿಗೆ ವಕ್ಫ್ ನೋಟೀಸ್ ನೀಡಿತ್ತು. ಆದಾದ ಬಳಿಕ, ಹುಬ್ಬಳ್ಳಿ, ಧಾರವಾಡ ಸೇರಿ ಹಲವು ಜಿಲ್ಲೆಯ ರೈತರುಗಳಿಗೆ ವಕ್ಫ್ ನೋಟೀಸ್ ಕಳಿಸಿದ್ದು, ಪಹಣಿಯಲ್ಲಿ ಈ ಜಾಗ ವಕ್ಫ್‌ಗೆ ಸೇರಿದ್ದು ಅಂತ ಇದೆ ಎಂದು ವಾದಿಸಿತ್ತು.

ಬಳಿಕ ಮಠ, ದೇವಸ್ಥಾನ, ಶಾಲೆ, ಸಾರ್ವಜನಿಕ ಮೈದಾನ ಎಲ್ಲವೂ ತನ್ನದೇ ಅಂತಾ ವಕ್ಫ್ ಹೇಳಿತ್ತು. ಹೀಗಾಗಿಯೇ ವಿಜಯಪುರದಲ್ಲಿ ಮಠಾಧೀಶರು, ಬಿಜೆಪಿ ನಾಯಕರು ಸೇರಿ, ಹಲವರು ವಕ್ಫ್ ವಿರುದ್ಧ ಪ್ರತಿಭಟನಾ ರ್ಯಾಲಿಯನ್ನೇ ನಡೆಸಿತ್ತು.

ಇದೀಗ ವಕ್ಫ್ ಕರಿ ನೆರಳು ಬೆಂಗಳೂರಿನ ಲಾಲ್‌ಬಾಗ್ ಮೇಲೆ ಬಿದ್ದಿದೆ. ಬೆಂಗಳೂರಿನಲ್ಲಿರುವ ಪ್ರಸಿದ್ಧ ಉದ್ಯಾನವನ ಲಾಲ್‌ಬಾಗ್ ನಲ್ಲಿಯೂ ತನ್ನ ಹೆಸರಿನ ಭೂಮಿ ಇದೆ ಎಂದು ವಕ್ಫ್ ನೋಟೀಸ್ ಹೊರಡಿಸಿದೆ. ಲಾಲ್‌ಬಾಗ್ ಅಕ್ಕ ಪಕ್ಕದ ಕೆಲವು ಭೂಮಿಗಳು ತನ್ನದು ಅಂತಾ ವಕ್ಫ್ ಹೇಳಿದೆ. ಇನ್ನು ಲಾಲ್‌ಬಾಗ್ ಅಕ್ಕಪಕ್ಕ ಸ್ವಂತ ಮನೆ ಮಾಡಿ ವಾಸಿಸುತ್ತಿರುವ ಸ್ಥಳೀಯರಿಗೆ ಈ ವಕ್ಫ್‌ ನೋಟೀಸ್ ತಲೆನೋವಾಗಿ ಪರಿಣಮಿಸಿದೆ.

- Advertisement -

Latest Posts

Don't Miss