Thursday, December 12, 2024

Latest Posts

ನಟಿ ಶಾಂಭವಿಯ 3 ವರ್ಷದ ಪುತ್ರನಿಗೆ ಬ್ಲಡ್ ಕ್ಯಾನ್ಸರ್: ಭಾವುಕ ಪೋಸ್ಟ್ ಶೇರ್ ಮಾಡಿದ ನಟಿ

- Advertisement -

Sandalwood news: ಅಮೃತಧಾರೆ ಸೇರಿ ಕನ್ನಡದ ಹಲವು ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದ ನಟಿ ಶಾಂಭವಿ ವೆಂಕಟೇಶ್ ಜೀವನದಲ್ಲಿ ನಡೆಯಬಾರದ ಘಟನೆ ನಡೆದಿದೆ. ಧಾರಾವಾಹಿಯಲ್ಲಿ ತಮ್ಮ ವಿಲನ್ ಲುಕ್‌ನಿಂದಲೇ, ಹಲವರ ಫೇವರಿಟ್ ಆಗಿರುವ ಈ ನಟಿಗೆ ವಿವಾಹವಾಗಿ ಮುದ್ದಾದ 3 ವರ್ಷದ ಅವಳಿ ಜವಳಿ ಮಕ್ಕಳಿದ್ದರು. ಒಂದು ಗಂಡು, ಒಂದು ಹೆಣ್ಣು. ಹೆಸರು ದುರ್ಗಾ ಮತ್ತು ದುಷ್ಯಂತ.

ಇಬ್ಬರು ಮಕ್ಕಳು, ಪತಿಯ ಜೊತೆ ಶಾಂಭವಿ ಸುಖವಾಗಿ, ಖುಷಿ ಖುಷಿಯಾಗಿ ಜೀವನ ಮಾಡುತ್ತಿರುವಾಗಲೇ, ಅವರ ಮಗ ದುಷ್ಯಂತ್‌ಗೆ ಬ್ಲಡ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಒಂದೂವರೆ ತಿಂಗಳ ಹಿಂದೆ ಈ ವಿಷಯ ಗೊತ್ತಾಗಿದೆ. ಈಗಾಗಲೇ ಟ್ರೀಟ್‌ಮೆಂಟ್ ಕೂಡ ನಡೆದಿದೆ. ಈ ಬಗ್ಗೆ ಶಾಂಭವಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿ, ಬೇಸರ ಹೊರಹಾಕಿದ್ದಾರೆ.

ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ “3rd stage ಬ್ಲಡ್ ಕ್ಯಾನ್ಸರ್” ಇರೋದು ಪತ್ತೆ ಆಯ್ತು. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋ ವರೆಗೆ ಪ್ರತಿ ಕ್ಷಣವೂ “ಇದು ಕ್ಯಾನ್ಸರ್ ಆಗಿರದೆ ಇರಲಿ” ಅಂತಾ ಪ್ರಾರ್ಥಿಸ್ತಾ ಇದ್ವಿ. ಹಣೆಯಲಿ ಬರೆದಿರೋದನ್ನ ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರೆಗಳೆಲ್ಲ ಯಾಕೆ ಅನ್ಸತ್ತೆ!!! ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದೀವಿ ಇವಾಗ. ಬೇರೆ ಆಪ್ಷನ್ ಆದ್ರೂ ಏನಿದೆ?? ಇದು 95% curable ಅಂತಾ doctors ಭರವಸೆ ಕೊಟ್ಟಿದ್ದಾರೆ. ಆದ್ರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ. “ನಿನಗ ಹುಷಾರಿಲ್ಲ ಮಗನೇ, ತುಂಬಾ ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ” ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡ್ತಾ ಇರ್ತೀನಿ ಎಂದು ಶಾಂಭವಿ ಭಾವುಕ ಪೋಸ್ಟ್ ಹಾಕಿದ್ದಾರೆ.

ಇದಕ್ಕೂ ಮುನ್ನ ದುಷ್ಯಂತ ಆಟವಾಡುವ ವೀಡಿಯೋ ಮಾಡಿದ್ದು, ಆತನ ತಲೆಗೂದಲು ಎಷ್ಟು ಉದುರುತ್ತಿದೆ ಎಂಬುದನ್ನು ಶಾಂಭವಿ ತೋರಿಸಿದ್ದಾರೆ. ತಲೆಗೂದಲು ಕತ್ತರಿಸುವ ಸಮಯ ಬಂದಿದೆ ಎಂದು ಬೇಸರದ ಪೋಸ್ಟ್ ಹಾಕಿದ್ದಾರೆ.

- Advertisement -

Latest Posts

Don't Miss